ಜೈನಧರ್ಮ

ಜೈನಧರ್ಮವನ್ನು ಕುರಿತ ಈ ಲೇಖನದಲ್ಲಿ ಐದು ಅಧ್ಯಾಯಗಳಿವೆ.

	I	ಜೈನಧರ್ಮ ಸಮೀಕ್ಷೆ
	II	ಜೈನ ದರ್ಶನ
	III	ಜೈನಧರ್ಮದ ಇತಿಹಾಸ
	Iv	ಜೈನ ಆಚಾರಗಳು
	V	ಜೈನ ಪುರಾಣ

I ಜೈನಧರ್ಮ ಸಮೀಕ್ಷೆ

	ಜೈನಧರ್ಮ ವಿಶ್ವದ ಅತ್ಯಂತ ಪ್ರಾಚೀನ ಧರ್ಮಗಳಲ್ಲೊಂದಾಗಿದೆ. ಜೈನ ಮತ್ತು ಜೈನೇತರ ಗ್ರಂಥಗಳು, ಶಿಲಾಲೇಖನಗಳು, ಪ್ರಾಚ್ಯ ವಸ್ತುಗಳು, ಸ್ಮಾರಕಗಳು, ಮೊಹೆಂಜೊದಾರೊ, ಹರಪ್ಪ-ಈ ಪ್ರಾಚೀನ ನಗರಗಳ ಅವಶೇಷಗಳಲ್ಲಿ ದೊರೆತ ಪ್ರತಿಮೆಗಳು ಮತ್ತು ಅವುಗಳ ಪೀಠದಲ್ಲಿ ಕೆತ್ತಿರುವ ಶಾಸನಗಳು ಇವೆಲ್ಲವೂ ಜೈನಧರ್ಮದ ಪ್ರಾಚೀನತೆಯನ್ನು ತಿಳಿಸುತ್ತವೆ.

	ಶ್ರೀಮದ್ಭಾಗವತದ ಐದನೆಯ ಸ್ಕಂದದ 2-6ನೆಯ ಅಧ್ಯಾಯಗಳಲ್ಲಿ ಜೈನರ ಪ್ರಥಮ ತೀರ್ಥಂಕರ ವೃಷಭಸ್ವಾಮಿಯನ್ನು ಕುರಿತ ಈ ಮಾತು ಬಂದಿದೆ : ಮನುಷ್ಯರ ಸಂಖ್ಯೆ ವೃದ್ಧಿಯಾಗದಿದ್ದಾಗ ಬ್ರಹ್ಮ ಸ್ವಾಯಂಭೂ ಮನು ಮತ್ತು ಸತ್ಯರೂಪ ಎಂಬ ದಂಪತಿಗಳನ್ನು ಉತ್ಪನ್ನ ಮಾಡಿದ. ಇವರಿಗೆ ಪ್ರಿಯವ್ರತ ಎಂಬ ಮಗ ಜನಿಸಿದ. ಪ್ರಿಯವ್ರತನ ಮಗ ಅಗ್ನೀಧ್ರನ ಮನೆಯಲ್ಲಿ ನಾಭಿ ಜನ್ಮವೆತ್ತಿದ. ನಾಭಿ ಮರುದೇವಿಯನ್ನು ಮದುವೆಯಾದ. ಇವರ ಮಗನೇ ವೃಷಭಸ್ವಾಮಿ. ವೃಷಭನಿಗೆ ಇಂದ್ರ ಕೊಟ್ಟ ಜಯಂತಿ ಎಂಬ ಸ್ತ್ರೀಯ ಹೊಟ್ಟೆಯಲ್ಲಿ ನೂರು ಜನ ಮಕ್ಕಳು ಜನಿಸಿದರು. ಇವರಲ್ಲಿ ಭರತ ಹಿರಿಯ. ಭರತನಿಗೆ ರಾಜ್ಯವನ್ನು ಒಪ್ಪಿಸಿ ವೃಷಭ ಸಂನ್ಯಾಸವನ್ನು ಸ್ವೀಕರಿಸಿದ. ಆತ ಆಗ ದಿಂಗಬರನಾಗಿದ್ದ. ಆಗ ಅವನ ಬಳಿ ದೇಹವನ್ನುಳಿದು ಬೇರೇನೂ ಇರಲಿಲ್ಲ. ಆತ ಮೌನವಾಗಿರುತ್ತಿದ್ದ. ತನ್ನ ಶರೀರದ ಆಗುಹೋಗುಗಳ ಕಡೆಗೆ ಆತ ಲಕ್ಷ್ಯ ಕೊಡುತ್ತಿರಲಿಲ್ಲ ಅಹಂಕಾರ ಮಮಕಾರಗಳನ್ನು ತ್ಯಜಿಸಿ ಏಕಾಂಗಿಯಾಗಿ ಸಂಚರಿಸುತ್ತಿದ್ದ. ಹೀಗೆ ಕೈವಲ್ಯಪತಿ ಭಗವಾನ್ ವೃಷಭದೇವ ನಿರಂತರ ಪರಮಾನಂದವನ್ನನುಭವಿಸುತ್ತ ಧರ್ಮಪ್ರಚಾರ ಮಾಡುತ್ತಿದ್ದ.

	ಈ ವೃಷಭಸ್ವಾಮಿ, ನಾಭಿ, ಮರುದೇವಿ, ಭರತ ಇವರ ಸಂಗತಿಗಳು ಯಜುರ್ವೇದ, ಕೂರ್ಮಪುರಾಣ, ಮಾರ್ಕಂಡೇಯ ಪುರಾಣ ಮೊದಲಾದುವುಗಳಲ್ಲಿ ಬರುತ್ತವೆ.

	ಮೇಜರ್ ಜನರಲ್ ಫರ್‍ಲಾಂಗ್ ಎಂಬಾತ ಧರ್ಮಗಳ ತೋಲನೆಗೆ ಮೀಸಲಾದ ತನ್ನ ಗ್ರಂಥದಲ್ಲಿ ಜೈನಧರ್ಮ ಅತ್ಯಂತ ಸುಸಂಘಟಿತವಾದ ಪ್ರಾಚೀನಧರ್ಮ ಕ್ರಿ.ಪೂ. 800-900 ವರ್ಷಗಳ ಹಿಂದೆ ಆಗಿಹೋದ 23ನೆಯ ತೀರ್ಥಂಕರ ಪಾಶ್ರ್ವನಾಥನಿಗಿಂತ ಮೊದಲೇ ಜೈನರ 22 ಮಂದಿ ತೀರ್ಥಂಕರರು ಆಗಿಹೋಗಿದ್ದರೆ. ಜೈನಧರ್ಮದ ಆದಿಯನ್ನು ತಿಳಿಯುವುದು ಸಾಧ್ಯವಿಲ್ಲ ಎಂದು ಹೇಳಿದ್ದಾನೆ.

	ಸಿಂಧೂನದೀ ಕೊಳ್ಳದ ಪ್ರಾಕ್‍ಶೋಧನೆಯಲ್ಲಿ ನುರಿತ ಶ್ರೀರಾಮ ಪ್ರಸಾಧ ಚಂದಾ ಅವರು ವೃಷಭ ಲಾಂಛನವುಳ್ಳ ಮೊದಲನೆಯ ತೀರ್ಥಂಕರನ ಪ್ರತಿಮೆ ಸಿಂಧೂನದಿಯ ಮೈದಾನದಲ್ಲಿ ದೊರೆತಿರುವುದು ಜೈನಧರ್ಮದ ಪ್ರಾಚೀನತೆಗೆ ಕುರುಹಾಗಿದೆ ಎಂದು ಹೇಳಿದ್ದಾನೆ. ಇದೇ ರೀತಿಯಲ್ಲಿ ಬೌದ್ಧ ಗ್ರಂಥಗಳಲ್ಲಿಯೂ ಎಸ್. ರಾಧಾಕೃಷ್ಣನ್ ಅವರ ಇಂಡಿಯನ್ ಫಿಲಾಸಫಿ ಎಂಬ ಗ್ರಂಥದಲ್ಲಿಯೂ ಲೋಕಮಾನ್ಯ ಬಾಲಗಂಗಾಧರ ತಿಲಕರ ಸಂಪಾದಕತ್ವದಲ್ಲಿ ಹೊರಡುತ್ತಿದ್ದ ಕೇಸು ಪತ್ರಿಕೆಯಲ್ಲಿಯೂ ಜೈನಧರ್ಮ ಬಹು ಪ್ರಾಚೀನ ಧರ್ಮವೆಂದೂ ಮೊದಲನೆಯ ತೀರ್ಥಂಕರ ವೃಷಭನಾಥ ಜೈನಧರ್ಮದ ಸ್ಥಾಪಕನೆಂದೂ ತಿಳಿಸಲಾಗಿದೆ.

	ಯುಗದ ಕಲ್ಪನೆ : ಜೈನರು ಒಂದು ಯುಗವನ್ನು ಎರಡು ಭಾಗ ಮಾಡಿ ಉತ್ಸರ್ಪಿಣಿ (ಉನ್ನತಿಯ ಕಾಲ), ಅವಸರ್ಪಿಣಿ (ಅವನತಿಯ ಕಾಲ) ಎಂದು ಕರೆದಿದ್ದಾರೆ. ಈಗ ಅವಸರ್ಪಿಣಿಯ ಕಾಲ ನಡೆಯುತ್ತಿದೆ. ಈ ಯುಗವನ್ನು ಆರು ಉಪಭಾಗಗಳಾಗಿ ವಿಂಗಡಿಸಲಾಗಿದೆ : 1 ಸುಷಮ-ಸುಷಮ (ಅತಿಸುಖ), 2 ಸುಷಮ (ಸುಖ), 3. ಸುಷಮ-ದುಷಮ (ದುಃಖ), 4. ದಷಮ-ಸುಷಮ (ದುಃಖ-ಸುಖ) 5. ದುಷಮ (ದುಃಖ) 6 ದುಷಮ-ದುಷಮ (ಅತಿದುಃಖ), ಮೊದಲನೆಯ ಮೂರು ಅವಸ್ಥೆಗಳಲ್ಲಿ ಭೋಗಭೂಮಿಯ ಲಕ್ಷಣಗಳಿರುತ್ತವೆ. ಅಂದರೆ ಅಲ್ಲಿ ಕಾಯಕವಿಲ್ಲ. ದಶವಿಧ ಕಲ್ಪವೃಕ್ಷಗಳ ಸಹಾಯದಿಂದ ಜನ ತಮ್ಮ ಅಭೀಷ್ಟಗಳನ್ನು ಪಡೆಯುತ್ತಾರೆ. ಕೊನೆಯ ಮೂರು ಅವಸ್ಥೆಗಳು ಕರ್ಮ ಭೂಮಿ ಲಕ್ಷಣಗಳನ್ನು ಹೊಂದಿರುತ್ತದೆ. ಅಂದರೆ ಜನ ಕಾಯಕ ಮಾಡಿ ತಮ್ಮ ದುಡಿಮೆಯಿಂದ ಜೀವಿಸಬೇಕಾಗುತ್ತದೆ. ಈ ಚತುರ್ಥ ಕಾಲದಲ್ಲಿಯೇ 24 ಮಂದಿ ತೀರ್ಥಂಕರರು, 12 ಮಂದಿ ಚಕ್ರವರ್ತಿಗಳು, 9 ಮಂದಿ ಬಲಭದ್ರರು, 9 ಮಂದಿ ನಾರಾಯಣರು, 9 ಮಂದಿ ಪ್ರತಿನಾರಾಯಣರು ಹೀಗೆ ತ್ರಿಷಷ್ಠಿ (63) ಶಲಾಕಾಪುರಷರು ಉದ್ಭವಿಸುವರು. ಈ ಚತುರ್ಥ ಕಾಲ ಪ್ರಥಮ ತೀರ್ಥಂಕರ ವೃಷಭಸ್ವಾಮಿಯ ನಿರ್ವಾಣದಂದು ಮುಗಿಯುತ್ತದೆ. ವೃಷಭಸ್ವಾಮಿ ಮೋಕ್ಷಕ್ಕೆ ಹೋದ ದಿನ ಶಿವರಾತ್ರಿ (ಜಿನರಾತ್ರಿ) ಅಂದರೆ ಮಾಘ ಬಹುಳ ಚತುರ್ದಶಿ, ಮಹಾವೀರಸ್ವಾಮಿ ಮೋಕ್ಷಕ್ಕೆ ಹೋದ ದಿನ ದೀಪಾವಳಿ-ಅಂದರೆ ಆಶ್ವಯುಜ ಬಹುಳ ಚತುರ್ದಶಿ, ಕ್ರಿ.ಪೂ. 527ನೆಯ ಸಂವತ್ಸರದಲ್ಲಿ ನಾಲ್ಕನೆಯ ಕಾಲ ಮುಗಿದು, ಐದನೆಯ ಕಾಲವಾದ ದುಷಮ ಪ್ರಾರಂಭವಾಯಿತು. ಈಗದು ನಡೆಯುತ್ತಿದೆ. ಇನ್ನು ಸುಮಾರು ನಲವತ್ತು ಸಾವಿರ ವರ್ಷಗಳ ಅನಂತರ ಅತಿ ದುಷಮ ಕಾಲ ಬಂದು ಹಿಂಸೆ ಪರಾಕಾಷ್ಠತೆಗೇರಿ ಮಹಾ ಪ್ರಳಯವಾಗುವುದು.

	ಇತಿಹಾಸ: ಗೌತಮ ಬುದ್ಧನ ಹಿರಿಯ ಸಮಕಾಲೀನನಾದ ಮಹಾವೀರಸ್ವಾಮಿಯ ಕಾಲದಿಂದ ಜೈನ ಸಾಮ್ರಾಜ್ಯದ ಇತಿಹಾಸ ಪ್ರಾರಂಭವಾಗಿದೆ. ಮಹಾವೀರಸ್ವಾಮಿಯ ತಂದೆ ಸಿದ್ಧಾರ್ಥ ಮಹಾರಾಜ ಭಾರತ ವರ್ಷದ ಮೊದಲನೆಯ ಗಣರಾಜ್ಯದ ಚುನಾಯಿತ ಅಧಿಪತಿಯಾಗಿದ್ದ. ಮಹಾವೀರನ ಕಾಲದಲ್ಲಿ 18 ಮಂದಿ ಗಣರಾಜರಿದ್ದರು. ಮಹಾವೀರನ ತರುವಾಯ ಜೈನಧರ್ಮದ ಪ್ರಭಾವ ಆಸೇತು ಹಿಮಾಚಲಪರ್ಯಂತ ಸಾವಿರಾರು ವರ್ಷಗಳವರೆಗೆ ಮುಂದುವರಿಯಿತು. ಆಗಿನ ಕಾಲದ ರಾಜರಲ್ಲಿ ವೈಶಾಲಿಯ ರಾಜನಾದ ಜೇಟಕ ಪ್ರಖ್ಯಾತನಾಗಿದ್ದ. ಆತನ ಮಗಳು ತ್ರಿಶಲಾದೇವಿಯೇ ಮಹಾವೀರನ ತಾಯಿ. ಜೈನ ಸಾಹಿತ್ಯದಲ್ಲಿ ಕುಣಿಕನೆಂದೂ ಬೌದ್ಧ ಸಾಹಿತ್ಯದಲ್ಲಿ ಅಜಾತಶತ್ರುವೆಂದೂ ಪ್ರಸಿದ್ಧನಾದ ಮಗಧರಾಜ ಚೇಟಕನ ಮೊಮ್ಮಗ. ಜೈನ ಇತಿಹಾಸದಲ್ಲಿ ಬಿಂಬಸಾರನಿಗೆ ಶ್ರೇಣಿಕನೆಂಬ ಹೆಸರಿದೆ. ಈತನಿಗೆ ಚೇಟಕನ ಮಗಳಾದ ಚೇಳಿನಿಯನ್ನು ಕೊಟ್ಟು ಮದುವೆಯಾಗಿತ್ತು. ಇವರ ಮಗನೇ ಕುಣಿಕ ಅಥವಾ ಅಜಾತಶತ್ರು. ಶ್ರೇಣಿಕ ಕಿ. ಪೂ. 601-552ರವರೆಗೆ ರಾಜ್ಯವಾಳಿದ. ಅನಂತರ ನವನಂದರು ಬಹುಕಾಲ ರಾಜ್ಯವಾಳಿದರು. ಕ್ರಿ.ಪೂ. 320ರಲ್ಲಿ ಚಂದ್ರಗುಪ್ತ ಮೌರ್ಯ ಭಾರತದ ಸಮ್ರಾಟನಾಗಿದ್ದ. ಆತ ತನ್ನ ಗುರುವಾದ ಭದ್ರಬಾಹುಸ್ವಾಮಿಯೊಡನೆ ದಕ್ಷಿಣಕ್ಕೆ ಬಂದು ಈಗಿನ ಶ್ರವಣಬೆಳಗೊಳವಿರುವ ಸ್ಥಳದಲ್ಲಿ (ಆಗಿನ ಕಲ್ಬೊಪ್ಪಿನಲ್ಲಿ ಜೈನ ಸಂನ್ಯಾಸಿಯಾಗಿ ತಪ್ಪಸ್ಸು ಮಾಡಿದ. ಈತ ಕಟ್ಟಿಸಿದ ಚಂದ್ರಗುಪ್ತ ಬಸದಿ ಚಂದ್ರಗಿರಿಯಲ್ಲಿ (ಚಿಕ್ಕಬೆಟ್ಟ) ಈಗಲೂ ಇದೆ. ಈತನ ಮೊಮ್ಮಗನಾದ ಅಶೋಕ (ಕ್ರಿ.ಪೂ. 277) ಮೊದಲು ಜೈನಧರ್ಮೀಯನಾಗಿದ್ದು ಆಮೇಲೆ ಬೌದ್ಧಧರ್ಮೀಯನಾದ. ಅಶೋಕನ ಮೊಮ್ಮಗ ಸಂಪ್ರತಿ (ಕ್ರಿ.ಪೂ. 220) ಜೈನಧರ್ಮೀಯನಾಗಿದ್ದ. ಕಳಿಂಗ ರಾಜನಾದ ಖಾರವೇಲ (ಕ್ರಿ.ಪೂ. 174) ಜೈನಧರ್ಮೋದ್ಧಾರಕನೆಂದು ಹೆಸರು ಪಡೆದಿದ್ದ. 

	ದಕ್ಷಿಣ ಭಾರತದಲ್ಲಿ ಕ್ರಿ. ಪೂ. 6ನೆಯ ಶತಮಾನದಲ್ಲಿ ಜೀವಂಧರನೆಂಬ ಕ್ಷತ್ರಿಯ ಕನ್ನಡ ನಾಡಿನ ಒಡೆಯನಾಗಿದ್ದ. ಈ ನಾಡಿಗೆ ಆಗ ಹೇಮಾಂಗದವೆಂಬ ಹೆಸರಿತ್ತು. ಮಹಾವೀರಸ್ವಾಮಿಯ ಸಮವಸರಣ ದಕ್ಷಿಣಕ್ಕೆ ಬಂದಾಗಿ ಜೀವಂಧರ ದೀಕ್ಷೆ ಪಡೆದು ತಪಸ್ಸು ಮಾಡಿ ಮೋಕ್ಷವನ್ನು ಪಡೆದ. ಆಗ ದಕ್ಷಿಣದಲ್ಲಿ ತಮಿಳು, ತೆಲುಗು, ಕರ್ನಾಟಕ ದೇಶದಲ್ಲಿ ಜೈನಧರ್ಮ ನೆಲೆಸಿತ್ತು. ಜೈನರ 22ನೆಯ ತೀರ್ಥಂಕರನಾದ ನೇಮಿನಾಥ ದ್ವಾರಕೆಯ ನಾಶವನ್ನು ತಿಳಿದು ದಕ್ಷಿಣದಲ್ಲಿನ ಪಲ್ಲವ ದೇಶಕ್ಕೆ ಬಂದಿದ್ದ. ಪಲ್ಲವ ದೇಶ, ದಕ್ಷಿಣ ಮಧುರೆ ಇವು ತಮಿಳುನಾಡಿನಲ್ಲಿವೆ. ಚೋಳರು, ಪಾಂಡ್ಯರು ಜೈನಧರ್ಮದ ಆಶ್ರಯದಾತರಾಗಿದ್ದರು. ಉತ್ತರದಿಂದ ಬಂದ ಎಂಟು ಸಾವಿರ ಮಂದಿ ಜೈನಯತಿಗಳಿಗೆ ಈ ಪಾಂಡ್ಯರ ನಾಡು ಸ್ವಾಗತವಿತ್ತು ಭಕ್ತಿಕಾಣಿಕೆಯನ್ನು ಸಲ್ಲಿಸಿತೆಂದು ತಮಿಳಿನ ಮಹಾಗ್ರಂಥವಾದ ನಾಲಡಿಯಾರ್ ಸಂಬಂಧದ ಕಥೆ ತಿಳಿಸುತ್ತದೆ. ಪೂಜ್ಯಪಾದರ ಶಿಷ್ಯನಾದ ವಜ್ರನಂದಿ ಮಧುರೆಯಲ್ಲಿ ಒಂದು ಜೈನ ಸಂಘವನ್ನು ಸ್ಥಾಪಿಸಿದ. ಜೈನರ ಉನ್ನತ ಯುಗವೇ ತಮಿಳು ಸಾಹಿತ್ಯದ ಮಹಾಯುಗವೆಂದು ರೆವರೆಂಡ್ ಕಾಲ್ಡೆವೆಲ್ ಹೇಳಿದ್ದಾನೆ. ಕನ್ನಡ ನಾಡಿನಲ್ಲಿ ಗಂಗರು, ಹೊಯ್ಸಳರು, ರಾಷ್ಟ್ರಕೂಟರು, ಕಲಚೂರ್ಯರು, ಸೌದತ್ತಿಯ ರಟ್ಟರು, ಸಾಂತಾರರು, ಸೇನವಾನರು, ಚೆಂಗಾಳ್ವರು, ಕೊಂಗಾಳ್ವರು ಎಲ್ಲರೂ ಜೈನಧರ್ಮೀಯರಾಗಿದ್ದರು.

ಧರ್ಮದ ಸಾರ : ಜೈನರು ನಾಸ್ತಿಕರಲ್ಲ. ಪರಲೋಕ, ಪುನರ್ಜನ್ಮ, ಪುಣ್ಯ, ಪಾಪ, ಸ್ವರ್ಗ, ನರಕ, ಮೋಕ್ಷ ಇವುಗಳನ್ನು ನಂಬಿ ನಡೆಯುತ್ತ ದೇವ, ಗುರು, ಶಾಸ್ತ್ರ ಇವುಗಳಲ್ಲಿ ಶ್ರೆದ್ಧಯಿಟ್ಟು, ಸಮ್ಯಕ್ ದರ್ಶನ, ಸಮ್ಯಕ್ e್ಞÁನ, ಸಮ್ಯಕ್ ಚಾರಿತ್ರ, ಅರ್ಥಾತ್ ಭಕ್ತಿ, e್ಞÁನ, ವೈರಾಗ್ಯ ಈ ರತ್ನತ್ರಯವನ್ನು ಅವರು ಪ್ರತಿಪಾದಿಸುತ್ತ ಬಂದರು. ಜೈನ ಸಿದ್ಧಾಂತದ ಪ್ರಕಾರ ಲೋಕ ಅನಾದಿ, ಕರ್ಮ ಅನಾದಿ. ಅನಾದಿ ಕಾಲದಿಂದಲೂ ಸ್ವಭಾವತಃ ಶುದ್ಧವಾದ ಜೀವ ಕರ್ಮದೊಡನೆ ಸೇರಿ ದುಃಖಪಡುತ್ತಿದ್ದಾನೆ. ಜೀವ ಸ್ವಾಭಾವಿಕವಾಗಿ e್ಞÁನಮಯ, ಪರಿಶುದ್ಧ, ಇಂಥ ಶುದ್ಧಾತ್ಮ ಅನಾದಿಕಾಲದಿಂದಲೂ ಚಿನ್ನ ಕಲ್ಲಿನಲ್ಲಿ ಸೇರಿರುವಂತೆ ಕರ್ಮದೊಂದಿಗೆ ಸೇರಿ ಬದ್ಧಾತ್ಮನಾಗಿರುತ್ತಾನೆ. ತಪಸ್ಸು, ಸಂಯಮ, ತ್ಯಾಗ ಇವುಗಳಿಂದ ಆತ್ಮಶಕ್ತಿಯನ್ನು ಹೆಚ್ಚಿಸಿಕೊಂಡು e್ಞÁನಚಕ್ಷುಸ್ಸಿನಿಂದ ಆತ್ಮನನ್ನು ಶರೀರದಿಂದ ಬೇರೆ ಮಾಡಿ ನೋಡಿದಲ್ಲಿ ಶುದ್ಧಾತ್ಮನನ್ನು ಕಾಣಬಹುದು, ಬುದ್ಧಾತ್ಮನನ್ನು ಶುದ್ಧಾತ್ಮನನ್ನಾಗಿ ಪರಿವರ್ತಿಸಬಹುದು. ಕರ್ಮರಹಿತನಾದ ಶುದ್ಧಾತ್ಮನೇ ದೇವರು. ಮಾನವ ದೇವನಾಗಲು ಜಿನನಾಗಲು ಜೈನಸಿದ್ಧಾಂತ ಒಂದು ಶೀಲದ ನಿಚ್ಚಣಿಗೆಯನ್ನು ನಿರ್ಮಿಸಿದೆ. ಜೀವ (ಚೇತನ). ಅಜೀವ (ಜಡ) ಇವುಗಳ ಸಂಬಂಧವನ್ನು ಸಪ್ತತತ್ತ್ವಗಳಲ್ಲಿ ನಿರೂಪಿಸಲಾಗಿದೆ. ಆಸ್ರವವೆಂದರೆ ಆತ್ಮನ ಪರಿಣಾಮಕ್ಕನುಸಾರವಾಗಿ ಕರ್ಮಾಣುಗಳ ಬರುವಿಕೆ. ಬಂಧವೆಂದರೆ ಕರ್ಮಾಣುಗಳ ಬರುವಿಕೆ. ಬಂಧವೆಂದರೆ ಕರ್ಮಾಣುಗಳಿಂದ ಆತ್ಮ ಬಂಧಿತನಾಗುವುದು. ಸಂವರವೆಂದರೆ ತಪಸ್ಸು ಮೊದಲಾದವುಗಳಿಂದ, ಬರುವ ಕರ್ಮವನ್ನು ತಡೆಗಟ್ಟುವುದು ನಿರ್ಜರ ಎಂದರೆ ತಪಸ್ಸಿನಿಂದ, ಇರುವ ಕರ್ಮವನ್ನು ಸುಡುವುದು. ಮೋಕ್ಷವೆಂದರೆ ಬರುವ ಕರ್ಮ ನಿಂತು ಇರುವ ಕರ್ಮ ನಾಶವಾಗಿ ಆತ್ಮ ಪರಿಶುದ್ಧನಾಗಿ ಸ್ವ-ರೂಪವನ್ನು ಪಡೆಯುವುದು.

	ಜೈನ ಸಿದ್ಧಾಂತದಲ್ಲಿ ಷಡ್‍ದ್ರವ್ಯಗಳ ಪ್ರಸ್ತಾಪವಿದೆ : ಜೀವ ಪುದ್ಗಲ, ಧರ್ಮ, ಅಧರ್ಮ, ಕಾಲ ಮತ್ತು ಆಕಾಶ ಎಂಬ ಧರ್ಮ ದ್ರವ್ಯಗಳ ಮತ್ತು ಅಧರ್ಮ ದ್ರವ್ಯಗಳ ಪ್ರತಿಪಾದನೆ ಜೈನಸಿದ್ಧಾಂತದ ವೈಶಿಷ್ಟ್ಯವಾಗಿದೆ. ಈ ಷಡ್ ದ್ರವ್ಯಗಳಲ್ಲಿ ಕಾಲದ್ರವ್ಯವನ್ನು ಬಿಟ್ಟು ಉಳಿದ ಐದು ದ್ರವ್ಯಗಳು ಅಸ್ತಿಕಾಯಗಳಾಗುತ್ತವೆ. ಅಸ್ತಿಕಾಯವೆಂದರೆ ಅಸ್ತಿತ್ವ ಮತ್ತು ಬಹುಪ್ರದೇಶ ವ್ಯಾಪಕತ್ವವುಳ್ಳ ದ್ರವ್ಯ.

	ಜೈನ ನ್ಯಾಯಶಾಸ್ತ್ರ : (ಸ್ಯಾದ್ವಾದ) : ಜೈನ ನ್ಯಾಯಶಾಸ್ತ್ರ ಏಕಾಂತವಾದವನ್ನು ಒಪ್ಪುವುದಿಲ್ಲ ಅನೇಕಾಂತವನ್ನು ಸಮರ್ಥಿಸುತ್ತದೆ. ಇದಕ್ಕೆ ಸಪ್ತಭಂಗಿ ನ್ಯಾಯವೆಂದೂ ಹೆಸರು. ತತ್ತ್ವದ ಅಥವಾ ಸತ್ಯದ ಸ್ವರೂಪವನ್ನು ತಿಳಿಯಲು ಏಕಾಂತವಾದ ಸಹಾಯಕವಾಗುವುದಿಲ್ಲ. ಬೇರೆಯವರ ಅಭಿಪ್ರಾಯಗಳಿಗೆ ಬೆಲೆಕೊಟ್ಟು. ಸತ್ಯ ಯಾವ ಕಡೆಯಿಂದ ಬಂದರೂ ಅದನ್ನು ಸ್ವೀಕರಿಸಬೇಕೆಂಬುದೇ ಜೈನ ನ್ಯಾಯವಾದ. ಇದಕ್ಕೆ ಸ್ಯಾದ್ವಾದವೆಂದೂ ಹೆಸರು. ಒಂದು ವಸ್ತುವಿನ ಯಥಾರ್ಥ ಸ್ವರೂಪವನ್ನು ತಿಳಿಯಬೇಕಾದರೆ ಏಳು ಪ್ರಕಾರ ವಿಚಾರ ಮಾಡಬೇಕು. ಇದೇ ಸಪ್ತಭಂಗಿ. ಉದಾಹರಣೆಗೆ ಏಳು ಮುಂದಿ ಹುಟ್ಟುಕುರುಡರು ಒಂದು ಆನೆಯನ್ನು ವರ್ಣಿಸಿದ ವೃತ್ತಾಂತವನ್ನು ನೋಡಬಹುದು. ಅವರಲ್ಲಿ ಒಬ್ಬೊಬ್ಬನೂ ಹೇಳುವುದು ಸಂಪೂರ್ಣ ಸುಳ್ಳೂ ಅಲ್ಲ, ಸಂಪೂರ್ಣ ನಿಜವೂ ಅಲ್ಲ. ಒಂದೊಂದು ಪರ್ಯಾಯಾಪೇಕ್ಷೆಯಿಂದ ಅವರು ಆನೆಯ ರೂಪವನ್ನು ಗುರುತಿಸುತ್ತಾರೆ. ಈ ಎಲ್ಲವೂ ಒಟ್ಟಿಗೆ ಸೇರಿಸಿದಲ್ಲಿ ಆನೆಯ ಸ್ವರೂಪ ಏರ್ಪಡುತ್ತದೆ. ಹೀಗೆ ವಸ್ತುವಿನ ಸ್ವರೂಪವನ್ನು ಅನೇಕ ದೃಷ್ಟಿಕೋನಗಳಿಂದ ನೋಡಿ ಸತ್ಯವನ್ನು ಕಂಡುಹಿಡಿಯುವುದೇ ಸ್ಯಾದ್ವಾದ ನ್ಯಾಯದ ಗುರಿ.

	ಜೈನ ನೀತಿಶಾಸ್ತ್ರ : ಜೈನ ನೀತಿಶಾಸ್ತ್ರ ಅಹಿಂಸಾತತ್ತ್ವವನ್ನು ಅವಲಂಬಿಸಿದೆ. ತ್ರಿಕರಣಪೂರ್ವಕ ಅಹಿಂಸಾ ಧರ್ಮವನ್ನು ಪಾಲಿಸಬೇಕೆಂಬುದೇ ಜೈನ ನೀತಿಶಾಸ್ತ್ರದ ಗುರಿ, ಧರ್ಮಪ್ರಚಾರಣೆಯಲ್ಲಿಯೂ ಜೈನಸಮ್ರಾಟರಾರೂ ಯಾವ ಹಿಂಸಾಕೃತ್ಯವನ್ನೂ ಮಾಡಲಿಲ್ಲವೆಂಬುದು ಲೋಕೋತ್ತರವಾಗಿದೆ. ಭಾರತದ ಪ್ರಸಿದ್ಧ ಇತಿಹಾಸಕಾರನಾದ ವಿನ್ಸೆಂಟ್ ಸ್ಮಿತ್ ಇದನ್ನು ಸಮರ್ಥಿಸಿದ್ದಾನೆ. ಅಹಿಂಸಾವಾದಿಗಳಾದ ಜೈನರು ಎಲ್ಲ ಧರ್ಮೀಯರ ಧರ್ಮಸ್ವಾತಂತ್ರ್ಯವನ್ನೂ ಅಂಗೀಕರಿಸಿದರು. ಬಲಿಪೂಜೆ ಜೈನಧರ್ಮಕ್ಕೆ ವಿರುದ್ಧವಾಗಿದ್ದರೂ ಅದನ್ನು ತಪ್ಪಿಸಲು ಅವರು ಹಿಂಸಾಕೃತ್ಯಕ್ಕೆ ಕೈಹಾಕಲಿಲ್ಲ. ಬಲಿಪೂಜೆಗೆ ಮೀಸಲಾಗಿದ್ದ ದುರ್ಗಾಷ್ಟಮಿಯನ್ನು ಜೀವದಯಾಷ್ಟಮಿಯೆಂದು ಕರೆದು ಉಪವಾಸ ಜಾಗರಣೆಗಳಿಂದ ಜನತೆಯ ಮನಸ್ಸಿನ ಮೇಲೆ ಪ್ರಭಾವ ಬೀರಿದರೇ ಹೊರತು ಯಾರನ್ನೂ ದ್ವೇಷಿಸಿ ವ್ಯಾಜ್ಯ ವ್ಯವಹಾರ ಕೈಗೊಳ್ಳಲಿಲ್ಲ. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ-ಈ ಪಂಚಶೀಲಗಳ ಅಡಿಗಲ್ಲಿನ ಮೇಲೆ ಜೈನ ನೀತಿಶಾಸ್ತ್ರ ನಿಂತಿದೆ. ಗೃಹಸ್ಥ ನಡೆಸಿದಲ್ಲಿ ಅಣುವ್ರತವೆಂದೂ (ನೋಡಿ- ಅಣುವ್ರತ) ಮುನಿಗಳು ನಡೆಸಿದಲ್ಲಿ ಮಹಾವ್ರತವೆಂದೂ ಈ ಪಂಚಶೀಲಕ್ಕೆ ಹೆಸರು. ಅಣುವ್ರತಗಳನ್ನು ಕೈಗೊಂಡ ಗೃಹಸ್ಥನಿಗೆ ಕೆಲವು ವಿನಾಯಿತಿಗಳನ್ನು ಕೊಡಲಾಗಿದೆ. ಆತ ವಿರೋಧಿ ಹಿಂಸೆ, ಆರಂಭ ಹಿಂಸೆಗಳನ್ನು ಮಾಡಬಹುದು. ಅಂದರೆ ಶತ್ರುಗಳು ರಾಷ್ಟ್ರವನ್ನು ಮುತ್ತಿದರೆ ಗೃಹಸ್ಥನಾದವ ಯುದ್ದಮಾಡಿ ಅವರನ್ನು ಸದೆಬಡಿದು ಓಡಿಸಬೇಕು. ಇದೇ ವಿರೋಧಿ ಹಿಂಸೆ. ಗೃಹಸ್ಥ ಯಾವುದಾದರೂ ಕಾಯಕವನ್ನು (ಉದ್ಯೋಗ) ಅವಲಂಬಿಸಿ ದುಡಿಯಬೇಕು. ಆರಂಭವೆಂದರೆ ಕೃಷಿ (ವ್ಯವಸಾಯ), ಆಸಿ (ಯುದ್ಧಮಾಡುವುದು), ಮಸಿ (ಆಧ್ಯಯನ ಮತ್ತು ಬರೆವಣಿಗೆ) ವಾಣಿಜ್ಯ (ವ್ಯಾಪಾರ), ಕೈಗಾರಿಕೆ (ಕಸಬು), ಶಿಲ್ಪ (ಕಲೆ)-ಈ ಯಾವುದಾದರೊಂದು ಉದ್ಯೋಗವನ್ನು ಅವಲಂಬಿಸಿ ತನ್ನ ಜೀವನವನ್ನೂ ಮಾಡಿಕೊಂಡು ರಾಷ್ಟ್ರದ ಸಂಪತ್ತನ್ನೂ ಹೆಚ್ಚಿಸುವುದಕ್ಕೆ ನೆರವಾಗಬೇಕು. ಈ ಕಾಯಕಗಳಿಂದ ಪ್ರಾಣಿಹಿಂಸೆಯಾಗಬಹುದು. ಆದರೆ ಅದು ಸಂಕಲ್ಪ ಹಿಂಸೆಯಲ್ಲ. ಗೃಹಸ್ಥ ಅಪರಿಗ್ರಹವ್ರತವನ್ನು ಸ್ವೀಕರಿಸುವಾಗ ಪರಿಮಿತಿ ಪರಿಗ್ರಹವನ್ನು ಉಳ್ಳವನಾಗುತ್ತಾನೆ. ತನ್ನ ಪರಿಗ್ರಹಗಳನ್ನು, ಐಹಿಕ ಸಂಪತ್ತುಗಳನ್ನು ಒಂದು ಪರಿಮಿತಿಯಲ್ಲಿಟ್ಟುಕೊಳ್ಳುತ್ತಾನೆ. ಮುನಿಗಳು ಯಾವ ಹಿಂಸೆಯನ್ನೂ ಮಾಡುವುದಿಲ್ಲ. ಅವರಿಗೆ ಯಾವ ಪರಿಗ್ರಹವೂ ಇಲ್ಲ. ಅವರೇ ಮಹಾವ್ರತಿಗಳು.

	ಇದರಿಂದ ಜೈನಧರ್ಮ ಜನಪ್ರಿಯ ಧರ್ಮವಾಗಲು ಎಲ್ಲ ವಿಧದಲ್ಲಿಯೂ ಯೋಗ್ಯವಾಗಿದೆ. ಜನ ತಮ್ಮ ಶಕ್ತಿಗೆ ತಕ್ಕಂತೆ ಈ ಧರ್ಮದ ನಿಯಮಗಳನ್ನು ನಡೆಸಲು ಅವಕಾಶವಿದೆ. ಗೃಹಸ್ಥನಿಗೆ ಹನ್ನೊಂದು ನೆಲೆಗಳುಳ್ಳ ಈ ಹಂತಗಳ್ನು ಹೇಳಲಾಗಿದೆ : ದಾರ್ಶನಿಕ, ವ್ರತಿಕ, ಸಾಮಾಯಿಕ, ಪ್ರೋಷಧೋಪವಾಸಿ, ಸಚಿತ್ತ ವಿರತ, ದಿವಾಮೈಥುನತ್ಯಾಗಿ, ಅನುಮತಿವಿರತ, ಉದ್ದಿಷ್ಟಾಹಾರವಿರತ. ಈ ಹಂತಗಳಲ್ಲಿ ಎಲ್ಲಿನವರೆಗೆ ಹತ್ತಬಹುದೋ ಅಲ್ಲಿನವರೆಗೂ ಆತ ಏರಬಹುದು.

	ಪೂಜೆ : ಜೈನರು ಅರ್ಹಂತ, ಸಿದ್ಧ, ಆಚಾರ್ಯ, ಉಪಾಧ್ಯಾಯ, ಸರ್ವಸಾಧುಗಳೆಂಬ ಪಂಚಪರಮೇಷ್ಠಿಗಳಲ್ಲದೆ ಜಿನಧರ್ಮ, ಜಿನಾಗಮ, ಜಿನಚೈತ್ಯ, ಜಿನಚೈತ್ಯಾಲಯಗಳೂ ಸೇರಿದಂತೆ ನವದೇವತೆಗಳೆಂದು ಕರೆಯಲಾದ ಒಂದು ಪವಿತ್ರ ಪುಂಜವನ್ನು ಪೂಜಿಸುತ್ತಾರೆ. ಈ ಪೂಜೆಯಲ್ಲಿ ದ್ರವ್ಯಪೂಜೆ ಮತ್ತು ಭಾವಪೂಜೆ ಎಂಬ ಎರಡು ವಿಧ ಉಂಟು. ಗೃಹಸ್ಥರು, ಜಲ, ಗಂಧ, ಅಕ್ಷತೆ, ಪುಪ್ಪ, ಚರು, ದೀಪ, ಧೂಪ, ಫಲ-ಇವುಗಳಿಂದ ಮಾಡುವ ಪೂಜೆ ದ್ರವ್ಯ ಪೂಜೆ : ಮುನಿಗಳು ಈ ಯಾವ ವಸ್ತುಗಳ ಸಹಾಯವಿಲ್ಲದೆ ಬರಿಯ ಭಾವನೆಯಲ್ಲಿಯೇ ಭಗವಂತನನ್ನು ಪೂಜಿಸುತ್ತಾರೆ. ಇದು ಭಾವಪೂಜೆ. ಈ ಪೂಜೆ ಮಾಡುವ ಭಕ್ತನ ಆಧ್ಯಾತ್ಮಿಕ ಮಟ್ಟ ಬಹಳ ಉನ್ನತವಾಗಿರಬೇಕು.

	ಅಂದಿನ ವೈದಿಕ ಧರ್ಮದ ಅನುಸರಣೆಯಲ್ಲಿ ಕಂಡುಬರುತ್ತಿದ್ದ ಅನಾಚಾರಗಳನ್ನು ತಿದ್ದಲು ಹೊರಟ ಜೈನಧರ್ಮ ಜನತೆಗೆ ಅಹಿಂಸೆಯನ್ನು ಬೋಧಿಸಿತು. ಸದಾಚಾರದತ್ತ ಅದರ ಗಮನ ಸೆಳೆಯಿತು. ವೈರಾಗ್ಯವನ್ನು ಪ್ರತಿಪಾದಿಸಿತು. ಸಂಯಮಯುತ ಜೀವನವನ್ನು ಬೋಧಿಸಿತು.							(ಕೆ.ಎಸ್.ಡಿ.)
II ಜೈನದರ್ಶನ

	ಜಿನನಾದವನು ಕಂಡು ಬೋಧಿಸಿದುದೇ ಜೈನದರ್ಶನ. ಸ್ವಂತ ತಪೋಬಲದಿಂದ ತನ್ನ e್ಞÁನಾವರಣೀಯ ಮೊದಲಾದ ಎಂಟು ಕರ್ಮಗಳನ್ನು ಗೆದ್ದವನೇ ಜಿನ. ಯಾರು ತಮ್ಮ ಕರ್ಮವನ್ನು ಗೆಲ್ಲುವರೋ ಅವರು ಜಿನರಾಗುವರು. ಪರಮಾತ್ಮರಾಗುವರು. ಪ್ರತಿಯೊಂದು ಪ್ರಾಣಿಯೂ ಪರಮಾತ್ಮನಾಗುವುದು ಸಾಧ್ಯವಿದೆ. ಜಿನನಾದ ಮೇಲೆ ಪ್ರತಿಯೊಂದು ಜೀವಿಯೂ ಸರ್ವಜ್ಞನಾಗುವುದು, ವೀತರಾಗನೆನಿಸುವುದು. ಈ ಅವಸ್ಥೆಯಲ್ಲಿ ಪಡೆದ ದರ್ಶನ ಯಾವಾಗಲೂ ಪ್ರಾಮಾಣಿಕವಾಗಿರುತ್ತದೆ.

	ಪರಮಾತ್ಮನ ಸ್ವರೂಪ : ಜೈನದರ್ಶನ ದೇವನನ್ನು e್ಞÁನ, ಆನಂದ, ಶಕ್ತಿ ಇತ್ಯಾದಿ ಅನಂತರ ಗುಣಗಳ ಪುಂಜವೆನಿಸುವ ಪರಮ ಆತ್ಮ (ಪರಮಾತ್ಮ) ನೆಂದು ಸ್ವೀಕರಿಸುತ್ತದೆ. ಅವನ ಕಡೆಗೆ ಸೃಷ್ಟಿಯ ನಿಯಂತ್ರಣವನ್ನು ಒಪ್ಪಿಸಿಲ್ಲ. ಜೈನ ದರ್ಶನದ ಪ್ರಕಾರ ಪರಮಾತ್ಮ ಕ್ರೋಧ, ಮಾನ, ಮಾಯಾ, ಲೋಭ, ಹಾಸ್ಯ, ಭಯ, ವಿಸ್ಮಯ ಮೊದಲಾದ ವಿಕಾರಗಳಿಂದ ದೂರನಾಗಿರುತ್ತಾನೆ. ಇಂಥ ಪರಮಾತ್ಮ ಸರ್ವಜ್ಞನೂ ವೀತರಾಗನೂ ಆಗಿರುತ್ತಾನೆ. ಮೇಲಾಗಿ ಅವನು ಕೃತಕೃತ್ಯ. ಪರಿಪೂರ್ಣ. ಇದೇ ಆತ್ಮ ರಾಗಾದಿದೋಷಗಳಿಗೆ ಒಳಪಟ್ಟಾಗ ವ್ಯಕ್ತಿಯೆನಿಸಿ, ತನ್ನ ಕರ್ಮಕ್ಕನುಸರಿಸಿ ಆಕಾರ-ವಿಕಾರಗಳಿಗೆ ತುತ್ತಾಗುತ್ತಾನೆ.

	ಆತ್ಮತತ್ತ್ವದ ದೃಷ್ಟಿಯಿಂದ ಮಾನವ ಜೀವಿಯಲ್ಲಿಯೂ ಪರಮಾತ್ಮನಲ್ಲಿಯೂ ವಿಶೇಷ ಅಂತರವಿಲ್ಲ. ವ್ಯಕ್ತಿಗಳಲ್ಲಿಯ ಶುಭಶಕ್ತಿಗಳು ಸುಪ್ತಾವಸ್ಥೆಯಲ್ಲಿವೆ. ಪರಮಾತ್ಮನಲ್ಲಿರುವ ಶಕ್ತಿಗಳು ಪ್ರಕಟವಾಗಿರುತ್ತವೆ. ಪೂರ್ಣ ವಿಕಾಸಗೊಂಡಿರುತ್ತವೆ. ಆದ್ದರಿಂದ ಆ ಆತ್ಮ ಉಜ್ಜ್ವಲವಾಗಿರುತ್ತದೆ. ಪರಮಾತ್ಮ ಮುಕ್ತಾತ್ಮ. ಅವನು ಸೃಷ್ಟಿಯ ನಿರ್ಮಾಣಕನಲ್ಲ, ನಿಯಂತ್ರಕನೂ ಅಲ್ಲ. ವಿಧ್ವಂಸಕನೂ ಅಲ್ಲ. ಈ ವಿಚಾರಸ್ವಾತಂತ್ರ್ಯದಿಂದ ಜೈನದರ್ಶನ ಒಂದು ಸುಂಸಬದ್ದವಾದ ತತ್ತ್ವ ಪ್ರಣಾಲಿಯನ್ನು ರೂಪಿಸಿದೆ.

	ಮಾನವನ ಮುಕ್ತಿ : ಜೈನದರ್ಶನ ಪರಮಾತ್ಮಪದವನ್ನು ಪ್ರತಿಯೊಬ್ಬನೂ ಸಾಧನೆಯಿಂದ ಸಂಪಾದಿಸಬಹುದೆಂದು ಹೇಳುತ್ತದೆ. ಅದರಿಂದ ಪರಮಾತ್ಮನೆಂಬ ಒಬ್ಬ ವ್ಯಕ್ತಿಯನ್ನು ಅದು ಒಪ್ಪುವುದಿಲ್ಲ. ಆದರೆ ಜಗತ್ತಿನೊಳಗಿನ ಎಲ್ಲ ಜೀವಿಗಳೂ ಸನ್ಮಾರ್ಗದಿಂದ ನಡೆದು, ತಪಸ್ಸನ್ನು ಆಚರಿಸಿ ದೇವತ್ವವನ್ನು ಪಡೆಯಬಲ್ಲುವು. ಪರಿಶುದ್ಧ ಆತ್ಮನ ಅವಸ್ಥೆಯೇ-ಆತ್ಮನ ಸ್ವಸ್ವರೂಪಸ್ಥಿತಿಯೇ-ಮುಕ್ತಿ. ಪ್ರತಿಯೊಬ್ಬನೂ ಅದನ್ನು ಪಡೆಯಲಿಕ್ಕೆ ಸಮರ್ಥ.

	ತತ್ತ್ವದ ಲಕ್ಷಣ : ಸೃಷ್ಟಿ ಪ್ರಕೃತಿ ಧರ್ಮಕ್ಕೆ ಅನುಸರಿಸಿ ರೂಪುಗೊಂಡಿದೆ. ಅದರಲ್ಲಿ ಜೀವ, ಅಜೀವಗಳೆಂದು ಎರಡು ತತ್ತ್ವಗಳಿವೆ. ಈ ತತ್ತ್ವಗಳಲ್ಲಿ ಮೂರು ಸ್ವಭಾವಗಳು ಇರುತ್ತವೆ. ಅವನ್ನು ಉತ್ಪತ್ತಿ, ಸ್ಥಿತಿ, ವಿನಾಶಗಳೆಂದು ಹೇಳಲಾಗುತ್ತದೆ. ಯಾವ ತತ್ತ್ವವೂ ಯಾವಾಗಲೂ ಒಂದೇ ಸ್ವಭಾವದಲ್ಲಿ ನಿಲ್ಲಲಾರದು. ಅದಕ್ಕೆ ಬೇರೆ ಬೇರೆ ಅವಸ್ಥೆಗಳು ಪ್ರಾಪ್ತವಾಗುತ್ತವೆ. ತತ್ತ್ವದ ಲಕ್ಷಣ ಸತ್ ಎಂಬುದಾಗಿದೆ. ಅಭೇದ ದೃಷ್ಟಿಯಿಂದ ತತ್ತ್ವಕ್ಕೆ ಸತ್-ಸ್ವರೂಪ ವಸ್ತುಗಳನ್ನು ಹೇಳಲಡ್ಡಿಯಿಲ್ಲ. ಈ ಸತ್ತು ಸ್ವತಃ ಸಿದ್ದವಿದೆ. ಇದರ ಅಸ್ತಿತ್ವ ಅನ್ಯ ವಸ್ತುಗಳನ್ನು ಅವಲಂಬಿಸಿಲ್ಲ. ಈ ಕಾರಣದಿಂದಲೇ ತತ್ತ್ವಗಳು ಅನಾದಿ ನಿಧನವಾಗಿವೆ ಸ್ವಸಹಾಯಕವಾಗಿವೆ ವಿಕಲ್ಪರಹಿತವೂ ಆಗಿವೆ.

	ಒಂದೇ ತತ್ತ್ವವಸ್ತು, ಉತ್ಪತ್ತಿ, ಸ್ಥಿತಿ, ವ್ಯಯಗಳಿಂದ ಹೇಗೆ ಕೂಡಿರುವುದು-ಎಂಬ ಸಂಶಯ ಸಾಮಾನ್ಯರಿಗೆ ಬರುವುದು. ಸ್ವಲ್ಪ ವಿಚಾರಿಸಿದರೆ ಇದೇನು ಅಸಂಭವಲ್ಲ. ಸುವರ್ಣದ ಕುಂಭವನ್ನು ಕರಗಿಸಿ ಕೀರಿಟವನ್ನು ರಚಿಸಿದರೆ ಕುಂಭದ ಇರುವಿಕೆಯ ವ್ಯಯವಾದಂತಾಯಿತು. ಕೀರಿಟದ ಉತ್ಪತ್ತಿಯಾಯಿತು. ಸುವರ್ಣ ಸ್ಥಿತಿಯಾದಂತಾಯಿತು. ಹೀಗೆ ಒಂದೇ ಸುವರ್ಣ ಮೂರು ಅವಸ್ಥೆಗಳಲ್ಲಿಯೂ ಇರುವುದನ್ನು ಕಾಣುತ್ತೇವೆ. ಅಲ್ಲದೆ ಈ ಕುಂಭದ ಅಪೇಕ್ಷೆಯುಳ್ಳವನಿಗೆ ಕುಂಭ ಕರಗಿಸಿದುದಕ್ಕೆ ಅಸಮಾಧಾನವೂ ಕಿರೀಟವನ್ನು ಬಯಸುವವನಿಗೆ ಸಂತಸವೂ ಸುವರ್ಣಾಕಾಂಕ್ಷಿಗೆ ಯಾವ ರೂಪದಲ್ಲಿದ್ದರೂ ಸುವರ್ಣ ಇರುವುದೆಂಬ ಔದಾಸೀನ್ಯಭಾವವೂ ಹುಟ್ಟುವುದು. ಹೀಗೆ ಇನ್ನೂ ಹಲವು ಉದಾಹರಣೆಗಳನ್ನು ಕೊಟ್ಟು, ಆಚಾರ್ಯರು ತತ್ತ್ವ ಮೂರು ಗುಣಗಳಿಂದ ಕೂಡಿರುವುದೆಂದು ಸ್ಪಷ್ಟಪಡಿಸಿದ್ದಾರೆ.

	ಇನ್ನು ತತ್ತ್ವದ ಸ್ವರೂಪವನ್ನು ವಿವರಿಸುವಾಗ ಜೈನದಾರ್ಶನಿಕರು ಎರಡು ದೃಷ್ಟಿಕೋನಗಳನ್ನು ಇಟ್ಟುಕೊಂಡಿದ್ದಾರೆ. ಒಂದು ನಿಶ್ಚಯ ನಯ ದೃಷ್ಟಿ, ಇನ್ನೊಂದು ವ್ಯವಹಾರ ನಯದೃಷ್ಟಿ. ಈ ಎರಡೂ ದೃಷ್ಟಿಗಳಿಂದ ವಸ್ತುವಿನಲ್ಲಿರುವ ಗುಣ-ಪರ್ಯಾಯಗಳನ್ನು ವಿಚಾರಿಸಬೇಕಾಗುವುದು. ಏಕೆಂದರೆ ಗುಣ ದ್ರವ್ಯದ ಲಕ್ಷಣ. ಗುಣವನ್ನುಳಿದು ದ್ರವ್ಯ ಇರಲಾರದು. ಆದ್ದರಿಂದ ಈ ಗುಣವನ್ನು ವಿಮರ್ಶಿಸಲಿಕ್ಕೆ ನಿಶ್ಚಯ ನಯದೃಷ್ಟಿ ಬೇಕು. ಆದರೆ ದ್ರವ್ಯದ ಪರ್ಯಾಯಗಳ ವಿಚಾರಕ್ಕೆ ವ್ಯವಹಾರ ನಯದೃಷ್ಟಿ ಬೇಕು. ಮೂಲದ್ರವ್ಯ ಸಾಮಾನ್ಯವಾಗಿ ವಿಕಾರವಿಲ್ಲದುದಾದರೂ ಅನಂತ ಪರಿವರ್ತನಗಳಲ್ಲಿ ಆ ದ್ರವ್ಯ ಕಂಡುಬರುವುದು. ಈ ವಿವಿಧ ಕಾಣ್ಕೆಯೇ ಪರ್ಯಾಯವೆನಿಸುವುದು. ಪರ್ಯಾಯಗಳ ಸ್ವರೂಪವನ್ನು ವಿವರಿಸುವಾಗ ಇಟ್ಟುಕೊಂಡ ದೃಷ್ಟಿ ವ್ಯವಹಾರ ನಯದೃಷ್ಟಿ. ಇಲ್ಲಿ ವಿಷಯವನ್ನು ಸ್ಪಷ್ಟಪಡಿಸಲಿಕ್ಕೆಂದು ಸುವರ್ಣದ ಉದಾಹರಣೆಯನ್ನು ಕೊಡಬಹುದು. ಸುವರ್ಣ ಒಂದು ಮೂಲದ್ರವ್ಯ. ಅದರ ಗುಣ-ಸ್ವರೂಪಗಳನ್ನು ವಿವರಿಸುವಾಗ ಶುದ್ಧವಾದುದೂ ನಿಶ್ಚಯವಾದದ್ದೂ ಆದ ದೃಷ್ಟಿ ಬೇಕು. ಆದರೆ ಸುವರ್ಣದಿಂದ ನಿರ್ಮಿತವಾದ ವಿವಿಧ ಆಭರಣಗಳ ಗುಣ-ಸ್ವರೂಪಗಳನ್ನು ವಿವೇಚಿಸುವುದು ವ್ಯವಹಾರ ನಯದೃಷ್ಟಿ ಎನಿಸುವುದು. ಇದರಲ್ಲಿ ಸುವರ್ಣ ಮೂಲದ್ರವ್ಯವಾದರೂ ಆಭರಣಗಳು ಪರ್ಯಾಯವಸ್ತುಗಳು. ಹೀಗೆ ಆತ್ಮ ತತ್ತ್ವದ ವಿಷಯದಲ್ಲಿ ಮೂಲದ್ರವ್ಯದ ವಿಚಾರ ಹೇಳುವುದು ನಿಶ್ಚಯ ನಯ. ಆತ್ಮಕರ್ಮಗಳ ಸಂಯೋಗದಿಂದ ಉಂಟಾದ ಜೀವ ಪರ್ಯಾಯಗಳ ವಿಷಯವನ್ನು ವಿವರಿಸುವ ಕ್ರಮ ವ್ಯವಹಾರನಯ.

	ಶುದ್ಧಾತ್ಮನಲ್ಲಿ ಪರದ್ರವ್ಯದ ಸಂಯೋಗವಾಗುವುದರಿಂದ ಅಶುದ್ಧತೆ ಉಂಟಾಗುವುದು. ಈ ಅಶುದ್ಧಾವಸ್ಥೆಗಳೇ ಆತ್ಮನ ಪರ್ಯಾಯ ಸ್ವರೂಪಗಳೆನಿಸುವುವು. ಹೀಗೆ ಉಂಟಾದ ಪರ್ಯಾಯಗಳಿಂದ ಆತ್ಮನಲ್ಲಿ ಪ್ರಮತ್ತ, ಅಪ್ರಮತ್ತವೆಂದು ಎರಡು ವಿಭಾಗಗಳನ್ನು ಕಲ್ಪಿಸಬಹುದು. ಆದರೆ ಶುದ್ಧಾತ್ಮನಲ್ಲಿ ಇಂಥ ವಿಭಾಗಗಳಿಲ್ಲ. ಅವನು ಅಖಂಡe್ಞÁನಸ್ವರೂಪಿಯಾಗಿದ್ದಾನೆ. ಶುದ್ಧ ಸುವರ್ಣದಲ್ಲಿ ತರಗತಿಗಳಿಲ್ಲವೆಂಬುದನ್ನು ಗಮನಿಸಬೇಕು. ಅಶುದ್ಧ ಬಂಗಾರದಲ್ಲಿ ಮಾತ್ರ ಅಶುದ್ಧತೆಯಿಂದಾಗಿ ವಿವಿಧ ತರಗತಿಗಳಾಗುತ್ತವೆ.

	ಏಳು ತತ್ತ್ವಗಳು : ಜೈನದರ್ಶನ ಜೀವ, ಅಜೀವ, ಅಸ್ರವ, ಬಂಧ, ಸಂವರ, ನಿರ್ಜರಾ ಮತ್ತು ಮೋಕ್ಷಗಳೆಂದೂ ಏಳು ತತ್ತ್ವಗಳನ್ನು ಸ್ವೀಕರಿಸುತ್ತದೆ. ಜೈನ ದಾರ್ಶನಿಕರು ಕರ್ಮಮಲರಹಿತನಾದ ಶುದ್ಧಾತ್ಮನಿಗೇ ಆತ್ಮನೆಂದು ಸಂಬೋಧಿಸುವರು. ಕರ್ಮವನ್ನು ಕಟ್ಟಿಕೊಂಡು ಇಂದ್ರಿಯ, ಬಲ, ಆಯು, ಶ್ವಾಸೋಚ್ಛ್ವಾಸ ಎಂಬ ನಾಲ್ಕು ಪ್ರಾಣಗಳನ್ನು ಧರಿಸಿರುವ ಆತ್ಮನಿಗೆ ಜೀವವೆಂದು ಹೇಳುವರು. ಶುದ್ಧಾತ್ಮ ಚೈತನ್ಯಲಕ್ಷಣವುಳ್ಳವನಾಗಿದ್ದಾನೆ. ಈ ಆತ್ಮ ಅಮೂರ್ತ. ಶುಭಕರ್ಮಗಳ ಕರ್ತೃ ಅಲ್ಲದೆ ತನಗೆ ಪ್ರಾಪ್ತವಾದ ಶರೀರದ ಪ್ರಮಾಣವನ್ನು ಹೊಂದುವ ಸಾಮಥ್ರ್ಯವೂ ಆತನಲ್ಲಿರುತ್ತದೆ. ಕರ್ಮದಿಂದ ಮುಕ್ತನಾದಾಗ ಆತ ತನ್ನ ಸ್ವಾಭಾವಿಕ ಗುಣದಿಂದ ಮೇಲೆ ಮೇಲೆ-ಸಿದ್ಧಶಿಲೆಯವರೆಗೆ ಹೋಗುತ್ತಾನೆ. ಮೇಲಾಗಿ ಅತ್ಮ ಉಪಯೋಗಮಯನೂ ಆಗಿದ್ದಾನೆ. ಆತ್ಮನಿಗೆ ವರ್ಣ, ರಸ, ಗಂಧ, ಸ್ಪರ್ಶಗಳು ಇಲ್ಲದುದರಿಂದ ಅಮೂರ್ತನಾಗಿದ್ದಾನೆ. ಶುದ್ಧಭಾವಗಳಿಗೆ-ಅನಂತe್ಞÁನ, ದರ್ಶನ, ಸುಖ, ವೀರ್ಯಗಳಿಗೆ-ಕರ್ತೃವೂ ಆಗಿದ್ದಾನೆ. ಆತ್ಮನಲ್ಲಿ ಸೇರಿದ ಪುದ್ಗಲ ದ್ರವ್ಯಗಳಿಗೆ ಅನುಸಾರವಾಗಿ, ಜೈತನ್ಯದ ಪರಿಣಾಮಗಳು ಉಂಟಾಗುತ್ತವೆ. ಇದೂ ಆತ್ಮನ ಸ್ವಭಾವವೇ. ಆತ್ಮನಿಗೆ ಪುದ್ಗಲ ಕರ್ಮಾಣುಗಳ ಸಂಯೋಗವಾಗಲು, ಅದರಲ್ಲಿ ಪರಸ್ಪಂದನ ಉಂಟಾಗುವುದು. ಇದೇ ಭಾವಕರ್ಮ, ರಾಗ-ದ್ವೇಷ-ಮೋಹಾದಿಗಳೂ ಭಾವಕರ್ಮಗಳೆನಿಸುತ್ತವೆ. ಭಾವ ಕರ್ಮದ ಕರ್ತೃ ಆತ್ಮನೇ. ಆತ್ಮಪ್ರದೇಶ ಸ್ಪಂದನ ಹೊಂದುವ ಕಾಲಕ್ಕೆ ಕರ್ಮಾಣುಗಳು ಅಂಟಿಕೊಳ್ಳುವುವು. ಅಂಥ ಆತ್ಮನನ್ನು (ಆತ್ಮ+ಕರ್ಮ) ಜೀವವೆಂದು ಕರೆಯಲಾಗುತ್ತದೆ.

	ಆತ್ಮ ಭಾವ ಕರ್ಮಗಳ ಆಸ್ರವದಲ್ಲಿ ಸಮರ್ಥ; ಹಾಗೆಯೇ ಅವುಗಳ ಬಂಧನದಲ್ಲಿಯೂ ಶಕ್ತ. ಅದರಂತೆ ಭಾವಕರ್ಮಗಳ ಸಂವರ ಮಾಡಿಕೊಳ್ಳಲಿಕ್ಕೂ ಸಿದ್ಧ. ಅಲ್ಲದೆ ಭಾವಕರ್ಮಗಳನ್ನು ನಿರ್ಜರ (ಕ್ಷಯ), ಮೋಕ್ಷ (ತ್ಯಾಗ) ಮಾಡುವಲ್ಲಿಯೂ ಸಮರ್ಥ. ಆದುದರಿಂದ ಆತ್ಮ ಪ್ರಭುವೆನಿಸುತ್ತಾನೆ.

	ಜೀವ ಎಲ್ಲ ಕರ್ಮಗಳನ್ನು ಕಳೆದುಕೊಂಡ ತರುವಾಯ ಮೋಕ್ಷಾಂತ್ಯದವರೆಗೆ ಮೇಲೆ ಹೋಗುವನು. ಈ ಊಧ್ರ್ವಗಮನಕ್ಕೆ ಪೂರ್ವಸಂಸ್ಕಾರವೂ ಆತ್ಮನ ಸ್ವಭಾವವೂ ಕಾರಣವಾಗಿವೆ. ಅಲ್ಲದೆ ಕರ್ಮಬಂಧದ ನಾಳವೂ ಸರ್ವಸಂಗ ರಾಹಿತ್ಯವೂ ಸಹಾಯಕವಾಗಿರುವುವು. ಹೀಗೆ ಮೇಲಕ್ಕೇರಿದ ಆತ್ಮ ಸಿದ್ಧಶಿಲೆಯ ಮೇಲೆ ಶುದ್ಧಸ್ವರೂಪದಲ್ಲಿ ಹೋಗಿ ನಿಲ್ಲುತ್ತಾನೆ. ಅಲ್ಲಿ ಅನೇಕ ಮುಕ್ತಜೀವರು ವಾಸಿಸುವರು. ಅವರಲ್ಲಿ ಸ್ಪರ್ಧೆ ಈರ್ಷೆಗಳು ಇಲ್ಲ. ಅಗುರು ಲಘು ಗುಣಗಳಿಂದ ಕೂಡಿರುವುದರಿಂದ, ಒಂದೇ ಕೋಣೆಯಲ್ಲಿ ಹಲವು ದೀಪಗಳ ಪ್ರಕಾಶಗಳು ಯಾವ ಆತಂಕಗಳೂ ಇಲ್ಲದೆ ಸೇರಿರುವಂತೆ ಶುದ್ಧಾತ್ಮರು ಸಿದ್ದಶಿಲೆಯ ಮೇಲೆ ಒತ್ತಟ್ಟಿಗೆ ಇರುತ್ತಾರೆ. ಇಂಥ ಆತ್ಮಗಳಿಗೆ ಅನಂತರ ದರ್ಶನe್ಞÁನಗಳಿರುತ್ತವೆ. ಇವು ಪರಮ ಆತ್ಮಗಳು.

	ಜೀವದ ಗುಣಸ್ಥಾನಗಳು : ಇನ್ನೂ ಅಶುದ್ಧ ಆತ್ಮನಲ್ಲಿ-ಕರ್ಮಬಂಧನಕ್ಕೊಳಗಾದ ಆತ್ಮನಲ್ಲಿ-ಪುದ್ಗಲಾಣುಗಳು ಅಂಟಿದ ಆತ್ಮಪ್ರದೇಶದಲ್ಲಿ ಹದಿನಾಲ್ಕು ಗುಣಸ್ಥಾನಗಳನ್ನು ಜೈನದಾರ್ಶನಿಕರು ಕಲ್ಪಿಸಿದ್ದಾರೆ. ಈ ಗುಣಸ್ಥಾನಗಳು ದರ್ಶನಮೋಹನೀಯವೇ ಮೊದಲಾದ ಕರ್ಮಗಳ ಉದಯ, ಉಪಶಮ, ಕ್ಷಯ, ಕ್ಷಯೋಪಶಮ ಇತ್ಯಾದಿ ಅವಸ್ಥೆಗಳಿಂದ ಆತ್ಮನ ಮೇಲೆ ಆಗುವ ಪರಿಣಾಮಗಳಾಗಿವೆ. ಇಂಥ ಪರಿಣಾಮಗಳಲ್ಲಿ ಮೊದಲಿನ, ಕೆಳತರಗತಿಯ, ಆರು ಗುಣಸ್ಥಾನಗಳಲ್ಲಿ ಇರುವ ಆತ್ಮಗಳು ಪ್ರಮುತ್ತನೆನಿಸುವವು. ಮುಂದಿನ ಗುಣಸ್ಥಾನಗಳಲ್ಲಿ ಗಣನೀಯವಾದ ಆತ್ಮಗಳೆಲ್ಲವೂ ಅಪ್ರಮತ್ತ ಅವಸ್ಥೆಗಳಿರುವ ಆತ್ಮಗೆಳೆಲ್ಲವೂ ಸಂಸಾರೀ ಜೀವಗಳಾಗಿರುತ್ತವೆ. ಸಂಸಾರೀ ಜೀವಗಳಲ್ಲಿ ಗುಣಸ್ಥಾನದ ಅಪೇಕ್ಷೆಯಿಂದ ಹದಿನಾಲ್ಕು ಭೇದಗಳಾಗುತ್ತವೆ. ಇವುಗಳ ಅನಂತರ ಕ್ರಮದಿಂದ ಗುಣಸ್ಥಾನ ಹರಿತವಾದ ಮುಕ್ತ-ಸಿದ್ಧಾವಸ್ಥೆಯೊಂದು ಪ್ರಾಪ್ತವಾಗುತ್ತದೆ. ಅಲ್ಲಿ ಆತ್ಮ ಶುದ್ಧಾವಸ್ಥೆಯಲ್ಲಿರುತ್ತಾನೆ.

	ಭಾವಗಳು : ಆತ್ಮನಲ್ಲಿ ಪಾರಿಣಾಮಿತ, ಚೋದಯಿಕ, ಮಿಶ್ರ, ಕ್ಷಾಯಿಕ, ಔಪಶಮಿಕಗಳೆಂದು ಐದು ಭಾಗಗಳು ಇರುತ್ತವೆ. ಪಾರಿಣಾಮಿತ ಭಾವೋತ್ಪತ್ತಿಗೆ ಆತ್ಮನ ಸ್ವಭಾವವೇ ಕಾರಣ. ಕರ್ಮ ಪುದ್ಗಲದ ಅಪೇಕ್ಷೆ ಸ್ವಲ್ಪವೂ ಇದಕ್ಕೆ ಅಗತ್ಯವಿಲ್ಲ. ಅದೇ ಚೋದಯಿಕ ಭಾವದಲ್ಲಿ ಮಾತ್ರ ದ್ರವ್ಯ, ಕ್ಷೇತ್ರ, ಕಾಲಭಾವಗಳ ನಿಮಿತ್ತದಿಂದ ಕರ್ಮದ ಫಲವೂ ಪ್ರಾಪ್ತವಾಗುತ್ತದೆ. ಮಿಶ್ರ ಅವಸ್ಥೆಯ ಕರ್ಮ ಆತ್ಮನಿಂದ ತೊಲಗುತ್ತಲಿರುವ ಅವಸ್ಥೆ. ಇದರಲ್ಲಿ ಆತ್ಮನಿಗೆ ಅಂಟಿದ ಕರ್ಮಾಣುಗಳು ಇನ್ನೂ ಇರುತ್ತವೆ. ಅರಿವೆಗೆ ಹತ್ತಿದ ಎಣ್ಣೆಯ ಕಪ್ಪು ಕಲೆ ಒಂದೆರಡು ಸಲ ತೊಳೆದ ಮೇಲೂ ಹೇಗೆ ಉಳಿದಿರುವುದೋ ಹಾಗೆಯೇ ಈ ಮಿಶ್ರಾವಸ್ಥೆಯಲ್ಲಿ ಕರ್ಮಗಳು ಉಳಿದಿರುವವು. ಇದಕ್ಕೇನೇ ಕ್ಷಾಯೋಪಶಮಿಕ ಭಾವವೆಂದೂ ಹೇಳುವರು. ಆತ್ಮನಲ್ಲಿ ಕ್ಷಾಯಿಕ ಭಾವ ಉಂಟಾಗುವ ಅವಸ್ಥೆಯೆಂದರೆ ಕರ್ಮದಿಂದ ಸಂಪೂರ್ಣ ಬಿಡುಗಡೆಯನ್ನು ಹೊಂದುವ ಅವಸ್ಥೆ. ಈಗ ಆತ್ಮ ಅತ್ಯಂತ ಶುದ್ಧರೂಪದಲ್ಲಿ ಇರುತ್ತಾನೆ. ಮಳೆಗಾಲದ ಹೊಳೆಯ ನೀರನ್ನು ಒಂದು ಪಾತ್ರೆಯಲ್ಲಿ ಒಂದೆರಡು ದಿನ ತುಂಬಿಟ್ಟ ಮೇಲೆ ಮಣ್ಣಿನ ಕಣಗಳೆಲ್ಲ ತಳಕ್ಕೆ ಕೊಡುವವು. ಮೇಲಿನ ತಿಳಿನೀರನ್ನು ಇನ್ನೊಂದು ಪಾತ್ರೆಗೆ ಕಲಕದಂತೆ ಸುರಿದುಕೊಂಡರೆ ನೀರು ಹೇಗೆ ಸ್ವಚ್ಛವಾಗಿ ಇರುವುದೋ ಹಾಗೆ ಕ್ಷಾಯಿಕ ಭಾವೋತ್ಪತ್ತಿಯಾದ ಆತ್ಮ ನಿರ್ಮಲನಾಗಿರುತ್ತಾನೆ. ಕರ್ಮರಜ ಅವನಿಂದ ದೂರವಾಗಿರುತ್ತದೆ. ಅದೇ ಔಪಶಮಿಕ ಭಾವಾವಸ್ಥೆಯಲ್ಲಿ ಮಾತ್ರ ಕರ್ಮವೆಂಬುವ ಮಣ್ಣಿನ ಕಣಗಳು ಆತ್ಮವೆಂಬ ಜಲ ಪ್ರದೇಶದ ತಳಕ್ಕೇನೋ ಕೂಡಿರುವವು. ಆಗ ಆತ್ಮ ಉಜ್ಜ್ವಲವಾಗುವುದು. ಆದರೆ ಅದು ಕರ್ಮದ ಸಂಯೋಗದಲ್ಲಿಯೇ ಇರುವುದು. ತಿರುಗಿ ಕಲಕಿದರೆ ನೀರು ಮಲಿನ ಮಾಯವಾಗುವಂತೆ ಆತ್ಮ ಕರ್ಮಬಂಧನದಲ್ಲಿ ಹೆಚ್ಚಾಗಿ ಸಿಕ್ಕುವುದು.

	ಹನ್ನೆರಡನೆಯ ಗುಣಸ್ಥಾನದವರೆಗೆ ಆತ್ಮನಿಗೆ ಈ ಭಾವಗಳಿರುತ್ತವೆ. ಹದಿಮೂರನೆಯ ಗುಣಸ್ಥಾನದಲ್ಲಿರುವ ಆತ್ಮ ತನ್ನ e್ಞÁನ-ದರ್ಶನಾದಿಗಳಿಗೆ ಇಂದ್ರಿಯ ಮೊದಲಾದವುಗಳ ನೆರವನ್ನು ಅಪೇಕ್ಷಿಸುವುದಿಲ್ಲ, ಅದರಿಂದ ಕೇವಲಿ ಎನ್ನಸಿಕೊಳ್ಳುವನು. ಆಗ ಇವನಿಗೆ ಪರಮಾತ್ಮ ಎಂಬ ಸಂಜ್ಞೆಯೂ ಸಲ್ಲುವುದು. ಇವನು ಇನ್ನೂ ದೇಹಧಾರಿಯಾಗಿರುವುದರಿಂದ ಸಯೋಗಿ ಎನಿಸುವನು. ಆದರೆ ಘಾತಿಕರ್ಮಗಳಿಂದ ದೂರವಾಗಿರುವುದಿರಂದ ಜಿನನಾಗಿರುವನು. ಇಂಥ ಅರಿಹಂತನೇ ಹರಿಮೂರನೆಯ ಗುಣಸ್ಥಾನದಲ್ಲಿರುವನು. ಇವನು ದೇಹದಿಂದ-ಕಾಯಯೋಗದಿಂದ-ಮುಕ್ತನಾಗಬೇಕು ಸಂಪೂರ್ಣ ಶೀಲದ ಒಡೆಯನೆನಿಸಬೇಕು. ಸಂವರ-ನಿರ್ಜರಗಳಿಂದ ಮುಕ್ತನಾಗಬೇಕು. ಆಗ ಆ ಆತ್ಮ ಮುಕ್ತನೆನಿಸುವನು. ಹದಿನಾಲ್ಕನೆಯ ಗುಣಸ್ಥಾನದಲ್ಲಿರುವಾಗ ಆತ್ಮನಲ್ಲಿ ಈ ಪ್ರಗತಿಯಾಗುವುದು. ಆಮೇಲೆ ಅವನು ಶುದ್ಧಾತ್ಮನಾಗುವನು ಸಿದ್ದಪರಮೇಷ್ಠಿ ಎನಿಸುವನು.

	ಅಜೀವ ತತ್ತ್ವ : ನಾವು ಐದು ಇಂದ್ರಿಯಗಳ ಮುಖಾಂತರ ಯಾವ ಜಡತ್ತ್ವವನ್ನು ತಿಳಿಯುತ್ತೇವೆಯೋ, ಉಪಭೋಗಿಸುತ್ತೇವೆಯೋ ಆ ತತ್ತ್ವಕ್ಕೆ ಜೈನ ದಾರ್ಶನಿಕರು ಪುದ್ಗಲವೆಂದು ಹೇಳುವರು. ಇದೂ ಅಜೀವತತ್ತ್ವ. ಈ ಪುದ್ಗಲಕ್ಕೆ ಸ್ಪರ್ಶ, ರಸ, ಗಂಧ, ವರ್ಣ ಎಂಬ ಈ ನಾಲ್ಕು ಗುಣಗಳು ಪ್ರತಿಯೊಂದು ಪುದ್ಗಲಾಣುವಿನಲ್ಲಿಯೂ ಸೂಕ್ಷ್ಮ ಹಾಗೂ ಸ್ಥೂಲರೂಪಗಳಲ್ಲಿ ನೋಡಲು ಸಿಕ್ಕುತ್ತವೆ. ನಿಜವಾಗಿ ನೋಡಿದರೆ ಈ ಪುದ್ಗಲವೇ ವಿವಿಧ ರೂಪಗಳಲ್ಲಿ ಪರಿವರ್ತನ ಹೊಂದಿ, ಸೃಷ್ಟಿ ನಿರ್ಮಾಣವಾಗಿದೆ.

	ಪುದ್ಗಲದ ಎಲ್ಲಕ್ಕೂ ಸಣ್ಣ ಭಾಗಕ್ಕೆ ಪುದ್ಗಲ ಪರಮಾಣು ಎನ್ನುವರು. ಇದರಲ್ಲಿ ಮತ್ತೆ ಭಾಗಗಳನ್ನು ಮಾಡಲಿಕ್ಕೆ ಬರುವುದಿಲ್ಲ. ಇಂಥ ಪರಮಾಣುಗಳು ಸ್ನಿಗ್ಧತೆ ಮತ್ತು ಋಕ್ಷತೆಗಳಿಂದ ಒಂದಕ್ಕೊಂದು ಸೇರಿ ಪುದ್ಗಲ ಸ್ಕಂಧಗಳಾಗುತ್ತವೆ. ಇಂಥ ಸ್ಕಂಧಗಳಿಂದ ರೂಪುಗೊಂಡ ಪುದ್ಗಲ ಮಹಾಸ್ಕಂದವೊಂದು ವಿಶ್ವವ್ಯಾಪಿಯಾಗಿದೆ. ಈ ಪುದ್ಗಲ ಸೂಕ್ಷ್ಮವಾಗಿದೆ. ಆದರೆ ಈ ಪುದ್ಗಲದೊಡನೆ ಸಂಬಂಧವಿಟ್ಟುಕೊಂಡ ಜೀವ ಜಗತ್ತಿನಲ್ಲಿ ಅನೇಕ ರೂಪಗಳನ್ನು ಧರಿಸುತ್ತದೆ. e್ಞÁನ ಹಾಗೂ ಆನಂದಸ್ವರೂಪಿಯಾದ ಆತ್ಮನನ್ನು ಈ ಪುದ್ಗಲ ದೇಹದ ಪಂಜರದಲ್ಲಿ ಬಂಧಿಸಿ ತನ್ನ ವಿವಿಧ ಶಕ್ತಿಗಳನ್ನು ಪ್ರಯೋಗಿಸುತ್ತದೆ. ಪೃಥ್ವಿ, ಜಲ, ಅಗ್ನಿ, ವೃಕ್ಷ, ಇತ್ಯಾದಿ ಶರೀರಗಳನ್ನು ಧಾರಣಮಾಡಿ, ಜೀವ ಪೃಥ್ವಿ ಮೊದಲಾದ ಹೆಸರುಗಳಿಂದ ಕರೆಯಲ್ಪಡುತ್ತದೆ. ತತ್ತ್ವತಃ ಎಲ್ಲ ಆತ್ಮಗಳೂ ಸಮಾನವಾಗಿವೆ. ಕಲ್ಲು, ನೆಲ, ನೀರು, ಬೆಂಕಿಗಳಲ್ಲಿಯೂ ಜೈನದಾರ್ಶನಿಕರು ವಿಕಾಸ ಕೆಳಮಟ್ಟದ ಜೀವದ ಅಸ್ತಿತ್ವವನ್ನು ಸ್ವೀಕರಿಸಿದ್ದಾರೆ. ಪುದ್ಗಲದ ಒಂದು ಅವಸ್ಥೆಯೇ ಕರ್ಮವೆನಿಸುವುದು.

	ಕರ್ಮ : ಜೀವನ ಪರಿಣಾಮದ ಸಮಯವನ್ನು ಸಾಧಿಸಿ, ಪುದ್ಗಲ ಕರ್ಮರೂಪದಲ್ಲಿ ಪರಿಣಮಿಸುವುದು. ಅಯಸ್ಕಾಂತ ಕಬ್ಬಿಣದ ಅಣುಗಳನ್ನು ತನ್ನ ಕಡೆಗೆ ಎಳೆದುಕೊಳ್ಳುವಂತೆ ಜೀವ ಕರ್ಮರೂಪಿಯಾದ ಪುದ್ಗಲವನ್ನು ಆಕರ್ಷಿಸುತ್ತದೆ. ಕರ್ಮ ಪುದ್ಗಲಿತವಾಗಿದ್ದು ಆತ್ಮಪ್ರದೇಶದಲ್ಲಿ ಪ್ರವೇಶಿಸುವ ವಿಚಾರ ಜೈನ ದರ್ಶನದ ವೈಶಿಷ್ಟ್ಯವಾಗಿದ್ದು, ಬೇರೆ ಯಾವ ಭಾರತೀಯ ದರ್ಶನಗಳಲ್ಲಿಯೂ ದೊರೆಯುವುದಿಲ್ಲ. ಕರ್ಮ ಶಬ್ದ ಎಲ್ಲ ಕಡೆಯಲ್ಲಿ ಬಳೆಕೆಯಲ್ಲಿದ್ದರೂ ಜೈನದರ್ಶನದಲ್ಲಿ ಅದಕ್ಕೆ ವಿಶಿಷ್ಟ ಅರ್ಥವಿದೆ.

	ಜೀವದಲ್ಲಿ ವೈಭಾವಿಕ ಎಂಬುದೊಂದು ವಿಶಿಷ್ಟ ಶಕ್ತಿಯಿದೆ. ಅದರಿಂದ ರಾಗಾದಿ ಭಾವಗಳುಂಟಾಗುತ್ತವೆ. ಆಗ ಜೀವಕ್ಕೆ ಕರ್ಮದ ಸಂಬಂಧ ಬರುತ್ತದೆ. ಪೌದ್ಗಲಿಕ ಕರ್ಮದ ನಿಮಿತ್ತದಿಂದ ಜೀವದಲ್ಲಿಯೂ ಪರಿಣಾಮವಾಗುತ್ತದೆ. ಮೋಡಗಳೊಳಗಿಂದ ಸೂರ್ಯಕಿರಣಗಳು ಹಾಯ್ದಾಗ, ಅವು ಕಾಮನಬಿಲ್ಲಿನ ವಿಚಿತ್ರರೂಪನ್ನು ಧಾರಣ ಮಾಡುತ್ತವೆ. ಹಾಗೆಯೇ ಆತ್ಮನ ರೂಪದಲ್ಲಿ ವ್ಯತ್ಯಾಸ ಉಂಟಾಗುವದು. ಆದರೂ ತಾತ್ತ್ವಿಕ ದೃಷ್ಟಿಯಿಂದ ಜೀವ ಕರ್ಮದಲ್ಲಾಗಲಿ, ಕರ್ಮ ಜೀವದಲ್ಲಾಗಲಿ ಯಾವ ಹೊಸ ಗುಣವನ್ನೂ ಉತ್ಪನ್ನ ಮಾಡುವುದಿಲ್ಲ. ಪರಸ್ಪರ ನಿಮಿತ್ತದಿಂದ ಎರಡೂ ವಿಶಿಷ್ಟರೂಪದಲ್ಲಿ ಪರಿವರ್ತನ ಹೊಂದುತ್ತದೆ. ಅಯಸ್ಕಾಂತವನ್ನು ಕಬ್ಬಿಣದ ಹುಡಿಯಲ್ಲಿ ಉರುಳಾಡಿಸಿದರೆ ಕಬ್ಬಿಣದ ಅಣುಗಳ ಒಂದು ಉಂಡೆ ಸಿದ್ಧವಾಗುತ್ತದೆ. ಹಾಗೆ ಜೀವ ಕರ್ಮಗಳ ಹೊಂದಿಕೆಯಿದೆ. ಕಬ್ಬಿಣದ ಸಂಸರ್ಗದಿಂದ ಅಯಸ್ಕಾಂತದಲ್ಲಿ ಯಾವ ಹೊಸಗುಣವೂ ಉತ್ಪನ್ನವಾಗುವುದಿಲ್ಲ. ಕಬ್ಬಿಣದ ಅಣುಗಳಲ್ಲಿಯೂ ಹಾಗೆಯೇ. ಅಯಸ್ಕಾಂತ ಎಳಕೊಳ್ಳುವ ಸ್ವಭಾವದಲ್ಲಿದ್ದರೆ, ಕಬ್ಬಿಣದ ಅಣುಗಳು ಅಂಟುವ ಸ್ವಭಾವದಲ್ಲಿ ಇರುತ್ತವೆ. ಅವುಗಳ ಪರಿಣಾಮದಲ್ಲಿ ಒಂದು ದ್ರವ್ಯ ಇನ್ನೊಂದರ ಉಪಾದಾನಕ್ಕೆ ಕಾರಣವಾಗುವುದಿಲ್ಲ. ಇದು ಆತ್ಮ-ಕರ್ಮಗಳನ್ನು ಉದ್ದೇಶಿಸಿ ಹೇಳುವ ಮಾತು. ಜೀವ ಪುದ್ಗಲಕ್ಕೂ ಪುದ್ಗಲವು ಜೀವಕ್ಕೂ ಉಪಾದೇಯ ಉಪಾದಾನ ಕಾರಣಗಳಾಗಿ ಇರಲಾರವು. ಆದರೆ ಈ ಸ್ಥಾನದಲ್ಲಿ ನಿಮಿತ್ತ-ನೈಮಿತ್ತಿಕತನಗಳು ಇರುತ್ತವೆ. ಈ ಕಾರಣದಿಂದಲೇ ಆತ್ಮ ತನ್ನ ಭಾವಕ್ಕಷ್ಟೇ ಕರ್ತೃ. ಅದು ಪುದ್ಗಲಕರ್ಮಕೃತ ಎಲ್ಲ ಭಾವಗಳಿಗೂ ಕರ್ತೃವೆನಿಸಲಾರದು. ಎಷ್ಟು ಬಲವತ್ತರವಾದ ಕರ್ಮವಿದ್ದರೂ ಆತ್ಮನ ಸ್ವಭಾವವನ್ನು ಅದು ನಷ್ಟ ಪಡಿಸಲಾರದು.

	ಈ ವಿಷಯವನ್ನು ಇನ್ನಿಷ್ಟು ಸ್ಪಷ್ಟಗೊಳಿಸಲಿಕ್ಕೆ ಅರಳೆ ನೀರಿನಿಂದ ತೊಯ್ದಾಗ ದೂಳನ್ನು ಹಿಡಿದುಕೊಳ್ಳುವ ಸಂಗತಿಯನ್ನು ಹೇಳಬಹುದು. ಆತ್ಮವೆಂಬುದೇ ಒಣ ಅರಳೆ. ನೀರು ಕರ್ಮರೂಪಿಯಾದ ಪುದ್ಗಲ ಅಣುಗಳು. ನೀರಿನಿಂದ ತೊಯ್ದ ಅರಳೆ ದೂಳನ್ನು ಆಕರ್ಷಿಸಿಕೊಳ್ಳುವುದು. ಇಲ್ಲಿ ಅರಳೆ ನೀರನ್ನಷ್ಟೇ ಇಂಗಿಸಿಕೊಳ್ಳುವ ಗಣವುಳ್ಳದ್ದು. ಧೂಳನ್ನು ಹಿಡಿದುಕೊಳ್ಳುವ ಧರ್ಮ ನೀರಿನದು. ಎಂದರೆ ಜೀವ ಆತ್ಮ ಪರಿಣಾಮರೂಪ ಭಾವಕರ್ಮದ ಕರ್ತೃವಷ್ಟೆಯಿದೆ. ಪುದ್ಗಲ ಪರಿಣಾಮರೂಪ ದ್ರವ್ಯದ ಕರ್ತೃ ಅದಲ್ಲ. ಪುದ್ಗಲದ ಪರಿಣಾಮ ಸ್ವಯಂ ಪುದ್ಗಲರೂಪವೇ ಇರುವುದು. ಪುದ್ಗಲಾತ್ಮಕ ದ್ರವ್ಯ ಕರ್ಮದ ಕರ್ತೃತ್ವ ಸ್ವತಃ ಪುದ್ಗಲದ ಪರಿಣಾಮದಲ್ಲಿಯೇ ಇರುವುದು. ಅದು ಜೀವನ ಭಾವಕರ್ಮದ ಕರ್ತೃವೂ ಆಗಲಾರದು.

	ಕರ್ಮದ ಪ್ರಕಾರಗಳು : ಹೀಗಿರುವುದರಿಂದ ಕರ್ಮದಲ್ಲಿ ಭಾವಕರ್ಮ, ದ್ರವ್ಯಕರ್ಮ ಎಂದು ಎರಡು ಭೇದಗಳಾಗುತ್ತವೆ. ಪುದ್ಗಲದ ಪಿಂಡವೇ ದ್ರವ್ಯಕರ್ಮ. ಆ ಪಿಂಡದಲ್ಲಿರುವ ಶಕ್ತಿಯಿಂದ ಉತ್ಪನ್ನವಾಗುವ ಅe್ಞÁನ ಮೊದಲಾದವು ಭಾವಕರ್ಮಗಳು, ದರ್ಶನಶಾಸ್ತ್ರ ದೃಷ್ಟಿಯಿಂದ ಆತ್ಮಪ್ರದೇಶದಲ್ಲಿ ಉಂಟಾಗುವ ಕಂಪನ ಭಾವಕರ್ಮವೆನಿಸುವುದು. ಈ ಕಂಪನದ ಕಾರಣದಿಂದ ಪುದ್ಗಲದಲ್ಲಿ ಉಂಟಾಗುವ ವಿಶಿಷ್ಟ ಅವಸ್ಥೆಯ ಉತ್ಪತ್ತಿ ದ್ರವ್ಯಕರ್ಮವೆನಿಸುವುದು.

	ಇನ್ನು ಕರ್ಮದಲ್ಲಿ ಘಾತಿ, ಅಘಾತಿ ಎಂದು ಎರಡು ಮುಖ್ಯ ಪ್ರಕಾರಗಳು. ಆತ್ಮನ ಅನಂತe್ಞÁನ, ಅನಂತವೀರ್ಯ ಮೊದಲಾದ ಗುಣಗಳನ್ನು ಮಲಿನಗೊಳಿಸುವಂಥ ಕರ್ಮಗಳು ಘಾತಿಕರ್ಮಗಳು. ಇವು e್ಞÁನಾವರಣೀಯ, ದರ್ಶನಾವರಣೀಯ, ಮೋಹನೀಯ, ಅಂತರಾಯ ಎಂದು ನಾಲ್ಕು ವಿಧವಾಗಿವೆ. ಅಘಾತಿ ಕರ್ಮಗಳಲ್ಲಿ ವೇದನೀಯ, ಆಯು, ನಾಮ, ಗೋತ್ರವೆಂದು ನಾಲ್ಕು ಬಗೆ. ಹೀಗೆ ಕರ್ಮದಲ್ಲಿ ಆರಂಭದ ಎಂಟು ಪ್ರಕಾರಗಳನ್ನು ಹೇಳಿದ್ದರೂ ಇವುಗಳ ಉತ್ತರಪತ್ರಿಕೆಗಳು ನೂರಾನಲವತ್ತೆಂಟು ಆಗುವುವು. ಅವುಗಳಲ್ಲಿಯೂ ಅನೇಕ ಸೂಕ್ಷ್ಮಭೇದಗಳು ಇವೆ. ಹೀಗೆ ಕರ್ಮಪ್ರಕೃತಿಗಳ ಸಂಖ್ಯೆ ಅನಂತ.

	ಧರ್ಮಾಧರ್ಮದ್ರವ್ಯಗಳು : ಜೀವ ಪುದ್ಗಲಗಳೆರಡರಲ್ಲಿಯೂ ಕ್ರಿಯಾಶೀಲತೆ ಇದೆ. ಇವು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವಾಗ, ಸ್ಥಳಾಂತರದ ಕ್ರಿಯೆಗೆ-ಗತಿಗೆ-ಉದಾಸೀನ ಭಾವದಿಂದ ಸಹಾಯಮಾಡುವ ದ್ರವ್ಯಕ್ಕೆ ಧರ್ಮದ್ರವ್ಯವೆಂದು ಜೈನದರ್ಶನ ಹೇಳುತ್ತದೆ. ಇದಕ್ಕೆ ವಿರುದ್ಧವಾಗಿ ಜೀವ-ಪುದ್ಗಲಗಳ ಸ್ಥಿತಿಯಲ್ಲಿ ಸಾಧಾರಣ ಸಹಾಯಕ ಮಾಧ್ಯಮವೇ ಅಧರ್ಮದ್ರವ್ಯ. ಈ ಧರ್ಮ-ಅಧರ್ಮಗಳು ಜೈನದರ್ಶನದ ಪ್ರಕಾರ ದ್ರವ್ಯರೂಪದಲ್ಲಿವೆ. ಇವು ಗತಿ-ಸ್ಥಿತಿಗಳಿಗೆ ಸಹಾಯಕವಾಗಿವೆ. ಈ ದ್ರವ್ಯಗಳ ಲಕ್ಷಣಗಳನ್ನು ಸ್ಪಷ್ಟಪಡಿಸಬೇಕಾದರೆ ಕೆಳಗಿನ ದೃಷ್ಟಾಂತವನ್ನು ಕೊಡಬಹುದು. ನೀರಿನಲ್ಲಿ ಮೀನುಗಳು ಸಂಚರಿಸುತ್ತವೆ. ನೀರಿಲ್ಲದೆ ಮೀನುಗಳ ಸಂಚಾರವೇ ನಡೆಯದು. ಆದರೆ ಮೀನುಗಳ ಸಂಚಾರಕ್ಕೆ ನೀರು ಪ್ರೇರಣೆ ಮಾಡುವುದಿಲ್ಲ. ಮೀನುಗಳ ಇಚ್ಚೆ ಇದ್ದಂತೆ ಅವು ಸಂಚರಿಸುತ್ತವೆ. ನೀರು ಉದಾಸೀನಭಾವದ ಸಹಾಯಕ. ಇದರಂತೆಯೇ ಧರ್ಮದ್ರವ್ಯ ಇರುತ್ತದೆ. ಇನ್ನು ಅಧರ್ಮದ್ರವ್ಯ ಮರದ ನೆರಳಿದ್ದಂತೆ. ದಾರಿಕಾರ ಬಿಸಿಲಿನಲ್ಲಿ ನೆರಳನ್ನು ಕಂಡು. ಇಚ್ಚೆ ಇದ್ದರೆ ಹೋಗಿ ಅದನ್ನಾಶ್ರಯಿಸಬಹುದು; ಇಲ್ಲವಾದರೆ ಬಿಡಬಹುದು. ಅದೇನು ಇವನನ್ನು ತಡೆದು ನಿಲ್ಲಿಸಲು ಯತ್ನಿಸುವುದಿಲ್ಲ. ಅದರಂತೆ ಜೀವ-ಪುದ್ಗಲಗಳ ಗಮನಾಗಮನ ಕ್ರಿಯೆಗೆ ಧರ್ಮ, ಅಧರ್ಮ ದ್ರವ್ಯಗಳು ಸಹಕಾರಿದ್ರವ್ಯಗಳಾಗಿವೆ. ಈ ವಿಚಾರವೂ ಜೈನದರ್ಶನದ ಒಂದು ವಿಶಿಷ್ಟ ವಿಚಾರ ಪ್ರಣಾಲಿಯ ದಿಗ್ದರ್ಶನವಾಗಿದೆ.

	ಷಡ್‍ದ್ರವ್ಯಗಳು : ಜೀವ, ಪುದ್ಗಲ, ಧರ್ಮ, ಅಧರ್ಮ, ಆಕಾಶ ಮತ್ತು ಕಾಲ-ಈ ಆರು ದ್ರವ್ಯಗಳಿಂದ ಸೃಷ್ಟಿ ನಿರ್ಮಾಣವಾಗಿದೆ. ಜೀವ ಮೊದಲಾದವುಗಳ ರೂಪ ಪರಿವರ್ತನದ ನಡುವಿನ ಕಾಲ ಒಂದು ದ್ರವ್ಯವಾಗಿದೆ. ಸಂಪೂರ್ಣ ಜೀವ, ಪುದ್ಗಲ, ಧರ್ಮ, ಅಧರ್ಮ ಮತ್ತು ಕಾಲಗಳಿಗೆ ಸ್ಥಾನಕೊಡುವಂಥ ಆಕಾಶದ್ರವ್ಯವನ್ನೂ ಜೈನದರ್ಶನ ಸ್ವೀಕರಿಸಿದೆ. ಧರ್ಮ, ಅಧರ್ಮ, ಆಕಾಶ ದ್ರವ್ಯಗಳು ಅಖಂಡವಾಗಿವೆ. ಜೀವಗಳು ಅನಂತವಾಗಿವೆ. ಪುದ್ಗಲ ಅನಂತಾನಂತವಾಗಿದೆ. ಕಾಲದ್ರವ್ಯ ಅಸಂಖ್ಯಾತ ಅಣುರೂಪವಾಗಿದೆ. ಕಾಲವನ್ನುಳಿದು ಜೀವ, ಪುದ್ಗಲ, ಧರ್ಮ, ಅಧರ್ಮ, ಆಕಾಶಗಳು ಸತ್ತಾಯುಕ್ತವಾಗಿದ್ದು, ಬಹು ಪ್ರದೇಶವುಳ್ಳವುಗಳಾಗಿವೆ. ಅದಕ್ಕಾಗಿ ಇವುಗಳನ್ನು ಅಸ್ತಿಕಾಯಗಳೆಂದು ಕರೆಯುವರು. ಕಾಲದ್ರವ್ಯ ಅಸ್ತಿಕಾಯವಲ್ಲ. ಏಕೆಂದರೆ ಅದು ಪರಸ್ಪರ ಅಸಂಬದ್ಧ ಪೃಥಕ್ ಪರಮಾಣುರೂಪದ್ದಾಗಿದೆ. ಧರ್ಮ, ಅಧರ್ಮ, ಆಕಾಶ, ಕಾಲಗಳಲ್ಲಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಗಮನಾಗಮನ ಮಾಡುವ ಕ್ರಿಯೆಯ ಅಭಾವವಿದೆ. ಅದರಿಂದ ಇವು ನಿಷ್ಕ್ರಿಯವೆನಿಸುವವು. ಆಕಾಶದ ಯಾವ ಮರ್ಯಾದಿತ ಪ್ರದೇಶದಲ್ಲಿ ಜೀವಾದಿ ದ್ರವ್ಯಗಳು ಇರುವವೋ ಆ ಭಾಗವೇ ಲೋಕಾಕಾಶ. ಒಂದು ಪರಮಾಣು ವ್ಯಾಪಿಸುವ ಸ್ಥಳಕ್ಕೆ ಪ್ರದೇಶವೆಂದು ಹೆಸರು. ಈ ದೃಷ್ಟಿಯಿಂದ ಒಂದು ಜೀವಧರ್ಮ, ಅಧರ್ಮಗಳು ಅನೇಕ ಪ್ರದೇಶಗಳುಳ್ಳವುಗಳಾಗಿವೆ.

	ದ್ರವ್ಯಗಳಲ್ಲಿ ಪುದ್ಗಲ ಮೂರ್ತ; ಉಳಿದ ಐದು ದ್ರವ್ಯಗಳು ಅಮೂರ್ತ. ಜೀವ ತಾನು ಹೊಂದಿದ ದೇಹದ ಪರಿಮಾಣಕ್ಕೆ ತಕ್ಕಂತೆ ಸಂಕೋಚವೂ ವಿಸ್ತಾರವೂ ಆಗುತ್ತದೆ. ಸಣ್ಣ ಕೋಣೆಯಲ್ಲಿ ಇಟ್ಟ ದೀಪದ ಪ್ರಕಾಶ ಆ ಕೋಣೆಯ ತುಂಬಾ ಬೀಳುತ್ತದೆ. ಅದನ್ನು ದೊಡ್ಡ ಕೋಣೆಯಲ್ಲಿಟ್ಟರೆ ಆ ಕೋಣೆಯ ತುಂಬವೂ ವ್ಯಾಪಿಸುತ್ತದೆ. ಇದೇ ರೀತಿ ಸಾಮಾನ್ಯವಾಗಿ ಜೀವದ ಸ್ಥಿತಿ. ಜೈನಾಚಾರ್ಯರು ಪುದ್ಗಲವೆಂಬ ಪದದಿಂದ ಪದಾರ್ಥ ಹಾಗೂ ಶಕ್ತಿ. ಇವೆರಡನ್ನೂ ಸೂಚಿಸಿದ್ದಾರೆ. ಯಾವುದು ಭೇದ, ಸಂಘಾತದಿಂದ ಇಲ್ಲವೆ ಈ ಎರಡರ ಕಾರಣದಿಂದ ಅನ್ಯರೊಡನೆ ಯೋಗವನ್ನು (ಮಿಶ್ರಣ ಅಥವಾ ಪೂರಣ) ಹುಟ್ಟಿಸುತ್ತದೆಯೋ ಅದರಂತೆ ವಿಘಟನವನ್ನು ಹುಟ್ಟಿಸುತ್ತದೆಯೋ ಆ ಪದಾರ್ಥವೇ ಪುದ್ಗಲ. ಇದು ಮೂರ್ತಿಕವಿದೆ. ಇದರ ಅರಿವು ನಮಗೆ ರೂಪ, ರಸ, ಗಂಧ ಮತ್ತು ಸ್ಪರ್ಶದಿಂದ ಆಗುತ್ತದೆ. ಜಗತ್ತಿನೊಳಗಿನ ಪೃಥ್ವಿ, ಜಲ, ವಾಯುವೇ ಮೊದಲಾದ ಸಮಸ್ತ ದೃಶ್ಯ ಪದಾರ್ಥಗಳೂ ಪುದ್ಗಲವೇ. ಶರೀರ ವಚನ, ಮನ, ಪ್ರಾಣ ಮತ್ತು ಶ್ವಾಸೋಚ್ಛ್ವಾಸಗಳು ಪುದ್ಗಲದ ಕಾರ್ಯಗಳಾಗಿವೆ. ಅದರಂತೆ ಜೀವಕ್ಕೆ ಸುಖ, ದುಃಖ ಜೀವನ, ಮರಣಗಳ ಅನುಭವ ಪುದ್ಗಲದ ಕರ್ಮದ ಕಾರಣದಿಂದಲೇ ಆಗುತ್ತದೆ. ಈ ಪುದ್ಗಲ ಒಂದು ದ್ರವ್ಯ. ಇದು ಸೂಕ್ಷ್ಮ ಅಣುಸಮುದಾಯವಾಗಿದೆ.

	ಕಾಲ : ಕಾಲದ ಪದಾರ್ಥದ ಪರಿವರ್ತನದಲ್ಲಿ ಕಾರಣಸ್ವರೂಪವಾದ ದ್ರವ್ಯವಾಗಿದೆ. ಅದರಿಂದ ದ್ರವ್ಯದ ಲಕ್ಷಣಗಳಾದ ಉತ್ಪನ್ನ, ವ್ಯಯ, ದ್ರವ್ಯಗಳು ಇದರಲ್ಲಿ ನೋಡಲು ಸಿಗುತ್ತವೆ. ಈ ಲಕ್ಷಣಗಳಿಂದಲೇ ವ್ಯವಹಾರ ಮತ್ತು ನಿಶ್ಚಯ ಕಾಲಗಳು ರೂಪುಗೊಂಡಿವೆ. ಇದು ಅಸಂಖ್ಯ ಅವಿಭಾಗಿ ಕಾಲಾಣುಗಳ-ಲೋಕಾಕಾಶದ ಪ್ರತ್ಯೇಕ ಪ್ರದೇಶವನ್ನು ವ್ಯಾಪಿಸಿದ-ರೂಪದಲ್ಲಿದೆ. ಕಾಲದ ಉತ್ಪಾದ, ವ್ಯಯತ್ವ ಲಕ್ಷಣಗಳನ್ನು ಅವಲಂಬಿಸಿ ವ್ಯವಹಾರ ಕಾಲ ರೂಪುಗೊಂಡಿದೆ. ಇದಕ್ಕೆ ಸಮಯ ಎಂದೂ ಹೆಸರಿದೆ. ಹೀಗೆ ಕಾಲದಲ್ಲಿ ನಿಶ್ಚಯ ಮತ್ತು ವ್ಯವಹಾರಗಳೆಂದು ಎರಡು ಪ್ರಕಾರಗಳಿವೆ. ಕಾಲಾಣುಗಳಲ್ಲಿ ಪುದ್ಗಲದಂತೆ ಪರಸ್ಪರ ಬಂಧಶಕ್ತಿ ಇಲ್ಲ. ಇವು ಪ್ರತಿಯೊಂದು ಆಕಾಶ ಪ್ರದೇಶದಲ್ಲೂ ಇರುತ್ತವೆ. ಇವು ಅದೃಶ್ಯ, ಆಮೂರ್ತ ಹಾಗೂ ನಿಷ್ಕ್ರಿಯ ಆಗಿವೆ. ಕಾಲಾಣುಗಳಲ್ಲಿರುವ ಪರಸ್ಪರ ಬಂಧಕ ಶಕ್ತಿಯ ಅಭಾವವೇ ಅದನ್ನು ಆಸ್ತಿಕಾಯಗಳಿಂದ ಭಿನ್ನಗೊಳಿಸುವುದು. ಕಾಲದಲ್ಲಿ ಅಸ್ತಿತ್ವ-ಸತ್ತಾ-ಇದೆ. ಕಾಯತ್ವ-ವಿಸ್ತರಣ ಹಾಗೂ ಮೀಲನ ಶಕ್ತಿಗಳು-ಇಲ್ಲ. ಎರಡು ಪ್ರಕಾರದ ವಿಸ್ತಾರ ವಿಶೇಷ ಎಲ್ಲ ದ್ರವ್ಯಗಳಲ್ಲಿ ನೋಡಲಿಕ್ಕೆ ಸಿಗುತ್ತದೆ. ಆದರೆ ಕಾಲದಲ್ಲಿ ಪ್ರದೇಶದ ಅಭಾವವಿದ್ದಲ್ಲಿ, ಊಧ್ರ್ವ ಪ್ರಚಯ ಮಾತ್ರ ನೋಡಲಿಕ್ಕೆ ದೊರೆಯುತ್ತದೆ. ವ್ಯವಹಾರ ಕಾಲದ ಸಮಯ ಎಂಬುದು ಪರಿಣಾಮ, ಕ್ರಿಯಾ, ಪರತ್ವ, ಅಪರತ್ವಗಳ ಆಧಾರದ ಮೇಲೆ ಸ್ವೀಕೃತವಾಗುತ್ತದೆ. ಇದು ತನ್ನ ಅಸ್ತಿತ್ವಕ್ಕಾಗಿ ನಿಶ್ಚಯ ಕಾಲಾಧೀನವಾಗಿರುವುದರಿಂದ ಪರಾಯತ್ತವಾಗಿದೆ. ವ್ಯವಹಾರಕಾಲ ಸಾದಿ ಹಾಗೂ ಸಂತವಾಗಿದೆ. ನಿಶ್ಚಯಕಾಲ ಅನಂತವಾಗಿದೆ. ಅಲ್ಲದೆ ದ್ರವ್ಯತ್ವ-ವರ್ತನಾ-ಬೋಧಕವಾಗಿದೆ. ಕಾಲ ವಸ್ತುವಿನ ಅಸ್ತಿತ್ವವನ್ನು ಸ್ಥಿರವಾಗಿ ಇಡುವುದರಲ್ಲಿ, ಪರಿಣಮನದಲ್ಲಿ, ಪರಿವರ್ತನದಲ್ಲಿ, ಪರಿವರ್ಧನದಲ್ಲಿ ಕ್ರಿಯೆಯಲ್ಲಿ, ಸಮಯದ ಅಪೇಕ್ಷೆಯಿಂದ ಸಣ್ಣದೊಡ್ಡದಾಗುವುದರಲ್ಲಿ ಬಾಲವೃದ್ದ ಮೊದಲಾದ ಎಲ್ಲರಿಗೂ-ಸಹಾಯಕವಾಗಿದೆ. ಕಾಲದ್ರವ್ಯ ಸ್ವತಃ ಪರಿವರ್ತಿತವೂ ಪರಿವರ್ಧಿತವೂ ಆಗುತ್ತದೆ. ಉತ್ಸರ್ಪಿಣಿ ಅವಸರ್ಪಿಣಿ ಕಾಲದ ಪರಿವರ್ತನದಲ್ಲಿಯೂ ಸ್ವತಃ ನಿಶ್ಚಯಕಾಲವೇ ಕಾರಣವಾಗಿದೆ. ಕಾಲದ ಈ ಪರಿವರ್ತನಕ್ಕೆ ಇನ್ನೇನಾದರೂ ಕಾರಣವಾಗಿದ್ದರೆ ಎಲ್ಲ ಕಡೆಗೂ ಅವ್ಯವಸ್ಥೆಯುಂಟಾಗುತ್ತಿದ್ದಿತು. ಒಟ್ಟಾರೆ ಕಾಲ ಸ್ವತಂತ್ರ ದ್ರವ್ಯ; ಪರಿವರ್ತನದಲ್ಲಿ ಸಹಾಯಕವಾಗುವುದು ಅದರ ಕಾರ್ಯ.

	ಕಾಲದ ಎಲ್ಲಕ್ಕೂ ಸಣ್ಣಪ್ರಮಾಣ ಸಮಯ. ಇಂಥ ಅನೇಕ ಸಮಯಗಳು ಸೇರಿ ವ್ಯವಹಾರಕಾಲವಾಗಿದೆ. ಇದರಂತೆ ಕಾಲದ ಎಲ್ಲಕ್ಕೂ ದೊಡ್ಡ ಅಳತೆಯ ಮಹಾಕಲ್ಪವಾಗಿದೆ. ಕಾಲದ್ರವ್ಯದ ಅಭಾವದಿಂದ ಜಗತ್ತಿನ ವಿಕಾಸವೇ ನಿಂತು ಹೋಗುವುದು.

	ಯೋಗತ್ರಯಗಳು : ಮನ, ವಚನ, ಕಾಯಗಳ ಯೋಗದಿಂದ ಕರ್ಮದ ಆಸ್ರವ ಆತ್ಮಪ್ರದೇಶದಲ್ಲಿ ಆಗುವುದು. ಈ ಯೋಗತ್ರಯಗಳು ಆತ್ಮನಲ್ಲಿ ಸ್ಪಂದನವನ್ನು ಉಂಟುಮಾಡುವವು. ಭಾವನೆಯ ಉತ್ಪತ್ತಿಯಾಗಿ ಯಾವ ಪ್ರಯತ್ನ ನಡೆಯುವುದೋ ಅದೇ ಮನೋಯೋಗ. ಇದರಂತೆ ಮಾತು, ಕ್ರಿಯೆಗಳ ಉತ್ಪತ್ತಿಯಾಗಿ ನಡೆಯುವ ಪ್ರಯತ್ನಗಳೇ ವಚನ, ಕಾಯಯೋಗಗಳೆನಿಸಿವುವು. ಇವುಗಳಿಂದ ಆತ್ಮ ಮತ್ತು ಕರ್ಮಗಳಲ್ಲಿ ಏಕಕ್ಷೇತ್ರಾವಗಾಹ ಸಂಬಂಧರೂಪ ಬಂಧವುಂಟಾಗುತ್ತದೆ. ಹೀಗೆ ಜೀವಕರ್ಮಗಳ ಕೂಡುವಿಕೆಗೇನೇ ಕರ್ಮಬಂಧ ಎನ್ನುವರು. ಕರ್ಮದ ಬಂಧ ಸ್ಥಿತಿ ಒಂದು ವಿಶಿಷ್ಟ ಅವಸ್ಥೆ. ಜೀವ ಕರ್ಮಗಳ ಸಂಬಂಧದಿಂದ ಎರಡರಲ್ಲಿಯೂ ವಿಕೃತಿಯುಂಟಾಗುವುದೇ ಬಂಧ. ಇದು ಕರ್ಮಾಸ್ರವದ ತರುವಾಯ ಉಂಟಾಗುತ್ತದೆ. ಮೊದಲ ಕ್ಷಣದಲ್ಲಿ ಕರ್ಮ ಸ್ಕಂದಗಳ ಆಗಮನವಾಗುತ್ತದೆ. ಮರುಕ್ಷಣದಲ್ಲಿ ಕರ್ಮದ ಅಣುಗಳು ಆತ್ಮ ಪ್ರದೇಶದಲ್ಲಿ ಅಂಟಿಕೊಂಡು ನಿಲ್ಲುತ್ತದೆ. ಆಸ್ರವಕ್ಕೆ ಮುಖ್ಯವಾಗಿ ಯೋಗಗಳು ಕಾರಣ. ಬಂಧದಲ್ಲಿ ಕಷಾಯಕ್ಕೆ ಪ್ರಾಧಾನ್ಯವಿದೆ.

	ಕರ್ಮ ಬಂಧ (ಆತ್ಮನಿಗೆ ಕಟ್ಟಿದ್ದು), ಉತ್ಕರ್ಷಣ (ವೃದ್ಧಿಯಾಗುವಿಕೆ), ಅಪಕರ್ಷಣ (ಕಡಿಮೆಯಾಗುವಿಕೆ), ಸಂಕ್ರಮಣ (ಬದಲಾಗುವಿಕೆ), ಉದೀರಣಾ (ಉದಯವಾಗಬೇಕಿದ್ದ ಕಾಲಕ್ಕಿಂತ ಪೂರ್ವದಲ್ಲಿ ಉದಯವಾಗುವುದು), ಸತ್ತ್ವ (ಕರ್ಮ ಸತ್ತೆಯ ಸ್ಥಾನದಲ್ಲಿರುವ ಅವಸ್ಥೆ), ಉದಯ (ಫಲಕೊಡುವ ಕಾಲ), ಉಪಶಮ (ಕರ್ಮ ಫಲಕೊಡದೆ ಬಿಟ್ಟುಹೋಗುವುದು), ನಿಧತ್ತಿ (ವೃದ್ದಿ, ಕಡಿಮೆ ಆಗದೆಯೇ ಉದೀರಣಾ ಅಥವಾ ಉಪಶಾಂತವಾಗುವುದು), ನಿಕಾಚನ (ಉದೀರಣಾ, ಸಂಕ್ರಮಣ, ಉತ್ಕರ್ಷಣ, ಅಪಕರ್ಷಣ ಆಗದಿರುವಿಕೆ)-ಈ ಹತ್ತು ಅವಸ್ಥೆಗಳಲ್ಲಿ ಇರುತ್ತದೆ. ಹೀಗೆ ಕರ್ಮವಿಚಾರ ಜೈನದರ್ಶನದಲ್ಲಿ ವಿಸ್ತಾರವಾಗಿ ನಿರೂಪಿತವಾಗಿದೆ.

	ಕರ್ಮದ ಈ ಹತ್ತು ಅವಸ್ಥೆಗಳ ಬಗ್ಗೆ ತುಸು ವಿಚಾರಮಾಡಿದರೆ, ಆತ್ಮ ತನ್ನ ಪರಿಣಾಮಕ್ಕೆ ತಕ್ಕಂತೆ ಕರ್ಮವನ್ನು ಪ್ರಬಲ ಅಥವಾ ನಿರ್ಬಲಗೊಳಿಸುವುದೆಂಬುದು ಗೊತ್ತಾಗುತ್ತದೆ. ಒಮ್ಮೊಮ್ಮೆ ಜೀವಕ್ಕೆ ಕಟ್ಟಿದ ಕರ್ಮ ಫಲಕೊಡದೆ ಹೋಗಬಹುದು. ಇನ್ನೊಮ್ಮೆ ಉದಯಿಸಿದ ಕಾಲಕ್ಕಿಂತ ಪೂರ್ವದಲ್ಲಿಯೇ ಕರ್ಮ ಕರಗಿಹೋಗಬಹುದು. ಮತ್ತೊಮ್ಮೆ ಮುಂಚಿತವಾಗಿಯೇ ಪರಿಣಾಮ ಮಾಡಿದರೂ ಮಾಡಿತೇ. ಉದಾಹರಣೆಗಾಗಿ ಒಂದು ಜೀವ ಈ ಜನ್ಮದಲ್ಲಿ ಸುಮಾರು ನಲವತ್ತನೆಯ ವಯಸ್ಸಿಗೆ ಕ್ಷಯರೋಗದಂಥ ಒಂದು ವ್ಯಾಧಿಗೆ ತುತ್ತಾಗುವಂಥ ಅಶುಭ ಕರ್ಮ ಬಂಧನಕ್ಕೆ ಪೂರ್ವದಲ್ಲಿಯೇ ಒಳಗಾಗಿದೆಯೆಂದು ಇಟ್ಟುಕೊಳ್ಳೋಣ. ಆದರೆ ಅಂಥ ಜೀವ ಈಗ ಹುಟ್ಟಿದಾಗಿನಿಂದ ಒಳ್ಳೆಯ ಆಚಾರ-ವಿಚಾರಗಳಿಂದ ಶುಭಕರ್ಮವನ್ನು ಸಂಪಾದಿಸುತ್ತ ಹೋದಲ್ಲಿ ಮೊದಲು ಕಟ್ಟಿದ ಆ ಅಶುಭ ಕರ್ಮ ಫಲಕೊಡದೆ ಹೋಗಬಹುದು. ಶುಭಕರ್ಮದ ಆಸ್ರವ ಬಹು ಮುಂಚಿತವಾಗಿಯೇ ಆ ಆತ್ಮನಲ್ಲಿ ಅದುದಾದಲ್ಲಿ ಆ ವ್ಯಾಧಿಗೆ ಕಾರಣವಾಗತಕ್ಕ ಕರ್ಮ ತನ್ನ ಪ್ರಭಾವ ಬೀರುವ ಕಾಲ ಒದಗುವ ಪೂರ್ವದಲ್ಲಿಯೇ ಕರಗಿಯೂ ಹೋದೀತು. ಇನ್ನೊಮ್ಮೆ ಅಂಥ ಜೀವ ದುರಾಚಾರಕ್ಕೆ ಒಳಗಾದಲ್ಲಿ-ಮತ್ತು ಪೂರ್ವಸಂಚಿತ ಅಶುಭಕರ್ಮಕ್ಕೆ ಪುಷ್ಟಿಕರವಾದ ಕರ್ಮಣ್ಯಗಳನ್ನೇ ಸಂಗ್ರಹಿಸಿಕೊಂಡಲ್ಲಿ ಮೂವತ್ತನೆಯ ವರ್ಷಕ್ಕೇನೇ ವ್ಯಾಧಿಗೆ ತುತ್ತಾದರೂ ಆಗಬಹುದು. ಇದೆಲ್ಲ ಆತ್ಮನ ಪರಿಣಾಮವನ್ನು ಅವಲಂಬಿಸಿದೆ. ಕಟ್ಟಿಕೊಂಡ ಕರ್ಮವನ್ನು ಭೋಗಿಸಿಯೇ ತೀರಬೇಕೆಂಬ ಕಟ್ಟು ಆತ್ಮನಿಗೆ ಇಲ್ಲ. ಜೀವದಲ್ಲಿ ಸಮ್ಯಗ್ದರ್ಶನ, e್ಞÁನ, ಚಾರಿತ್ರ್ಯಗಳು ಉಂಟಾದಲ್ಲಿ ಅನೇಕ ಕರ್ಮಗಳು ತನ್ನಿಂದ ತಾನೇ ಕಳಚಿ ಬೀಳುವುವು. ಕೇವಲಿಗಳ ಅಸಾತಾ ಕರ್ಮ ಪ್ರಕೃತಿಯ ಸಾತಾರೂಪದಲ್ಲಿ ಪರಿವರ್ತನ ಹೊಂದಿ ಬಿಟ್ಟುಹೋಗುವುದು.

	ಸ್ಯಾದ್ವಾದ ದೃಷ್ಟಿ-ಅನೇಕಾಂತವಾದ : ಜೈನದರ್ಶನ ಜೀವ, ಅಜೀವ, ಆಸ್ರವ, ಬಂಧ, ಸಂವರ, ನಿರ್ಜರಾ, ಮೋಕ್ಷಗಳೆಂಬ ಸಪ್ತ ತತ್ತ್ವಗಳನ್ನು ಜೀವ, ಪುದ್ಗಲ, ಧರ್ಮ, ಅಧರ್ಮ, ಆಕಾಶ, ಕಾಲಗಳೆಂಬ ಷಡ್ ದ್ರವ್ಯಗಳನ್ನೂ ನಿರೂಪಿಸುತ್ತದೆ. ಅದು ಧರ್ಮ ಹಾಗೂ ದರ್ಶನಗಳ ನಿರೂಪಣೆಯಲ್ಲಿ ಮುಖ್ಯವಾಗಿ ಸ್ಯಾದ್ವಾದ ದೃಷ್ಟಿಯನ್ನು ಸ್ವೀಕರಿಸುತ್ತದೆ. ಸ್ಯಾದ್ವಾದ ದೃಷ್ಟಿ ಸರ್ವವಿಧದಿಂದಲೂ ಒಂದು ಪದಾರ್ಥವನ್ನು-ಸಂಗತಿಯನ್ನು-ನಿರೀಕ್ಷಿಸಿ, ಪರೀಕ್ಷಿಸಿ, ಸಂಪೂರ್ಣ ಸತ್ಯವನ್ನು ಕಂಡುಕೊಳ್ಳುವಂಥ ದೃಷ್ಟಿ. ಸ್ಯಾದ್ವಾದಕ್ಕೆ ಅನೇಕಾಂತವಾದವೆಂದೂ ಹೆಸರು. ಅನೇಕಾಂತ ವಿದ್ಯೆ ಒಂದು ದೃಷ್ಟಿಗೆ ಪ್ರಾಧಾನ್ಯ ಕೊಟ್ಟು ಉಳಿದ ದೃಷ್ಟಿಗಳನ್ನು ಗೌಣವಾಗಿಡುವುದು. ಈ ಪ್ರಕೃತಿಯಿಂದ ಅದು ತತ್ತ್ವe್ಞÁನವೆಂಬ ಅಮೃತವನ್ನು ಸಂಪಾದಿಸುವುದು. ಅದರಿಂದ ಆ e್ಞÁನ ಪೂರ್ಣಪ್ರಮಾಣವೆನಿಸುವುದು.

	ಈ ಸ್ಯದ್ವಾದ ಅನೇಕ ವಿರೋಧಿವಾದಗಳನ್ನು ಸಮನ್ವಯಮಾಡುವಾಗ ಅದರಲ್ಲಿ ನಯವಾದ, ಭಂಗವಾದಗಳು ಸಹಜವಾಗಿ ರೂಪುಗೊಳ್ಳುತ್ತವೆ. ಏಕೆಂದರೆ ಬೇರೆ ಬೇರೆ ದೃಷ್ಟಿ ಬಿಂದುಗಳ ಪೃಥಕ್ಕರಣ ನಡೆಸಿ ಅವುಗಳ ವಿಷಯದ ಮರ್ಯಾದೆಯ ವಿಭಾಗಗಳನ್ನು ಮಾಡಿ, ಆಯಾ ವಿಭಾಗಕ್ಕೆ ತಕ್ಕಷ್ಟು ಸ್ಥಾನವನ್ನೂ ಮಹತ್ತ್ವವನ್ನೂ ಕೊಟ್ಟು ಒಂದು ವಿಷಯವನ್ನು ಸಮಾಲೋಚಿಸುವ ಕ್ರಮವೇ ಸ್ಯಾದ್ವಾದ. ಅಲ್ಲಿನ ವಿಷಯ ವಿಭಜನೆಯ ಕ್ರಮಕ್ಕೆ ನಯ, ಭಂಗಗಳೆಂದು ಹೆಸರು. ಇವೆರಡೂ ಸ್ಯಾದ್ವಾದದ ಅಂಗಗಳು. ಈ ಅಂಗಗಳ ಸಂಯೋಜನೆಯಲ್ಲಿಯೇ ಸ್ಯಾದ್ವಾದ ದೃಷ್ಟಿಯ ಸೃಷ್ಟಿಯಿದೆ.

	ಉದಾಹರಣೆಗಾಗಿ ಒಂದು ಮನೆಯ ಭಾವಚಿತ್ರವನ್ನು ಅದರ ಎದುರಿಗೆ ನಿಂತು, ಹಿಂದೆ ನಿಂತು, ಭಿನ್ನ ಭಿನ್ನ ಮೂಲೆಗಳಿಗೆ ನಿಂತು ತೆಗೆದುಕೊಳ್ಳಬಹುದು. ಆಗ ಒಂದೊಂದು ಭಾವಚಿತ್ರದಲ್ಲಿಯೂ ಮನೆಯೂ ಚಿತ್ರವೂ ಮೂಡಿನಿಲ್ಲುವ ಭಂಗಿಯೇ ಬೇರೆಬೇರೆಯಾಗಿರುತ್ತದೆ. ಆ ಯಾವ ಒಂದು ಚಿತ್ರವೂ ಮನೆಯ ಪೂರ್ಣಚಿತ್ರವಾಗಲಾರದು. ಎಲ್ಲ ಚಿತ್ರಗಳಲ್ಲಿಯೂ ಸಮಸ್ಟಿ ರೂಪದಲ್ಲಿ ವ್ಯಕ್ತವಾದ ಚಿತ್ರವೇ ಮನೆಯ ನಿಜವಾದ ಚಿತ್ರವೆನಿಸುತ್ತದೆ. ಆದರೆ ಪ್ರತಿಯೊಂದು ಚಿತ್ರವೂ ಆ ಮನೆಯ ಚಿತ್ರದ ಅಂಗವೆನಿಸುತ್ತದೆ. ಅಖಂಡವಸ್ತುವಿನ ಒಂದೊಂದು ಭಾಗದ ಚಿತ್ರವೂ ಒಂದೊಂದು ನಯವೆನಿಸುತ್ತದೆ. ಆ ಚಿತ್ರಗಳನ್ನು ತೆಗೆದುಕೊಳ್ಳಲು ತನ್ನ ದೃಷ್ಟಿಕೋನವನ್ನು ಅವಲಂಬಿಸುವ ಚಿತ್ರಗಾರನ ದೃಷ್ಟಿ ಅನೇಕಾಂತ ದೃಷ್ಟಿಗಳಲ್ಲಿ ಒಬ್ಬೊಬ್ಬನದು ಒಂದೊಂದಾಗಿರುತ್ತದೆ. ಆದರೆ ಯಾವನೊಬ್ಬನ ದೃಷ್ಟಿಯೂ ಪೂರ್ಣದೃಷ್ಟಿಯಲ್ಲ. ಅವೆಲ್ಲ ಸೇರಿದಾಗಲೇ ಪೂರ್ಣದೃಷ್ಟಿಯೆನಿಸುವುದು.

	ಒಂದು ವಸ್ತುವಿನ ಇಲ್ಲವೆ ಸಮಗ್ರ ವಿಶ್ವದ ತಾತ್ತ್ವಿಕ ವಿಚಾರ, ದರ್ಶನಗಳು ಅನೇಕ ಅಪೇಕ್ಷೆಗಳಿಂದ ನಿಷ್ಪನ್ನವಾಗುವುದುಂಟು. ಈ ಅಪೇಕ್ಷೆ ಮನಸ್ಸಿನ ಸಹಜ ರಚನೆ, ಅದರ ಮೇಲಾಗುವ ಆಕಸ್ಮಿಕ ಸಂಸಾರಗಳು, ವಿಚಾರಿಸತಕ್ಕ ವಸ್ತುವಿನ ಸ್ವರೂಪ ಇತ್ಯಾದಿಗಳ ಸಮ್ಮಿಲನದಿಂದ ನಿರ್ಮಾಣವಾಗುವುದು. ಇಂಥ ಅಪೇಕ್ಷೆಗಳು ಹಲವು ಇರಬಹುದು. ವಸ್ತುವಿನ ವಿಚಾರದಲ್ಲಿ ಅಪೇಕ್ಷೆಗಳ ಆಶ್ರಯ ಅತ್ಯವಶ್ಯವಾಗಿದೆ. ವಿಚಾರ ಪ್ರವಾಹದ ಉಗಮಸ್ಥಾನಗಳು ಅಪೇಕ್ಷಗಳಾದುದರಿಂದ ಅವಕ್ಕೆ ದೃಷ್ಟಿಕೋನಗಳೆಂದು ಹೆಸರು. ದೃಷ್ಟಿಬಿಂದುಗಳೆಂದು ಹೇಳಬಹುದು. ಸಂಭಾವ್ಯ ಸರ್ವ ಅಪೇಕ್ಷೆಗಳಿಂದ-ವಿರುದ್ಧವೆಂದು ತೋರುವ ಅಪೇಕ್ಷೆಗಳಿಂದ ಕೂಡ-ಚಿಂತನ ಮತ್ತು ದರ್ಶನಗಳ ಸಾರ ಸಮುಚ್ಚಯವೇ ಒಂದು ವಿಷಯದ ಪೂರ್ಣ-ಅನೇಕಾಂತ ದರ್ಶನವಾಗುವುದು. ಪ್ರತಿಯೊಂದು ಅಪೇಕ್ಷೆಯಿಂದ ಉಂಟಾಗುವ ದರ್ಶನ ಪೂರ್ಣದರ್ಶನದ ಅಂಗವಾಗಿರುವುದು. ಇಂಥ ಅಂಗಗಳಲ್ಲಿ ಪರಸ್ಪರ ವಿರುದ್ದವಿದ್ದು ಪೂರ್ಣದರ್ಶನದಲ್ಲಿ ಸಮನ್ವಯವಾಗುವ ಕಾರಣದಿಂದ ವಸ್ತುತಃ ವಿರುದ್ದವೂ ಆಗಿರುತ್ತದೆ.

	ಜೈನದರ್ಶನದ ಪ್ರಕಾರ ನಯಗಳು ಏಳು : ಸಂಗ್ರಹನಯ (ಪದಾರ್ಥದ ಅಖಂಡತ್ವ ದರ್ಶನ), ವ್ಯಹಾರನಯ (ಭೇದಗಳ ದೃಷ್ಟಿಯಿಂದ ಅವಲೋಕನ), ಋಜು ಸೂತ್ರನಯ (ಸತ್ತಿನ ವರ್ತಮಾನ ಸ್ಥಿತಿಯ ದರ್ಶನ). ಈ ಮೂರು ನಯಗಳು ಶಬ್ದವನ್ನೂ ಶಬ್ದದ ಗುಣಧರ್ಮಗಳ ಆಶ್ರಯವನ್ನೂ ಹೊಂದದೆ, ವಸ್ತುವಿನ ವಿಚಾರ ಮಾಡುತ್ತವೆ. ಅದರಿಂದ ಈ ಮೂರೂ ಪ್ರಕಾರದ ತತ್ತ್ವ ಚಿಂತನೆಯೂ ಅರ್ಥನಯವೆನಿಸುತ್ತವೆ. ಇನ್ನು ಶಬ್ದನಯ (ಶಬ್ದದ ಗುಣ ಧರ್ಮಗಳ ಆಶ್ರಯವನ್ನು ಸ್ವೀಕರಿಸಿಯೂ ಅರ್ಥದ ವಿಚಾರ ಮಾಡುವ ಕ್ರಮ) ಸಮಭಿರೊಡನಯ (ಶಬ್ದಗಳ ಮೂಲಧಾತುಗಳನ್ನು ಗಮನಿಸಿದ ಒಂದೇ ಅರ್ಥದ ಶಬ್ದಗಳನ್ನು ನಿಜವಾಗಿ ಭಿನ್ನಾರ್ಥದವುಗಳೆಂದು ಹೇಳುವುದು). ಏವಂಭೂತನಯ (ವಸ್ತುವನ್ನು ಸದ್ಯದ ಕ್ರಿಯಾವಾಚಕದಿಂದ ನಿದರ್ಶಿಸುವುದು)-ಇವು ಇನ್ನು ಮೂರು ನಯಗಳು. ಈ ಆರೂ ನಯಗಳು ತರ್ಕಪ್ರಧಾನವಾದುವುಗಳು. ಇವಲ್ಲದೆ ನೈಗಮನಯವೂ ಒಂದುಂಟು. ಇದರಲ್ಲಿ ನಿಗಮ-ಅರ್ಥಾತ್ ದೇಶ ರೂಢಿಗೆ ಅನುಸರಿಸಿ, ಅಭೇದಗಾಮಿ ಹಾಗೂ ಭೇದಗಾಮಿಗಳೆರಡೂ ವಿಚಾರ ಕ್ರಮಗಳು ಸಮಾವೇಶವಾಗುತ್ತವೆ.

	ನಯವಾದ ಒಂದು ದೃಷ್ಟಿಯಾದರೆ, ಆ ದೃಷ್ಟಿಯ ದರ್ಶನ ಅಥವಾ ಫಲವೇ ಭಂಗವೆನಿಸುತ್ತದೆ. ಒಂದು ಪದಾರ್ಥವನ್ನು ಏಳು ದೃಷ್ಟಿಗಳಿಂದ-ನಯಗಳಿಂದ ವಿಚಾರಿಸಿದಾಗ, ಅದರ ಸಂಪೂರ್ಣ ಸತ್ಯ ಹೊಳೆಯುವಂತೆ, ಏಳು ನೋಟಗಳೂ ಭಂಗಗಳೂ ಸೇರಿದಾಗ ಸಂಪೂರ್ಣವಸ್ತುವಿನ ದರ್ಶನವಾಗುವುದು. ಯಾವುದೇ ಎರಡು ದರ್ಶನಗಳ ವಿಷಯಗಳು ತೀರ ವಿರುದ್ದವಾಗಿದ್ದು, ಅಂಥ ದರ್ಶನಗಳ ಸಮನ್ವಯಮಾಡುವ ದೃಷ್ಟಿಯಿಂದ ಆ ವಿಷಯಗಳಲ್ಲಿರುವ ಭಾವ-ಅಭಾವಾತ್ಮಕ ಎರಡೂ ಅಂಶಗಳನ್ನು ತೆಗೆದುಕೊಂಡು, ಅವುಗಳಿಂದ ಸಂಭವಿಸುವ ಭಂಗವನ್ನು ಸಿದ್ಧಗೊಳಿಸುವುದೇ ಸಪ್ತಭಂಗಿಯೆನಿಸುವುದು. ಸಪ್ತಭಂಗಿಯ ಆಧಾರವೇ ನಯ.

	ಸಪ್ತಭಂಗಿಗಳು-ಸ್ಯಾದಸ್ತಿ (ಒಂದು ಅಪೇಕ್ಷೆಯಿಂದ ವಸ್ತುವಿನ ಇರುವಿಕೆ), ಸ್ಯಾನ್ನಾಸ್ತಿ (ಇನ್ನೊಂದರ ಅಪೇಕ್ಷೆಯಿಂದ ಇಲ್ಲದಿರುವಿಕೆ), ಸ್ಯಾದಸ್ತಿ ನಾಸ್ತಿ (ಒಂದು ವಸ್ತು ಒಂದು ಕಾಲದಲ್ಲಿ ಇಲ್ಲ), ಸ್ಯದವಕ್ತವ್ಯಂ (ಒಂದು ವಸ್ತು ಒಂದು ಕಾಲದಲ್ಲಿ ಅನಿರ್ವಚನೀಯವಾಗಿದೆ), ಸ್ಯಾದಸ್ತ್ಯವಕ್ತವ್ಯಂ (ಒಂದು ವಸ್ತು ಇದ್ದೂ ಹೇಳಲಿಕ್ಕೆ ಬರುವುದಿಲ್ಲ). ಸ್ಯಾನ್ನಸ್ತ್ಯ ವಕ್ತವ್ಯಂ (ಒಂದು ವಸ್ತು ಒಂದು ಕಾಲದಲ್ಲಿ ಇರುವುದಿಲ್ಲ. ಮತ್ತು ಹೇಳಲಿಕ್ಕೂ ಬರುವುದಿಲ್ಲ), ಸ್ಯಾದಸ್ತಿನಾಸ್ತ್ಯ ವಕ್ತವ್ಯಂ (ಒಂದು ವಸ್ತು ಸ್ವರೂಪಾದಿಗಳಿಂದ ಇರುತ್ತಿದೆ; ಪರ ಸ್ವರೂಪಾದಿಗಳಿಂದ ಇರುವುದಿಲ್ಲ ಮತ್ತು ಹೇಳಲಿಕ್ಕೂ ಬರುವುದಿಲ್ಲ), ಈ ಏಳು ಭಂಗಿಗಳಲ್ಲಿ ಆಸ್ತಿ, ನಾಸ್ತಿ, ಅವಕ್ತವ್ಯ ಈ ಮೂರು, ಮೂಲ ಭಂಗಗಳಿಂದ ಉಳಿದ ನಾಲ್ಕು ಸಂಯುಕ್ತಭಂಗಗಳು ನಿರ್ಮಾಣವಾಗಿವೆ. ಹೀಗೆ ನಯವಾದ ಭಂಗವಾದಗಳು ಅನೇಕಾಂತ ದೃಷ್ಟಿಕ್ಷೇತ್ರದಲ್ಲಿ ತನ್ನಿಂದ ತಾನೇ ಬೆಳೆದು ಬಂದ ಫಲಗಳಾಗಿವೆ.

	ಅಹಿಂಸೆ : ಜೈನದರ್ಶನಕ್ಕೆ ಸ್ಯಾದ್ವಾದ ದೃಷ್ಟಿ-ಸಮನ್ವಯ ದೃಷ್ಟಿ-ಆಧಾರವಾಗಿರುವಂತೆ ಜೈನಧರ್ಮಕ್ಕೆ, ಆಚಾರಕ್ಕೆ, ಜೀವನಕ್ಕೆ, ಅಹಿಂಸೆಯೇ ಕೇಂದ್ರವಾಗಿದೆ. ಜೈನದರ್ಶನದಲ್ಲಿ ಹಿಂಸೆಯೆಂದರೆ ಜೀವವಧೆಯೆಂದಿಷ್ಟೇ ಅರ್ಥಮಾಡಿಲ್ಲ. ಪ್ರಮತ್ತಯೋಗದಿಂದ ಪ್ರಾಣದ ನಾಶವಾಗುವಿಕೆ ಹಿಂಸೆ ಎನಿಸುತ್ತದೆ. ಇಲ್ಲಿನ ಪ್ರಮತ್ತಯೋಗ ಶಬ್ದಕ್ಕೆ ಬಹಳ ಅರ್ಥವಿದೆ. ರಾಗ ದ್ವೇಷಗಳಿಂದ ಕೂಡಿದ ಮನೋವೃತ್ತಿಯವನಿಂದ ಒಂದು ವೇಳೆ ಅನ್ಯಪ್ರಾಣಿ ಹಿಂಸೆ ಆಗಲಿಕ್ಕಿಲ್ಲ. ಆದರೆ ಅವನು ತನ್ನ ನಿರ್ಮಲಮನೋವೃತ್ತಿಯನ್ನು ನಾಶಮಾಡಿಕೊಳ್ಳುತ್ತಾನೆ. ಇದರಿಂದ ಸ್ವಪ್ರಾಣಘಾತವಾಗುವುದು. ಉದಾಹರಣೆಗಾಗಿ ನಾವು ಕೆರಳಿ ನಾಯಿಗೋ ಬೆಕ್ಕಿಗೋ ಹೊಡೆಯಲೆಂದು ಕಲ್ಲೊಂದನ್ನು ಒಗೆಯುತ್ತೇವೆ. ಆ ಕಲ್ಲಿನ ಏಟನ್ನು ತಪ್ಪಿಸಿಕೊಂಡು ಆ ಪ್ರಾಣಿ ಓಡಿಹೋಗುತ್ತದೆ. ಹಿಂಸೆಯ ಪರಿಣಾಮ ಅದಕ್ಕೆ ಆಗದೆ ಹೋಯಿತು. ಆದರೆ ನಮ್ಮ ನಿರ್ಮಲ ಮನೋವೃತ್ತಿ ಮಾತ್ರ ನಷ್ಟವಾಯಿತು. ಮನಸ್ಸಿನ ಸಮತ್ವ ಕೆಟ್ಟಿತು. ದ್ವೇಷ-ಕ್ರೋಧಗಳು ಜನಿಸಿದುವು. ಅದರಿಂದ ಹಿಂಸೆಯ ಪರಿಣಾಮವಾದ ಅಶುಭಕರ್ಮದ ಬಂಧ ನಮಗೆ ಆಗಿಯೇ ತೀರುತ್ತದೆ. ಏಕೆಂದರೆ ಕಷಾಯದಿಂದ ಕೂಡಿ ಜೀವಪ್ರಾಣಗಳ ವಿಯೋಗದ ಕ್ರಿಯೆಗೆ ಪ್ರಚೋದನೆ ಸಿಗುವುದು-ಅದುವೇ ಹಿಂಸೆ ಎನಿಸುವುದು. ಅದರಿಂದ ರಾಗ-ದ್ವೇಷಾದಿ ಭಾವನೆಗಳ ಉತ್ಪತ್ತಿಯೇ ಮೊದಲು ಹಿಂಸೆಗೆ ಕಾರಣವಾಗಿದೆ. ಹೀಗಾಗಿ ಅಭಿಮಾನ, ಭಯ, ಜುಗುಪ್ಸೆ, ಹಾಸ್ಯ, ರತಿ, ಶೋಕ, ಕಾಮ, ಕೋಪ ಇತ್ಯಾದಿಗಳು ಹಿಂಸೆಯ ಪರ್ಯಾಯಗಳೆಂದು ಜೈನಾಚಾರ್ಯರು ಪ್ರತಿಪಾದಿಸಿದ್ದಾರೆ. ಈ ದೃಷ್ಟಿಯಿಂದ ಜಾಲಗಾರ ಮೀನುಗಳಿಗೆ ಬಲೆಯನ್ನು ಹಾಕಿ ಸಾಯಂಕಾಲದವರೆಗೆ ಕುಳಿತು, ಒಂದು ಮೀನೂ ಸಿಗದೆ ತಿರುಗಿ ಮನೆಗೆ ಬಂದರೂ ಅವನಿಗೆ ಹಿಂಸೆಯ ಕರ್ಮ ಬಂಧನವಿದೆ. ಕೃಷಿಕ ಸಾಯಂಕಾಲದವರೆಗೆ ನೆಲವನ್ನು ಉಳುವಾಗ ಹಲವು ಪ್ರಾಣಿಗಳು ಘಾತವಾದರೂ ಅವನಿಗೆ ಅಷ್ಟು ಕರ್ಮಬಂಧ ಇಲ್ಲ. ಏಕೆಂದರೆ ಅವನ ಮನಸ್ಸು ಪ್ರಮತ್ತಯೋಗದಿಂದ ಕೂಡಿರುವುದಿಲ್ಲ.

	ಅಹಿಂಸೆಯ ಈ ಸೂತ್ರ ಜೈನದರ್ಶನದ ಆದಿಸೂತ್ರವಿದ್ದಂತಿದೆ. ಹೇಗೆಂದರೆ ರಾಗದ್ವೇಷಾದಿಗಳಿಂದ ಆತ್ಮ ಪ್ರದೇಶದಲ್ಲಿ ಪರಿಸ್ಪಂದನಾತ್ಮಕ ಕ್ರಿಯೆ ನಡೆಯುವುದು. ಅದರಿಂದ ಕರ್ಮಬಂಧನವಿದೆ. ಕರ್ಮಬಂಧನದಿಂದ ಆತ್ಮನ ನಿಜರೂಪ ಮಲಿನವಾಗುವುದು. ಆಗ ಆತ್ಮನಲ್ಲಿ ವಿಕೃತಿ ಉಂಟಾಗುತ್ತದೆ. ಈ ವಿಕೃತಿ ಸಂಸಾರಕ್ಕೆ ಕಾರಣವಾಗಿದೆ. ಸಂಸಾರ ಮುಕ್ತಿಗೆ ಆತಂಕವಾಗಿದೆ. ಇಂಥ ಆತಂಕಗಳು ಮಾನವಾದರ್ಶಕ್ಕೆ ವಿಘಾತಕವಾಗಿದೆ. ಆದುದರಿಂದ ಜಿನಾಗಮಗಳು ರಾಗಾದಿಗಳು ಅಪ್ರಾದುರ್ಭಾವವೇ ಅಹಿಂಸೆ, ರಾಗಾದಿಗಳ ಉತ್ಪತ್ತಿಯೇ ಹಿಂಸೆ ಎಂದು ಸಾರುತ್ತವೆ. ಇದೇ ಜಿನಾಗಮದ ಸಾರ, ಜೈನದರ್ಶನದ ರಹಸ್ಯ.

	ಜೈನತತ್ತ್ವe್ಞÁನ ಹಾಗೂ ಆಚಾರಗಳಿಗೆ ನಿಕಟವಾದ ಸಂಬಂಧವಿದೆ. ಅಹಿಂಸಾಚರಣೆ, ತಪಸ್ಸುಗಳಿಂದ ಮಾನವ ದ್ರವ್ಯ ಸಮುದಾಯದೊಳಗೆ ಸಿಲುಕಿದ ಆತ್ಮತತ್ತ್ವವನ್ನು ಬೇರೆ ಮಾಡಿಕೊಳ್ಳುವುದು, ವಿಂಗಡಿಸಿಕೊಳ್ಳುವುದು, ಅವನ ಧ್ಯೇಯವಾಗಿದೆ. ಈ ಧ್ಯೇಯದ ಮಾರ್ಗದಲ್ಲಿ ಮುನ್ನಡೆಯವರೆಲ್ಲ ಸಾಧಕರು ಕೊನೆ ಮುಟ್ಟಿದವರು ಸಿದ್ಧರು. ಇದು ಜೈನದರ್ಶನದ ಸಂದೇಶ.
(ಎಂ.ಎ.)

III ಜೈನಧರ್ಮದ ಇತಿಹಾಸ

	ಜೈನದೃಷ್ಟಿಯಿಂದ ಕಾಲಪ್ರವಾಹ ಅನಾದಿಯೂ ಅನಂತರವೂ ಆಗಿದೆ. ಇದರಲ್ಲಿ ಆರು ವಿಭಾಗಗಳನ್ನು ಕಲ್ಪಿಸಲಾಗಿದೆ. 1 ಅತಿಸುಖವುಳ್ಳದು, 2 ಸುಖವುಳ್ಳದು, 3 ಸುಖದುಃಖವುಳ್ಳದು, 4 ದಃಖಸುಖವುಳ್ಳದು, 5 ದುಃಖವುಳ್ಳದು, 6 ಅತಿ ದುಃಖವುಳ್ಳದು. ಈ ಕಾಲಖಂಡಗಳು ತಿರುಗುತ್ತಿರುವ ಚಕ್ರದ ಪ್ರತಿಯೊಂದು ಭಾಗಗಳು ಕೆಳಗಿನಿಂದ ಮೇಲೆ ಮೇಲಿನಿಂದ ಕೆಳಗೆ ಆಗುವಂತೆ ಒಂದರ ಹಿಂದೊಂದು ಬಂದು ಹೋಗುತ್ತವೆ. ಇದರ ಮೇಲಿಂದ ಜಗತ್ತು ಒಮ್ಮೆ ಸುಖದಿಂದ ದುಃಖದ ಕಡೆಗೆ, ಇನ್ನೊಮ್ಮೆ ದುಃಖದಿಂದ ಸುಖದ ಕಡೆಗೆ ಸಾಗುತ್ತದೆ ಎಂದು ಗೊತ್ತಾಗುತ್ತದೆ. ಸುಖದಿಂದ ದುಃಖದ ಕಡೆಗೆ ಒಯ್ಯುವ ಕಾಲವಿಭಾಗಕ್ಕೆ ಜೈನ ಆಗಮಗಳು ಅವಸರ್ಪಿಣೀ ಕಾಲವೆಂದು ಹೇಳುತ್ತವೆ. ದುಃಖದಿಂದ ಸುಖದ ಕಡೆಗೆ ಜಗತ್ತು ಸಾಗುವ ಕಾಲ ಉತ್ಸರ್ಪಿಣೀ ಕಾಲವಾಗಿದೆ. ಇವುಗಳ ಅವಧಿ ಲಕ್ಷಾವಧಿ ವರ್ಷಗಳದ್ದಾಗಿದೆ.

	ಪ್ರತಿಯೊಂದು ಅವಸರ್ಪಿಣೀ ಹಾಗೂ ಉತ್ಸರ್ಪಿಣೀ ಕಾಲದ ದುಃಖಸುಖವುಳ್ಳ ಭಾಗದಲ್ಲಿ-ಅಂದರೆ ಚತುರ್ಥ ಕಾಲದಲ್ಲಿ-24 ತೀರ್ಥಂಕರರ ಜನ್ಮವಾಗುವುದು. ಅವರು ಜಿನರಾಗಿ ಜೈನಧರ್ಮದ ಉಪದೇಶ ಮಾಡುವರು.

	ಈಗ ನಡೆಯುತ್ತಿರುವುದು ಅವಸರ್ಪಿಣೀ ಕಾಲ. ಅದರಲ್ಲಿ ಇಂದು ನಾವು ಐದನೆಯ ಕಾಲವಿಭಾಗದಲ್ಲಿ (ದುಃಖವುಳ್ಳುದು) ಜೀವಿಸುತ್ತಿದ್ದೇವೆ. ಈ ಮೊದಲೇ ಆಗಿಹೋದ ಚತುರ್ಥ ಕಾಲದಲ್ಲಿ ಈ ಯುಗದ 24 ತೀರ್ಥಂಕರರ ಜನ್ಮವಾಯಿತು. ಅವರಲ್ಲಿ ಭಗವಾನ್ ಋಷಭದೇವ ಆದಿತೀರ್ಥಂಕರ, ಭಗವಾನ್ ಮಹಾವೀರ ಅಂತಿಮ ತೀರ್ಥಂಕರ.

	ಭಗವಾನ್ ಋಷಭದೇವ ಜನಿಸುವ ಪೂರ್ವದಲ್ಲಿ ಮನುಗಳಿಂದ ಮಾನವತೆ ರೂಪುಗೊಳ್ಳುತ್ತ ಬಂತು. ಈ ಮನುಗಳಿಗೆ ಜೈನಗ್ರಂಥಗಳಲ್ಲಿ ಕುಲಂಕರರೆಂದೂ ಹೆಸರುಂಟು. ಈ ಕುಲಂಕರರು ಹದಿನಾಲ್ಕು ಜನರು : 1 ಪ್ರತಿಶ್ರುತಿ, 2 ಸನ್ಮತಿ, 3 ಕ್ಷೇಮಂಕರ, 4 ಕ್ಷೇಮಂಧರ, 5 ಸೀಮಂಕರ, 6 ಸೀಮಂಧರ, 7 ವಿಮಲವಾಹನ, 8 ಚಕ್ಷುಷಂತ, 9 ಯಶಸ್ವಿ, 10 ಅಭಿಚಂದ್ರ, 11 ಚಂದ್ರಾಭ, 12 ಮರುದೇವ, 13 ಪ್ರಸೇನಜಿತ, 14 ನಾಭಿರಾಜ. ಇವರು ಕಾಲಖಂಡದ ಮೂರನೆಯ ವಿಭಾಗದಲ್ಲಿ ಜನಿಸಿದರು. ಮೊದಲಿನ ಎರಡು ಕಾಲಖಂಡದ ಅವಧಿ ಭೋಗಭೂಮಿಕಾಲ ಆಗಿತ್ತು. ಆಗ ಮಾನವ ಜೀವನ ಭೋಗಪ್ರಧಾನವಾಗಿತ್ತು. ಭೋಗಜೀವನ ಕ್ರಮದಿಂದ ಕುಲಂಕರರ ನೇತೃತ್ವದಲ್ಲಿ ಮಾರ್ಪಟ್ಟು ಕರ್ಮಭೂಮಿಗೆ ಆಸ್ಪದ ಮಾಡಿಕೊಟ್ಟಿತು. ಈ ಕೃತಯುಗದ ಆದಿಯಲ್ಲಿ ಭಗವಾನ್ ಋಷಭದೇವ ಜನಿಸಿ ಜನರಿಗೆ ಧರ್ಮವನ್ನು ಬೋಧಿಸಿದ.

	ಆದಿನಾಥ : ಋಷಭದೇವ ಹದಿನಾಲ್ಕನೆಯ ಮನುವಾದ ನಾಭಿರಾಜ ಹಾಗೂ ಅವನ ಹೆಂಡತಿ ಮರುದೇವಿಯರ ಮಗ. ಇವನಿಗೆ ಆದಿಬ್ರಹ್ಮನೆಂದೂ ಹೆಸರು. ಇವನೇ ಜನರಿಗೆ ಲೋಕವ್ಯವಹಾರವನ್ನೂ ಅಹಿಂಸಾಧರ್ಮವನ್ನೂ ಬೋದಿಸಿದ. ಈ ವಿಷಯವನ್ನು ಸಿದ್ಧಾಂತ ಚಕ್ರವರ್ತಿ ನೇಮಿಚಂದ್ರಾಚಾರ್ಯ ತನ್ನ ತ್ರಿಲೋಕಸಾರ ಗ್ರಂಥದಲ್ಲಿ ಸೂಚಿಸಿದ್ದಾನೆ.

	ಭಗವಾನ್ ಋಷಭದೇವನಿಗೆ ಇಬ್ಬರು ಹೆಂಡರು. ಒಬ್ಬಳ ಹೆಸರು ಸುನಂದಾ, ಇನ್ನೊಬ್ಬಳು ನಂದಾ. ಇವರಿಂದ ಭರತ, ಬಾಹುಬಲಿ ಮೊದಲಾದ ನೂರು ಜನ ಗಂಡುಮಕ್ಕಳೂ ಬ್ರಾಹ್ಮಿ, ಸುಂದರಿ ಎಂಬಿಬ್ಬರು ಹೆಣ್ಣುಮಕ್ಕಳೂ ಜನಿಸಿದರು. ಹಿರಿಯ ಮಗನಾದ ಭರತ ಈ ಯುಗದ ಮೊದಲ ಚಕ್ರವರ್ತಿ.

	ಈ ಪ್ರಪಂಚ ಕುಡು ಮಿಂಚಿನ ಪೊಳೆಪು. ಇಂದ್ರನ ಬಿಲ್, ಬೊಬ್ಬುಳಿಕೆ ಯುರ್ಬಿನಂತೆ-ಎಂದು ತಿಳಿದು, ಋಷಭದೇವ ಇನ್ ತಿರಿಯಲಾ¾õÉಂ ಭವಾಂಭೋದಿಯೊಳ್ ಎಂದು ನಿಶ್ಚಯಿಸಿ ಮುಕ್ತಿಸಾಧನೆಗಾಗಿ ಪರಿನಿಷ್ಕ್ರಮಣ ಮಾಡಿದ. ಮುಂದೆ ತಪಸ್ಸನ್ನು ಆಚರಿಸಿ, ಕೇವಲ e್ಞÁನವನ್ನು ಪಡೆದ. ಆಗ ಆತ ಜಿನನೆನಿಸದೆ. ಅಂದಿನಿಂದ ಅವನು ಧರ್ಮೋಪದೇಶ ಮಾಡುತ್ತ ವಿಹರಿಸಿ, ಕೊನೆಗೆ ಕೈಲಾಸಪರ್ವತದಲ್ಲಿ ಮುಕ್ತನಾದ.

	ಕೆಲವು ತೀರ್ಥಂಕರರು : ಋಷಭದೇವನ ತರುವಾಯ 23 ಜನ ತೀರ್ಥಂಕರರಾದರು. ಇವರೆಲ್ಲರೂ ಜೈನಧರ್ಮದ ಪ್ರವರ್ತಕರು. ಇವರಲ್ಲಿ ಎರಡನೆಯವನಾದ ಅಜಿತನಾಥ, ನಾಲ್ಕನೆಯವನಾದ ಅಭಿನಾಂದನನಾಥ, ಐದನೆಯವನಾದ ಸುಮತಿನಾಥ, ಹದಿನಾಲ್ಕನೆಯವನಾದ ಅನಂತನಾಥ ಇವರು ಅಯೋಧ್ಯಪಟ್ಟಣದಲ್ಲಿ ಜನಿಸಿದರು. ಮೂರನೆಯವನಾದ ಸಂಭವನಾಥನ ಜನ್ಮ ಶ್ರಾವಸ್ತೀ ನಗರದಲ್ಲಿ ಆಯಿತು. ಆರನೆಯವನಾದ ಪದ್ಮಪ್ರಭ ಕೌಶಾಂಗಿಯಲ್ಲಿ ಹುಟ್ಟಿದ. ಏಳನೆಯವನಾದ ಸುಪಾಶ್ರ್ವನಾಥ, ಇಪ್ಪತ್ತಮೂರನೆಯವನಾದ ಪಾಶ್ರ್ವನಾಥ ಇವರು ವಾರಾಣಾಸಿಯಲ್ಲಿ ಜನ್ಮವೆತ್ತಿದರು. ಎಂಟನೆಯವನಾದ ಚಂದ್ರಪ್ರಭನ ಜನ್ಮ ಚಂದ್ರಪುರಿಯಲ್ಲಾಯಿತು. ಒಂಬತ್ತನೆಯವನಾದ ಪುಷ್ಪದಂತ ಹುಟ್ಟುದುದು ಕಾಕಂದಿನಗರದಲ್ಲಿ, ಹತ್ತನೆಯ ತೀರ್ಥಂಕರನಾದ ಶೀತಲನಾಥನ ಜನ್ಮ ಭದ್ದಲಪುರದಲ್ಲಾಯಿತು. ಹನ್ನೊಂದನಯವನಾದ ಶ್ರೇಯಾಂಸನಾಥ ಸಿಂಹಪುರಿಯಲ್ಲಿ (ಸಾರನಾಥ) ಜನ್ಮತಾಳಿದ. ಚಂಪಾಪುರ ಹನ್ನೆರಡಯೆ ತೀರ್ಥಂಕರನಾದ ವಾಸುಪೂಜ್ಯನ ಜನ್ಮಭೂಮಿ. ಕಂಪಿಲನಗರ ಹದಿಮೂರನೆಯ ತೀರ್ಥಂಕರ ವಿಮಲನಾಥನ ಜನ್ಮಸ್ಥಳ. ಹದಿನೈದನೆಯವನಾದ ಧರ್ಮನಾಥ ರತ್ನಪುರಿಯಲ್ಲಿ ಹುಟ್ಟಿದ, ಹಸ್ತಿನಾಪುರಿಯಲ್ಲಿ ಹದಿನಾರನೆಯವನಾದ ಶಾಂತಿನಾಥ, ಹದಿನೇಳನೆಯವನಾದ ಕುಂಥುನಾಥ, ಹದಿನೆಂಟನೆಯವನಾದ ಅರನಾಥ-ಇವರ ಜನ್ಮವಾಯಿತು. ಮಿಥಿಲಾನಗರಿಯಲ್ಲಿ ಹತ್ತೊಂಬತ್ತನೆಯ ಮಲ್ಲಿನಾಥ, ಇಪ್ಪತೊಂದನೆಯ ನಮೀನಾಥರು ಜನಿಸಿದರು. ಇಪ್ಪತ್ತನೆಯವನಾದ ಮುನಿಸುವ್ರತನಾಥ ರಾಜಗೃಹದಲ್ಲಿ ಹುಟ್ಟಿದ. ಇವರಲ್ಲಿ ಧರ್ಮ, ಅರ, ಕುಂಥುನಾಥರ ಜನ್ಮ ಕುರುವಂಶದಲ್ಲಾಗಿದೆ. ಮುನಿಸುವ್ರತನಾಥ ಹುಟ್ಟುದುದು ಹರಿವಂಶದಲ್ಲಿ, ಉಳಿದವರು ಇಕ್ಷ್ವಾಕುವಂಶದಲ್ಲಿ ಜನಿಸಿದರು. ಎಲ್ಲರೂ ಸಂನ್ಯಸನ ಸ್ವೀಕರಿಸಿ, ಭಗವಾನ್ ಋಷಭ ದೇವನಂತೆ ತಪಶ್ಚರ್ಯಮಾಡಿ, ಕೇವಲe್ಞÁನನ್ನು ಸಂಪಾದಿಸಿದರು. ಆಮೇಲೆ ಧರ್ಮೋಪದೇಶ ಮಾಡಿದರು. ಕೊನೆಗೆ ಮುಕ್ತರಾದರು. ಇವರಲ್ಲಿ ಭಗವಾನ್ ವಾಸ್ತುಪೂಜ್ಯ ಚಂಪಾಪುರದಲ್ಲಿ ನಿರ್ವಾಣಹೊಂದಿದ. ಉಳಿದವರು ಸಮ್ಮೇದಗಿರಿಯಲ್ಲಿ ಮುಕ್ತರಾದರು.

	ಭಗವಾನ್ ನೇಮಿನಾಥ : ಭಗವಾನ್ ನೇಮಿನಾಥ ಇಪ್ಪತ್ತೆರಡನೆಯ ತೀರ್ಥಂಕರ. ಇವನು ಶ್ರೀಕೃಷ್ಣನ ಕಕ್ಕನ ಮಗ. ಯದುವಂಶದ ಸಮುದ್ರ ವಿಜಯ ಹಾಗೂ ಶಿವಾದೇವಿಯರ ಮಗ. ಜುನಾಗಢದ ರಾಜಪುತ್ರಿಯಾದ ರಾಜಮತಿಯೊಡನೆ ನೇಮಿನಾಥನ ಮದುವೆ ನಿಶ್ಚಯವಾಯಿತು. ಮದುವೆಯ ಕಾಲದಲ್ಲಿ ಅಗಲಿರುವ ಪಶುಹಿಂಸೆಯನ್ನು ಕಂಡು ನೇಮಿನಾಥ ನಿಗ್ರ್ರಂಥ ದೀಕ್ಷೆಯನ್ನು ಸ್ವೀಕರಿಸಿದ. ಅಹಿಂಸಾಧರ್ಮದ ಪ್ರವರ್ತಕನಾದ, ಅವನು ಸಮೀಪದಲ್ಲಿರುವ ಗಿರ್‍ನಾರ್ ಪರ್ವತಕ್ಕೆ ಹೋಗಿ ಸಹಸ್ರಾಮವನದಲ್ಲಿ ದಿಗಂಬರನಾಗಿ ತಪಸ್ಸು ಮಾಡಿದ. ಕೇವಲe್ಞÁನವನ್ನು ಹೊಂದಿ ಧರ್ಮೋಪದೇಶಮಾಡಿ ಅಲ್ಲಿಯೇ ಮುಕ್ತಿಯನ್ನು ಹೊಂದಿದ.

	ಭಗವಾನ್ ಪಾಶ್ರ್ವನಾಥ : ಭಗವಾನ್ ಪಾಶ್ರ್ವನಾಥ 23ನೆಯ ತೀರ್ಥಂಕರ. ಇವನು ಕಾಶಿಯ ರಾಜನಾದ ಅಶ್ವಸೇನ ಹಾಗೂ ಮಾಯಾದೇವಿಯರ ಮಗ. ಇವನು ಚಿಕ್ಕಂದಿನಿಂದಲೂ ವೈರಾಗ್ಯಭಾವ ಉಳ್ಳವ. ಗಂಗಾತೀರದಲ್ಲಿ ನಡೆಯುವ ಹಿಂಸಾಮಯ ಯಜ್ಞವನ್ನು ವಿರೋಧಿಸಿ ಅದರಲ್ಲಿ ಸಾಯುತ್ತಿರುವ ನಾಗಯುಗ್ಮವನ್ನು ಉಳಿಸಿದ. ಆ ನಾಗದಂಪತಿಗಳ ಗುರುತಿಗಾಗಿ ಪಾಶ್ರ್ವನ ಮೂರ್ತಿಯ ಮೇಲೆ ಸರ್ಪನ ಸಹಸ್ರ ಹೆಡೆಯ ಛತ್ರವನ್ನು ಕಾಣಬಹುದು. ಪಾಶ್ರ್ವನಾಥ ತೀರ್ಥಂಕರನಾಗಿ ಕಾಶಿ, ಕೋಸಲ, ಅಂಗ, ವಂಗ, ಮಗಧ, ಕಲಿಂಗ, ಪಾಂಚಾಲ ಮೊದಲಾದ ರಾಜ್ಯಗಳಲ್ಲಿ ಜೈನಧರ್ಮವನ್ನು ಬೋಧಿಸುತ್ತ ಸಂಚರಿಸಿದ. ಅನೇಕ ರಾಜಮಹಾರಾಜರೂ ಇವನ ಶಿಷ್ಯತ್ವವನ್ನು ಸ್ವೀಕರಿಸಿದರು. 70 ವರ್ಷಗಳವರೆಗೆ ಧರ್ಮೋಪದೇಶಮಾಡಿ, ತನ್ನ 100ನೆಯ ವರ್ಷದಲ್ಲಿ ಸಮ್ಮೇದಗಿರಿಯಲ್ಲಿ ಮುಕ್ತಿಯನ್ನು ಹೊಂದಿದ. ಈ ಸಮ್ಮೇದಗಿರಿ ಪಾಶ್ರ್ವನಾಥ ಬೆಟ್ಟ ಎಂದು ಈಗಲೂ ಬಿಹಾರದಲ್ಲಿ ಪ್ರಸಿದ್ದವಿದೆ. ಈ ಮಹಾಪುರುಷ ಕ್ರಿ. ಪೂ. 700 ಸುಮಾರಿನಲ್ಲಿ ಬಾಳಿದವನು. ಇವನ ಚರಿತ್ರೆಯನ್ನು ಕುಮಾರತೀರ್ಥ ಎಂಬ ಪರ್ವತದಲ್ಲಿ ಇರುವ ಆನೆ ಗುಹೆಯಲ್ಲಿಲ್ಲ (ಹಾಥಿಪುರ) ಕೆತ್ತಲಾಗಿದೆ.

	ಭಗವಾನ್ ಮಹಾವೀರ : ಈಗ ಚಂಪಾರಣ್ಯ, ಮುಜಫರ್‍ಪುರ, ದರ್ಭಾಂಗ ಮತ್ತು ಛಪರಾ ಜಿಲ್ಲೆಗಳಿಗೆ ಸೇರಿದ ಭಾಗಕ್ಕೆ ಪ್ರಾಚೀನ ಕಾಲದಲ್ಲಿ ವಜ್ಜಿಯೋ ದೇಶ ಅಥವಾ ಲಿಚ್ಛವಿಯರ ನಾಡು ಎಂದು ಹೆಸರಿತ್ತು. ಈ ದೇಶದ ರಾಜಧಾನಿಯಾದ ವೈಶಾಲಿ-ಈಗಿನ ಬಸಾಢ-ನಗರ ಪ್ರಾಚೀನ ಕಾಲದಲ್ಲಿ ಬಹು ಪ್ರಸಿದ್ದವಾಗಿತ್ತು. ಈ ನಗರದ ಮಧ್ಯದಲ್ಲಿ ಗಂಡಕೀ ನದಿ ಹರಿಯುತ್ತಿತ್ತು. ಆ ನದಿಯ ಎರಡು ತೀರಗಳಲ್ಲಿ ವೈಶಾಲಿಯ ಎರಡು ಉಪನಗರಗಳಿದ್ದುವು. ಅವುಗಳಲ್ಲಿ ಒಂದು ಕ್ಷತ್ರಿಯ ಕುಂಡ ಗ್ರಾಮ. ಈ ಗ್ರಾಮಕ್ಕೆ ಸಿದ್ದಾರ್ಥ ಗಣರಾಜನಾಗಿದ್ದ. ಇಂಥ ಕೆಲವು ಜನ ಗಣರಾಜನ ನೇತೃವೆನಿಸಿ ಚೇಟಕ ಮಹಾರಾಜ ಅಧಿರಾಜಮನೇ ಚೇಟಕ. ಇವನ ಹಿರಿಯ ಮಗಳಾದ ತ್ರಿಶಲಾದೇವಿಯನ್ನು ಸಿದ್ದಾರ್ಥನಿಗೆ ಕೊಟ್ಟಿತ್ತು. (ತ್ರಿಶಲಾದೇವಿ ಚೇಟಕರಾಜನ ತಂಗಿಯೆಂದು ಶ್ವೇತಾಂಬರರು ತಿಳಿಯುವರು). ಈ ದಂಪತಿಗಳ ಮಗನೇ ಭಗವಾನ್ ಮಹಾವೀರ, ಜೈತ್ರ ಶುಕ್ಲ ತ್ರಯೋದಶಿ ಆತನ ಜನ್ಮತಿಥಿ.

	ಸಿದ್ದಾರ್ಥ ತ್ರಿಶಲಾದೇವಿಯವರು ಪಾಶ್ರ್ವನಾಥ ತೀರ್ಥಂಕರರ ಶ್ರಮಣ ಪರಂಪರೆಯ ಅನುಯಾಯಿಗಳಾಗಿದ್ದರು. ಇವರ ಮನೆತನ ಲಿಚ್ಛವಿಯರಲ್ಲಿ ಒಂದು ಪಂಗಡವಾದ ಜಾತೃಗಳಿಗೆ ಸೇರಿದುದಾಗಿದೆ. ವರ್ಧಮಾನ ಚಿಕ್ಕವಯಸ್ಸಿನಲ್ಲಿಯೇ ವ್ಯಾಕರಣ ಸಾಹಿತ್ಯ ಮೊದಲಾದ ವಿಷಯಗಳಲ್ಲಿ e್ಞÁನಿಯೆನಿಸಿದ. ಇವನ ಬುದ್ಧಿವಂತಿಕೆಯು ಪ್ರಭಾವಕ್ಕೆ ಒಳಗಾಗಿ ಸಂಜಯ ಮತ್ತು ವಿಜಯ ಎಂಬ ಮುನಿಗಳು ಇವನಿಗೆ ಸನ್ಮತಿ ಎಂದು ಹೆಸರನ್ನು ಇಟ್ಟರು. ಈ ರೀತಿ ಬಾಲ್ಯದಲ್ಲಿಯೇ ಮಹಾವೀರನಿಗೆ ತ್ಯಾಗಿಗಳ ಸಹವಾಸ ಲಭಿಸಿತು. ಮಹಾವೀರ ಲಗ್ನಕ್ಕೆ ಒಪ್ಪದೆ ತನ್ನ ಮೂವತ್ತನೆಯ ವರ್ಷದಲ್ಲಿ-ಮಾರ್ಗಶೀರ್ಷ ಕೃಷ್ಣ ದಶಮಿಯ ದಿನ-ಆರು ಉಪವಾಸಗಳ ತರುವಾಯ-ಜಿನದೀಕ್ಷೆಯನ್ನು ಸ್ವೀಕರಿಸಿದ. ಕ್ಷತ್ರಿಯ ಕುಂಡಗ್ರಾಮದ ಹೊರಗಿರುವ e್ಞÁತೃಷಂಡ ಉದ್ಯಾನಕ್ಕೆ ಹೋಗಿ ಐದು ಮುಷ್ಟಿಯಿಂದ ತನ್ನ ಕೂದಲುಗಳನ್ನು ಕಿತ್ತುಕೊಂಡು ಶ್ರಮಣನಾದ.

	ಆಮೇಲೆ ಮಹಾವೀರ ಹನ್ನೆರಡು ವರ್ಷಗಳ ಕಾಲ ದೀರ್ಘತಪಸ್ಸನ್ನು ಕಠೋರ ರೀತಿಯಿಂದ ಆಚರಿಸಿದ. ಅನಂತರ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಸುತ್ತಾಡಿದ. ಒಂದು ದಿನ ಜಂಭಿಯಾ ಗ್ರಾಮದ ಹೊರಗೆ, ಋಜುವಾಲಿಕಾ ನದಿಯ ತೀರದಲ್ಲಿ ಸಾಲವೃಕ್ಷಗಳ ನೆರಳಲ್ಲಿ ಧ್ಯಾನಮಗ್ನನಾಗಿ ಕುಳಿತಾಗ ವೈಶಾಖ ಶುಕ್ಲ ದಶಮಿಯ ದಿನ ಕೇವಲ e್ಞÁನ ಪ್ರಾಪ್ತಿಯಾಯಿತು.

	ಭಗವಾನ್ ಮಹಾವೀರ ತೀರ್ಥಂಕರನಾಗಿ ಜೈನಧರ್ಮದ ಪ್ರಚಾರಕ್ಕಾಗಿ ದೇಶದ ವಿವಿಧ ಭಾಗಗಳಲ್ಲಿ ಮೂವತ್ತು ವರ್ಷಗಳವರೆಗೆ ವಿಹರಿಸಿದ. ಅವನು ಅಹಿಂಸಾ ಸಂಯಮಗಳು ತಪಗಳಲ್ಲಿ ಉತ್ಕøಷ್ಟ ಧರ್ಮಗಳೆಂದು ಹೇಳಿದ್ದಾನೆ. ಅಹಿಂಸೆಯ ಪ್ರತಿಷ್ಟೆಗಾಗಿ ಅತ್ಯಧಿಕ ಸಮತೆಯ ಆವಶ್ಯಕತೆ ಇದೆ. ಇದಕ್ಕಾಗಿ ಅಪರಿಗ್ರಹ, ಸತ್ಯ, ಅಚೌರ್ಯಗಳ ಅಚರಣೆಯ ಅಗತ್ಯವಿದೆ. ಹೀಗೆ ಪರಿಶುದ್ದ ಅರ್ಚನೆಯಿಂದ ತ್ಯಾಗದ ನಿಗ್ರ್ರಂಥ ವೃತ್ತಿಯಿಂದ ಆತ್ಮವಿಕಾಸಕ ತುತ್ತತುದಿಗೆ ಹೋಗಿ ನಿಲ್ಲುವುದೇ ಸಿದ್ದ ಪದವಾಗಿದೆ. ಎಂದು ಆತ ಪ್ರತಿಪಾದಿಸಿದ್ದಾನೆ. ಈಶ್ವರಕರ್ತೃತ್ವವನ್ನು ನಿಷೇಧಿಸಿ, ಪುರಷಾರ್ಥದ ಮಹತ್ತ್ವವನ್ನು ತೋರಿಸಿದ್ದಾನೆ. ಹೀಗೆ ಉಪದೇಶ ಮಾಡುತ್ತ ಮಹಾವೀರ ವಿಹರಿಸಿ, ಕೊನೆಗೆ ಬಿಹಾರದಲ್ಲಿರುವ ಪಾವಾಪುರಿಗೆ ಬಂದ. ಅಲ್ಲಿ ನಾಲ್ಕು ತಿಂಗಳವರೆಗೆ ಇದ್ದು ಧರ್ಮೋಪದೇಶ ಮಾಡಿದ. ಕಾರ್ತಿಕ ಕೃಷ್ಣ ಚತುರ್ದಶಿಯ (ಕ್ರಿ.ಪೂ. 527) ಕೊನೆಯ ಜಾವದಲ್ಲಿ ನಿರ್ವಾಣವನ್ನು ಹೊಂದಿದ.

	ಸಂಘಸ್ಥಾಪನೆ : ಭಗವಾನ್ ಮಹಾವೀರ ತನ್ನ ಸಿದ್ಧಾಂತದ ಪ್ರಚಾರ ಮಾಡಲಿಕ್ಕೆಂದು-ತನ್ನ ಉಪದೇಶವನ್ನು ಜನಸಾಮಾನ್ಯರಿಗೆ ಮುಟ್ಟಿಸಲಿಕ್ಕೆಂದು-ಸಾಲದು, ಸಾಧ್ವಿ, ಶ್ರಾವಕ, ಶ್ರಾವಿಕಾ ಈ ಪ್ರಕಾರ ಚತುರ್ವಿಧ ಸಂಘವನ್ನು ಸ್ಥಾಪಿಸಿದ. ಇದಕ್ಕೆ ಜೈನಸಂಘ ಎಂದು ಹೆಸರು. ಇದರಲ್ಲಿ ಸಾಧು ಸಾಧ್ವಿಗಳಿಗೆ ಮುನಿ ಆರ್ಯಿಕೆಯರೆಂದೂ ಹೆಸರಿದೆ. ಈ ಮುನಿ ಆರ್ಯಿಕೆಯರು ಗೃಹತ್ಯಾಗಿಗಳು ಶ್ರಾವಕ ಶ್ರಾವಕಿಯರು ಗೃಹಜೀವನದವರು, ಸಂಘದ ಇವೆರಡೂ ವಿಭಾಗಗಳು ಒಂದಕ್ಕೊಂದು ಪರಸ್ಪರ ಪೋಷಕವಾಗಿದೆ.

	ಉಚ್ಚ ಆಧ್ಯಾತ್ಮಿಕ ಮೆಟ್ಟಿಲನ್ನೇರಿದ ಮುನಿಗಳು ನಿಗ್ರ್ರಂಥರಾಗಿರುವರು. ಇವರಿಗೆ ದಿಗಂಬರ ಸಾಧುಗಳೆಂದೂ ಹೇಳುವರು. ಈ ದಿಂಗಂಬರತ್ವವನ್ನು ಆಚರಿಸಲಿಕ್ಕೆ ಸಾಧ್ಯವೆನಿಸದ ಕೆಲವು ಜನ ಸಾಧುಗಳು ಕಾಲಕ್ರಮದಲ್ಲಿ ಬಿಳಿಯ ಬಟ್ಟೆಗಳನ್ನು ಧರಿಸಿದವರಾಗಿರುತ್ತಿದ್ದರು. ಇಂತವರಿಗೆ ಶ್ವೇತಾಂಬರ ಸಾಧುಗಳೆನ್ನುತ್ತಿದ್ದರು. ಆರಂಭದಲ್ಲಿ ಮುನಿಗಳಲ್ಲಿ ಮಾತ್ರ ಈ ದಿಗಂಬರ ಶ್ವೇತಾಂಬರ ಎಂದು ಎರಡು ವರ್ಗಗಳು ಇದ್ದುವು. ಬರಬರುತ್ತ ಕ್ರಿ. ಪೂ. ಸು. 320ರ ಸುಮಾರಿಗೆ ಜೈನ ಸಂಘದಲ್ಲಿ ಸ್ಪಷ್ಟ ಎರಡು ವಿಭಾಗಗಳು ಕಂಡುಬರಹತ್ತಿದವು. ಶ್ರಾವಕರಲ್ಲಿ ದಿಗಂಬರತ್ವವನ್ನು ಮನ್ನಿಸುವವರು. ಶ್ವೇತಾಂಬರತ್ವವನ್ನು ಸ್ವೀಕರಿಸುವವರು ಎಂದು ಎರಡು ಪಂಗಡಗಳು ಆದರು. ಮೂಲ ತಾತ್ತ್ವಿಕ ಮತಭೇದಗಳಿಲ್ಲದಿದ್ದರೂ ಈ ಎರಡು ಪಂಗಡಗಳು ಜೈನಸಂಘದಲ್ಲಿ ಇಂದಿಗೂ ಅಸ್ತಿತ್ವದಲ್ಲಿ ಇವೆ.

	ದಿಗಂಬರ : ದಿಗಂಬರರು ನಿಗ್ರ್ರಂಥ ಅವಸ್ಥೆಯೇ ತಪಸ್ಸಿನ ಉಚ್ಚಸ್ಥಿತಿಯೆನ್ನುವವರು. ಇವರ ತೀರ್ಥಂಕರರ ವಿಗ್ರಹಗಳೆಲ್ಲ ದಿಗಂಬರ ರೂಪದಲ್ಲಿ ಇರುತ್ತವೆ. ದಿಬಂಗರತ್ವವಿಲ್ಲದೆ ಮುಕ್ತಿ ಇಲ್ಲವೆಂದು ಇವರ ಅಭಿಮತ. ಅದಕ್ಕೆ ಅನುಗುಣವಾದ ಆಗಮಗಳನ್ನು ಇವರು ರೂಪಸಿದ್ದಾರೆ.

	ಶ್ವೇತಾಂಬರ : ಇವರು ಮುಕ್ತಿಗೆ ದಿಗಂಬರತ್ವದ ತೀರ ಆವಶ್ಯಕತೆಯನ್ನು ಸ್ವೀಕರಿಸುವುದಿಲ್ಲ. ಅದರಿಂದ ತಮ್ಮ ಸಾಧು ಹಾಗೂ ತೀರ್ಥಂಕರ ಮೂರ್ತಿಗಳನ್ನು ವಸ್ತ್ರ ಧರಿಸಿದವರನ್ನಾಗಿ ಗಣಿಸಿ ಪೂಜಿಸುತ್ತಾರೆ. ಮಲ್ಲಿನಾಥ ತೀರ್ಥಂಕರ ಸ್ತ್ರೀ ಎಂದು ಇವರ ಕಲ್ಪನೆ. ಇವರಲ್ಲಿ ಕಠೋರ ವ್ರತಗಳ ಆಚರಣೆ ಇಲ್ಲ. ಸಾಧುಗಳು ಅನೇಕ ಜೀವನಾವಶ್ಯಕ ಉಪಕರಣಗಳನ್ನು ಹತ್ತಿರ ಇಟ್ಟುಕೊಳ್ಳುತ್ತಾರೆ. ಇವೆಲ್ಲ ಆಚಾರವಿಚಾರಗಳನ್ನು ಪ್ರತಿಪಾದಿಸುವ ಆಗಮಗಳನ್ನು ಇವರು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.

	ಈಗ ಈ ಎರಡು ಪಂಗಡಗಳ ಜೈನರು ಭಾರತದ ಎಲ್ಲ ಪ್ರಾಂತಗಳಲ್ಲಿಯೂ ವಾಸಿಸುತ್ತಾರೆ.

	ಜೈನಾಗಮ ಹಾಗೂ ಆಚಾರ್ಯರು : ಜೈನಗ್ರಂಥಗಳ ಸಮೂಹಕ್ಕೆ ಆಗಮ ಎನ್ನುವರು. ಇವುಗಳ ಮೂಲ ಬಹು ಪ್ರಾಚೀನತಮವಾಗಿದೆ. ತೀರ್ಥಂಕರರು ಕೂಡ ತೀರ್ಥಪ್ರವರ್ತನದ ಸಮಯಕ್ಕೆ ತಮ್ಮ ಗಣಧರರಿಗೆ ಎಲ್ಲಕ್ಕೂ ಮೊದಲು ಪೂರ್ವಗತ ಸೂತ್ರಗಳ ಅರ್ಥವನ್ನು ವಿವರಿಸುತ್ತಿದ್ದರು. ಈ ಪೂರ್ವಗತ ಸೂತ್ರಗಳಲ್ಲಿಯ e್ಞÁನನಿಧಿಯನ್ನು ಶ್ರುತವನ್ನು ಗ್ರಥಿಸುವ ಕಾಲಕ್ಕೆ ಗಣಧರರು ಅದನ್ನು ಆಜಾರಾಂಗವೇ ಮೊದಲಾದ ಹನ್ನೆರಡು ಅಂಗಗಳಲ್ಲಿ ವಿಭಾಗಿಸಿಕೊಂಡು ವಿವರಿಸಿದರು. ಅದರಿಂದ ಸೂತ್ರಕರ್ತೃ ಗಣಧರ, ಅರ್ಥದ ಪ್ರಣೇತೃ ಜಿನ

	ಉತ್ಪಾದವೇ ಮೊದಲಾದ ಪೂರ್ವಗಳು ಹದಿನಾಲ್ಕು ಇವೆ. ಅವುಗಳ e್ಞÁನ ಸಮೂಹವನ್ನು ಗಣಧರರು ಆಚಾರಾಂಗವೇ ಇತ್ಯಾದಿ ಹನ್ನೆರಡು ಅಂಗಗಳಲ್ಲಿ ವಿಭಾಗಿಸಿಕೊಂಡಿದ್ದಾರೆ. ಪೂರ್ವಗಳು ಲುಪ್ತವಾಗಿವೆ. ಶ್ವೇತಾಂಬರ ಹಾಗೂ ದಿಗಂಬರ ಮಾನ್ಯತೆಯ ಗ್ರಂಥಗಳನ್ನೆಲ್ಲ ಸೇರಿಸಿದರೆ ಅಂಗಗಳು ಉಪಲಬ್ದವಾಗಿವೆ ಎಂದು ಹೇಳಲಡ್ಡಿಯಿಲ್ಲ.

	ಭಗವಾನ್ ಮಹಾವೀರ ತೀರ್ಥಂಕರ ಕ್ರಿ. ಪೂ. 527ರಲ್ಲಿ ನಿರ್ವಾಣ ಹೊಂದಿದನಷ್ಟೆ. ಆಮೇಲೆ ಗೌತಮ, ಸುಧರ್ಮ, ಜಂಬೂಸ್ವಾಮಿಗಳೆಂಬ ಮೂವರು ಕೇವಲಿಗಳು ಕ್ರಮದಿಂದ ಶ್ರುತವನ್ನು ಬೋಧಿಸುತ್ತ ಬಂದರು. ತರುವಾಯ ವಿಷ್ಣು, ನಂದಿ ಮಿತ್ರ, ಅಪರಾಜಿತ, ಗೋವರ್ಧನ, ಭದ್ರಬಾಹುಗಳೆಂಬ ಐದು ಜನ ಶ್ರತಕೇವಲಿಗಳು ಆಗಮಗಳ ಉಪದೇಶ ಮಾಡುತ್ತ ಬಂದರು. ಇಷ್ಟರಲ್ಲಿ 162 ವರ್ಷಗಳು (170 ವರ್ಷಗಳೆಂದು ಶ್ವೇತಾಂಬರರು ತಿಳಿಯುತ್ತಾರೆ.) ಉರುಳಿದವು. ಇಲ್ಲಿಯವರೆಗೆ ಶ್ರುತದ e್ಞÁನ ಸಂಪೂರ್ಣವಾಗಿತ್ತು. ಕೊನೆಯ ಶ್ರುತಕೇವಲಿಯಾದ ಭದ್ರಬಾಹು ಚಂದ್ರಗುಪ್ತನೊಡನೆ ದಕ್ಷಿಣಕ್ಕೆ ಬಂದ. ಶ್ರವಣಬೆಳ್ಗೊಳದಲ್ಲಿ ನಿರ್ವಾಣಹೊಂದಿದ.

	ಶ್ರುತಕೇವಲಿಗಳ ತರುವಾಯ ಹನ್ನೊಂದು ಜನ ದಶಪೂರ್ವಧರರು ಒಬ್ಬರ ಅನಂತರ ಒಬ್ಬರು ಯುಗಮುಖ್ಯರಾಗಿ ಬಾಳಿದರು. ಅವರಿಂದ 183 ವರ್ಷಗಳು ಉರುಳಿದವು. ಆಮೇಲೆ ಐವರು ಏಕಾದಶಾಂಗಧಾರಿಗಳು ಬಾಳಿದರು. ಅವರು 220 ವರ್ಷಗಳಷ್ಟು ಕಾಲ ಆಗಮವನ್ನು ಶ್ರುತರೂಪದಲ್ಲಿ ಮುಂದುವರಿಸಿದರು. ತರುವಾಯ ನಾಲ್ವರು ಆಚಾರಾಂಗಧಾರಿಗಳು ಯುಗಪ್ರಮುಖರಾಗಿದ್ದರು. ಅವರು 118 ವರ್ಷ ಕಾಲ ಬಾಳಿದರು. ಈ ಪರಂಪರೆಯ ಲೋಹಾಚಾರ್ಯನೆಂಬಾತ ಕ್ರಿ. ಶ. 136 ನಿರ್ವಾಣಹೊಂದಿದ.

	ಧರಸೇನ : ಲೋಹಾಚಾರ್ಯ ನಿರ್ವಾಣಹೊಂದಿದ ಕಾಲದಲ್ಲಿ ಗಿರ್ ನಾರ್‍ನ ಚಂದ್ರಗುಹೆಯಲ್ಲಿ ಧರಸೇನನೆಂಬ ಆಚಾರ್ಯನಿದ್ದ. ಅವನು ಅಷ್ಟಾಂಗ ನಿಮಿತ್ತ e್ಞÁನಿಯೂ ಆಗಮದ ಎಲ್ಲ ಅಂಗಗಳನ್ನು ಬಲ್ಲವನೂ ಆಗಿದ್ದನೆಂದು ಧವಲಟೀಕೆಯಿಂದ ತಿಳಿಯುತ್ತದೆ. ಆತ ಭೂತಬಲಿ ಹಾಗೂ ಪುಷ್ಪದಂತರಿಗೆ ಶ್ರುತೋಪದೇಶವನ್ನು ಮಾಡಿದ. ಅಲ್ಲದೆ ಗ್ರಂಥ ನಿರ್ಮಿಸಲೂ ಹೇಳಿದ. 

	ಭೂತಬಲಿ : ಧರಸೇನ ಶ್ರುತೋಪದೇಶವನ್ನು ಮಾಡುವುದಕ್ಕಾಗಿ ಮಹಿಮಾನಗರಿಯಲ್ಲಿದ್ದ ಮುನಿಸಂಘದಿಂದ ಇಬ್ಬರನ್ನು ಕರೆಸಿಕೊಂಡ. ಅವರಲ್ಲಿ ನರವಾಹನನೆಂಬ ರಾಜಪುತ್ರ ಒಬ್ಬ. ಅವನ ದೀಕ್ಷೆ ಕೈಕೊಂಡಮೇಲೆ ಭೂತಬಲಿ ಆಚಾರ್ಯನೆಂದು ಹೆಸರಾದ. ಕ್ರಿ. ಶ. 156ರಲ್ಲಿ ಇದ್ದ ಆತ ಷಟ್‍ಖಂಡಾಗಮದ ಆರಂಭದ ಸತ್‍ಪ್ರರೂಪಣದ 177 ಸೂತ್ರಗಳನ್ನುಳಿದು ಮುಂದಿನ ಭಾಗವನ್ನು ಪೂರ್ಣ ಬರೆದು ಮುಗಿಸಿದ್ದಾನೆ.

	ಪುಷ್ಪದಂತ : ಇವನೂ ಧರಸೇನನಿಂದ ಮಹಿಮಾನಗರಿಯಿಂದ ಕರೆಸಲ್ಪಟ್ಟ ಸುಬುದ್ಧಿ ಎಂಬ ಶ್ರೇಷ್ಠಿ. ಮುಂದೆ ಸಂನ್ಯಸನ ಸ್ವೀಕರಿಸಿ ಪುಷ್ಪದಂತನೆಂದು ಪ್ರಸಿದ್ಧನಾದ. ಇವನು ಆಗಮದ ಉಪದೇಶವನ್ನು ಹೊಂದಿ, ಬನವಾಸಿ ನಾಡಿನಲ್ಲಿ ನಿಂತು ಷಟ್‍ಖಂಡಾಗಮದ ಆರಂಭದ ಸತ್‍ಪ್ರರೂಪಣದ 177 ಸೂತ್ರಗಳನ್ನು ಮಾತ್ರ ರಚಿಸಿದ್ದಾನೆ.

	ಗುಣಧರ : ಇವನು ಕ್ರಿ. ಶ. 2ನೆಯ ಶತಮಾನದಲ್ಲಿ ಬಾಳಿದವ. ಈತ ಕಷಾಯ ಪ್ರಾಭೃತವನ್ನು ಬರೆದಿದ್ದಾನೆ. ಇದು ಪೆಜ್ಜದೋಸವಾಹುದದ ಸಂಗ್ರಹವಾಗಿದೆ. ಇದರಲ್ಲಿ 180 ಗುಹೆಗಳು ಇವೆ.

	ಉಮಾಸ್ವಾಮಿ : ಇವನು ಜೈನತತ್ತ್ವe್ಞÁನ. ಆಚಾರ, ಭೂಗೋಳ, ಖಗೋಳ, ಜೀವವಿದ್ಯಾ, ಪದಾರ್ಥವಿಜ್ಞಾನ ಇತ್ಯಾದಿ ವಿಷಯಗಳನ್ನು ಸಂಗ್ರಹವಾಗಿ ವರ್ಣಿಸುವ ತತ್ತ್ವಾರ್ಥಸೂತ್ರ ಎಂಬ ಗ್ರಂಥವನ್ನು ರಚಿಸಿದ್ದಾನೆ. ಇದು ದಿಬಂಗರ ಶ್ವೇತಾಂಬರರೆಲ್ಲರಿಗೂ ಮಾನ್ಯವಾದ ಗ್ರಂಥವಾಗಿದೆ. ಇವನ ಕಾಲ ಇನ್ನೂ ನಿಶ್ಚಿತವಾಗಿಲ್ಲ.

	ವೀರಸೇನ : ಇವನು ಒಂಬತ್ತನೆಯ ಶತಮಾನದ ಆಚಾರ್ಯ, ಷಟ್ ಖಂಡಾಗಮದ ಆರಂಭದ ಐದು ಖಂಡಗಳ ಮೇಲೆ ಧವಲಟೀಕೆಯನ್ನು ರಚಿಸಿದ್ದಾನೆ. ಇದರಲ್ಲಿ 72 ಸಾವಿರ ಶ್ಲೋಕಗಳಿವೆ.

	ಜಿನಸೇನ : ಇವನು ತನ್ನ ಗುರುವಾದ ವೀರಸೇನನೊಂದಿಗೆ ಗುಣಧರ ಮುನಿಯ ಕಷಾಯಪ್ರಾಭೃತಕ್ಕೆ 60 ಸಾವಿರ ಶ್ಲೋಕ ಪ್ರಮಾಣವುಳ್ಳ ಜಯ ಧವಳ ಟೀಕಾಗ್ರಂಥವನ್ನು ರಚಿಸಿದ. ಅಲ್ಲದೆ ಪಾಶ್ರ್ವಾಭ್ಯುದಯ ಮಹಾಪುರಾಣವನ್ನೂ (ಪೂರ್ವಾರ್ಧ) ಬರೆದ. ರಾಷ್ಟ್ರಕೂಟ ಅರಸನಾದ ನೃಪತುಂಗನ ಗುರುವಾಗಿದ್ದ ಇವನು ಭಗವದ್ ಜಿನಸೇನನೆಂದೂ ಹೇಳುವರು.

	ಗುಣಭದ್ರ : ಮಾನ್ಯಖೇಟದಲ್ಲಿದ್ದ ಇವನು ಭಗವದ್ ಜಿನಸೇನನ ಶಿಷ್ಯ. ಮಹಾಪುರಾಣವನ್ನು ಪೂರ್ಣಗೊಳಿಸಿದ್ದಲ್ಲದೆ ಆತ್ಮಾನುಶಾಸನ ಎಂಬ ಗ್ರಂಥವನ್ನು ರಚಿಸಿದ.

	ಕುಂದಕುಂದಾಚಾರ್ಯ : ಪುಣ್ಯಾಸ್ರವ ಕಥಾಕೋಶದಲ್ಲಿ ಇವನ ವಿಷಯದಲ್ಲಿ ಹೀಗೆ ಹೇಳಿದೆ : ದಕ್ಷಿಣ ಭಾರತದಲ್ಲಿ ಪಿಡಥನಾಡು ಸೀಮೆಗೆ ಸೇರಿದ ಕುರುಮರಈ ಎಂಬ ನಗರವಿದೆ. ಅಲ್ಲಿ ಕರಮುಂದನೆಂಬ ಧನಿಕ. ಅವನ ಹೆಂಡತಿ ಶ್ರೀಮತಿ, ಅವರ ಮಗನೇ ಕುಂದಕುಂದ. ಸೀಮಂಧರ ಸ್ವಾಮಿ ಈತನನ್ನು ವಿಶ್ವಬುದ್ಧಿಮಾನ್ ಎಂದಿದ್ದಾನೆ. ಅಲ್ಲದೆ ಈತನಿಗೆ ಪದ್ಮನಂದಿ, ವಕ್ರಗ್ರೀವ, ಗೃಧ್ರಪಿಂಛ, ಏಲಾಚಾರ್ಯ ಎಂಬ ಹೆಸರುಗಳೂ ಇವೆ. ಈತ ತನ್ನ ಕೊನೆಯ ಕಾಲವನ್ನು ಉತ್ತರ ಆರ್ಕಾಟ್ ಜಿಲ್ಲೆಯ ವಾಂಡಿವಾಶ್ ಎಂಬಲ್ಲಿರುವ ಒಂದು ಗಿರಿಯಲ್ಲಿ ತಪೋನಿಷ್ಠನಾಗಿ ಕಳೆದ. ಕುಂದಾದ್ರಿಯಲ್ಲಿ ಇವನ ಪಾದಚಿಹ್ನೆಗಳು ಇವೆ. ಇವನ ಕಾಲವನ್ನು ಕ್ರಿ. ಶ. ಮೊದಲನೆಯ ಶತಮಾನವೆಂದು ಎ. ಎನ್. ಉಪಾಧ್ಯೆ ಅವರು ನಿಶ್ಚಯಿಸಿದ್ದಾರೆ. ಪ್ರಾಭೃತತ್ರಯ, ಷಟ್ ಷಾಹುಡ, ನಿಯಮಸಾರ, ರಯಣಸಾರ, ದ್ವಾದಶಾನುಪ್ರೇಷೆ, ದಶಭಕ್ತಿ ಕುಂದಕುಂದಾಚಾರ್ಯನ ಪ್ರಾಕೃತ ಗ್ರಂಥಗಳಾಗಿವೆ.

	ಸಮಂತಭದ್ರ : ಈತ ಫಣಿಮಂಡಲಾಂತರ್ಗತ ಉರಗಪುರದ ರಾಜನ ಮಗ. ಉರಗಪುರ ಪಾಂಡ್ಯದೇಶ ರಾಜಧಾನಿಯಾಗಿತ್ತು. ಇವನ ಗೃಹಸ್ಥಾಶ್ರಮದ ಹೆಸರು ಶಾಂತಿವರ್ಮ ಎಂದು. ಈತ ವಾದದಲ್ಲಿ ಪ್ರವೀಣ. ತರ್ಕವೇದಾಂತ ವಿದ್ಯೆಗಳಲ್ಲಿ ನುರಿತ ವಿದ್ವಾಂಸ. ಈತ ಆಪ್ತಮೀಮಾಂಸಾ, ರತ್ನಕರಂಡ, ಶ್ರಾವಕಾಚಾರ, ಸ್ವಯಂಭೂಸ್ತೋತ್ರ, ಯುಕ್ತ್ಯಾನುಶಾಸನ ಇತ್ಯಾದಿ ಸಂಸ್ಕøತ ಗ್ರಂಥಗಳನ್ನು ರಚಿಸಿದ್ದಾನಲ್ಲದೆ ನ್ಯಾಯಶಾಸ್ತ್ರ, ಅನೇಕಾಂತ ವಿದ್ಯೆಗಳಿಗೆ ಅಸ್ತಿವಾರ ಹಾಕಿದ್ದಾನೆ.

	ಸಿದ್ದಸೇನ : ಈತ ಸನ್ಮತಿತರ್ಕವೆಂಬ ಪ್ರಾಕೃತ ಗ್ರಂಥದಲ್ಲಿ ನಯವಾದದ ವಿವೇಚನೆಯನ್ನು ಮಾಡಿದ್ದಾನೆ; ಸಂಸ್ಕøತ ಭಾಷೆಯಲ್ಲಿ ದ್ವಾತ್ರಿಂಶಿಕಾ, ನ್ಯಾಯಾವತಾರ ಎಂಬೆರಡು ಗ್ರಂಥಗಳನ್ನು ರಚಿಸಿದ್ದಾನೆ.

ಶಾಕಟಾಯನ : ಈತ ರಾಷ್ಟ್ರಕೂಟ ರಾಜನಾದ ನೃಪತುಂಗನ ಸಮಕಾಲೀನ, ಆ ರಾಜನ ಸ್ಮøತಿಗಾಗಿ ವ್ಯಾಕರಣಕ್ಕೆ ಅಮೋಘ ವೃತ್ತಿಯನ್ನು ಬರೆದಿದ್ದಾನೆ. ಈತ ಯಾಪನೀಯ ಸಂಘದ ಆಚಾರ್ಯ, ಸ್ತ್ರೀಮುಕ್ತಿ, ಕೇವಲಮುಕ್ತಿ ಎಂಬುವುದು ಈತನ ಇನ್ನೆರಡು ಕೃತಿಗಳು.

	ಅನಂತವೀರ್ಯ : ಈತ ಅಕಲಂಕನ ಸಿದ್ಧಿವಿನಿಶ್ಚಯದ ಮೇಲೆ ಟೀಕಾ ಗ್ರಂಥವನ್ನು ಬರೆದಿದ್ದಾನೆ.

	ಪ್ರಭಾಚಂದ್ರ : 980ರಿಂದ 1065ರವರೆಗೆ ಇದ್ದ ಈತ ಧಾರಾಧೀಶ ಭೋಜನ ಸಮಕಾಲೀನ. ಪ್ರಮೇಯ ಕಮಲಮಾರ್ತಾಂಡವನ್ನು ಬರೆದಿದ್ದಾನೆ. ಲಘೀಯಸ್ತ್ರಯದ ಮೇಲಿರುವ ನ್ಯಾಯಕುಮುದಚಂದ್ರ ಎಂಬ ಟೀಕಾ ಗ್ರಂಥ ಈತನದೇ. ಇವನು ದಿಗಂಬರ ಮತಕ್ಕೆ ಹೆಚ್ಚಿನ ಪುಷ್ಟಿಯನ್ನು ಕೊಟ್ಟ.

	ವಿದ್ಯಾನಂದ : ಇವನು ಅಕಲಂಕನ ಭಾಷ್ಯಕಾರ. ಪ್ರಮಾಣಪರೀಕ್ಷಾ ಎಂಬ ಸ್ವತಂತ್ರ ಗ್ರಂಥವನ್ನೂ ಬರೆದಿದ್ದಾನೆ. ಇದಲ್ಲದೆ ತತ್ತ್ವಾರ್ಥಶ್ಲೋಕ ವಾರ್ತಿಕ, ಆಪ್ತಪರೀಕ್ಷಾ, ಯಕ್ತ್ಯಾನುಶಾಸನ ಪರೀಕ್ಷಾ, ಯಕ್ತ್ಯಾನುಶಾಸನ ಅಷ್ಟಸಹಸ್ರೀ ಮೊದಲಾದ ಗ್ರಂಥಗಳನ್ನೂ ರಚಿಸಿದ್ದಾನೆ. ಈತ ಅನೇಕಾಂತವಾದದ ವಿಕಾಸಕ್ಕೆ ಕಾರಣನಾದ.

	ವಾದಿರಾಜ : ಪ್ರಭಾಚಂದ್ರನ ಸಮಕಾಲೀನನಾದ ಈತ ಅಕಲಂಕನ ನ್ಯಾಯ ವಿನಿಶ್ಚಯದ ಮೇಲೆ ವಿವರಣವನ್ನು ಕೊಟ್ಟಿದ್ದಾನೆ. ಇದು ಒಂದು ಪ್ರಮಾಣ ಗ್ರಂಥವಾಗಿದೆ.

	ಹರಿಭದ್ರ : ಶಾಸ್ತ್ರವಾರ್ತಾಸಮುಚ್ಚಯ ಮತ್ತು ಷಡ್‍ದರ್ಶನಸಮುಚ್ಚಯಗಳಲ್ಲಿ ಆ ಕಾಲದ ಎಲ್ಲ ದರ್ಶನಗಳ ಪ್ರಮಾಣ ವಿಚಾರವನ್ನೂ ಈತ ಸಮಾಲೋಚಿಸಿದ್ದಾನೆ. ಅಲ್ಲದೆ ಷೋಡಶಕ, ಅಷ್ಟಕ, ಲೋಕತತ್ತ್ವನಿರ್ಣಯ, ಯೋಗದೃಷ್ಟಿಸಮುಚ್ಚಯ, ಯೋಗವಿಂಶಿಕಾ ಇತ್ಯಾದಿ ಇವನ ಪ್ರಸಿದ್ದ ಗ್ರಂಥಗಳಾಗಿವೆ. ಇವುಗಳಲ್ಲಿ ಇವನು ದಾರ್ಶನಿಕ ವಿಚಾರಗಳನ್ನು ಮಂಡಿಸಿದ್ದಾನೆ.

	ರವಿಷೇಣ : ಈತ 678ರಲ್ಲಿ ಪದ್ಮಪುರಾಣವನ್ನು ರಚಿಸಿದ. ಇದರಲ್ಲಿ ಜೈನ ಪರಂಪರೆಯ ರಾಮಕಥೆಯಿದೆ. ಇದು ವಿಮಲಸೂರಿಯ ಪ್ರಾಕೃತ ಕೃತಿ ಪಉಮಚರಿಯದ ಪಲ್ಲವಿತ ಛಾಯಾನುವಾದವಾಗಿದೆ.

	ಜಟಾಸಿಂಹನಂದಿ : ಈತ ವರಾಂಗಚರಿತವನ್ನು ರಚಿಸಿದ್ದಾನೆ.

	ನೇಮಿಚಂದ್ರ : ಹತ್ತನೆಯ ಶತಮಾನದವನಾದ ಈತ ಸಿದ್ಧಾಂತ ಚಕ್ರವರ್ತಿ. ಚಾಮುಂಡರಾಯನ ಗುರು. ಶ್ರವಣಬೆಳ್ಗೊಳದಲ್ಲಿ ಇದ್ದವ. ಗೊಮ್ಮಟಸಾರ, ತ್ರಿಲೋಕಸಾರಗಳನ್ನು ರಚಿಸಿದ್ದಾನೆ. 

	ಪೂಜ್ಯಪಾದ : ಈತ ಕರ್ನಾಟಕದಲ್ಲಿರುವ ಕೊಳ್ಳೇಗಾಲದಲ್ಲಿದ್ದ ಮಾದವಭಟ್ಟ, ಶ್ರೀದೇವಿಯವರ ಮಗ. 5ನೆಯ ಶತಮಾನದ ಆಚಾರ್ಯ. ಇವನಿಗೆ ದೇವನಂದಿ, ಜಿನೇಂದ್ರಬುದ್ದಿಗಳೆಂದೂ ಹೆಸರು. ಜೈನೇಂದ್ರ ವ್ಯಾಕರಣ ಗ್ರಂಥವನ್ನು ರಚಿಸಿದ್ದಾನೆ. ಸರ್ವಾರ್ಥಸಿದ್ಧಿ, ಸಮಾಧಿವೃತ್ತಗಳು; ಇವನ ಇತರ ಗ್ರಂಥಗಳಾಗಿವೆ.

	ಕವಿಪರಮೇಷ್ಠಿ ಇವನ ಯಾಗ ಗ್ರಂಥವೂ ಉಪಲಬ್ದವಿಲ್ಲ. ಗದ್ಯರೂಪದಲ್ಲಿ ತ್ರಿಷಷ್ಟಿಶಕಲಾಪುರುಷರ ಚರಿತ್ರೆಯನ್ನು ಬರೆದಂತೆ ತಿಳಿಯುತ್ತದೆ. ಭಗವಾನ್ ಜಿನಸೇನಾಚಾರ್ಯರು ತಮ್ಮ ಮಹಾಪುರಾಣದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

	ಸೋಮದೇವ ಸೂರಿ : ದೇವಸಂಘದ ಆಚಾರ್ಯನಾದ ಈತ ಯಶಸ್ತಿಲಕ ಎಂಬ ಮಹಾಕಾವ್ಯವನ್ನು 979ರಲ್ಲಿ ಬರೆದ. ಇವನ ನೀತಿವಾಕ್ಯಾಮೃತವೂ ಪ್ರಸಿದ್ಧ ಗ್ರಂಥವಾಗಿದೆ.

	ಹೀಗೆ ಹಲವು ಜನ ಆಚಾರ್ಯಪುರುಷರು ಹುಟ್ಟಿ ಪ್ರಾಕೃತ, ಅಪಭ್ರಂಶ, ಸಂಸ್ಕøತ ಇತ್ಯಾದಿ ಭಾಷೆಗಳಲ್ಲಿ ಆಗಮ ಗ್ರಂಥಗಳನ್ನು ರಚಿಸಿದ್ದಾರೆ. ಅಲ್ಲದೆ ತಮಿಳು, ಕನ್ನಡ, ಹಿಂದಿ, ಗುರಾಥಿ, ಬಂಗಾಲಿ, ರಾಜಸ್ಥಾನಿ ಇತ್ಯಾದಿ ವಿವಿಧ ಭಾಷೆಗಳಲ್ಲಿಯೂ ಗ್ರಂಥಗಳನ್ನು ರಚಿಸಿದ್ದಾರೆ. ಹೀಗೆ ಜೈನ ಆಗಮಿಕ ವಾಙ್ಮಯ ವಿಪುಲವಾಗಿದೆ.				(ಎಂ.ಎ.)

Iv ಜೈನ ಆಚಾರಗಳು

	ಘಾತಕರ್ಮವಿನಾಶಕರೂ ಸರ್ವಜ್ಞರೂ ಮೋಕ್ಷಪಥಪ್ರದರ್ಶಕರೂ ಆದವರೇ ಜಿನರು. ಜಿನರಿಂದಲೇ, ಪ್ರಪ್ರಥಮವಾಗಿ, ಉಪದಿಷ್ಟವಾದ ಆಚಾರಗಳೇ ಜೈನಾಚಾರಗಳು. ಸರ್ವಜ್ಞರಾದ ಆ ತೀರ್ಥಂಕರರು ಓಂಕಾರರೂಪವೂ ಸರ್ವಭಾಷಾತ್ಮಕವೂ ಮೃದುಮಧುರ ಗಂಭೀರವೂ ಆದ ದಿವ್ಯಧ್ವನಿಯಿಂದ ಹೇಳಲು ಸಾಧ್ಯವಾದ ಪ್ರe್ಞÁಪನೀಯ ಭಾವವನ್ನು ದ್ವಾದಶಾಂಗರೂಪ ಶ್ರುತದಲ್ಲಿ ಪ್ರe್ಞÁಪಿಸಿದ್ದಾರೆ. ಅದೆಲ್ಲವನ್ನು ಸಪ್ತದ್ರ್ಧಿಸಂಪನ್ನರೂ ಬೀಜಬುದ್ಧಿ ಎಂಬ ಬುದ್ಧಿಯುಳ್ಳವರೂ ಆದ ವೃಷಭಸೇನಾದಿ ಗೌತಮಾಂತ್ಯಗಣಂಧರಪರಮೇಷ್ಠಿಗಳು ದ್ರವ್ಯಶ್ರುತ ರೂಪವಾಗಿ ರಚಿಸಿದ್ದಾರೆ. ಆಚಾರಾಂಗ, ಸೂತ್ರಕೃತಾಂಗ, ಸ್ಥಾನಾಂಗ, ಸಮ ರೂಪವಾಗಿ ರಚಿಸಿದ್ದಾರೆ. ಆಚಾರಾಂಗ, ಸೂತ್ರಕೃತಾಂಗ, ಸ್ಥಾನಾಂಗ, ಸಮವಾಯಾಂಗ, ವ್ಯಾಖ್ಯಾಪ್ರಜ್ಞಪ್ತಿ, e್ಞÁತೃಧರ್ಮಕಥಾಂಗ, ಉಪಾಸಕಾಧ್ಯಯನಾಂಗ, ಅಂತಃಕೃದ್ದಶಾಂಗ, ಅನುತ್ತರೋಪದಿಕದಶಾಂಗ, ಪ್ರಶ್ನವ್ಯಾಕರಣಾಂಗ, ವಿಪಾಕ ಸೂತ್ರ ಮತ್ತು ದೃಷ್ಟಿವಾದಾಂಗ ಎಂಬ ಹನ್ನೆರಡು ಅಂಗಗಳಲ್ಲಿ ಜೈನಾಚಾರಗಳು ಒಂದನೆಯ ಆಚಾರಾಂಗದಲ್ಲಿಯೂ ಏಳನೆಯ ಉಪಾಸಕಾಧ್ಯಯನದಲ್ಲಿಯೂ ಬಹುವಿಸ್ತಾರವಾಗಿ ವರ್ಣಿಸಲ್ಪಟ್ಟಿವೆ.

	ಪಾಪಕ್ರಿಯಾನಿವೃತ್ತಿಯೇ ಸದಾಚಾರ. ಪಾಪಪ್ರವೃತ್ತಿಯೇ ದುರಾಚಾರ; ಸದಾಚಾರ ಸುಖಕ್ಕೆ ಹೇತು, ದುರಾಚಾರ ದುಃಖಕಾರಣ. ಆದ್ದರಿಂದ ದುರಾಚಾರವನ್ನು ಬಿಟ್ಟು ಸದಾಚಾರವನ್ನಾಚರಿಸಬೇಕೆಂದು ಜೈನಾಗಮ ಬೋಧಿಸುತ್ತದೆ.

	ಯಾವ ಕ್ರಿಯಾನುಷ್ಠಾನಗಳಿಂದ ಪಾಪಬಂಧವಾಗದೆ ಸ್ವಪರಹಿತವಾಗುತ್ತದೋ ಅದು ಆಚರ-ಸದಾಚಾರ, ಯಾವ ನಡತೆಗಳಿಂದ ತತ್ತ್ವ ರುಚಿರೂಪಸಮ್ಯತ್ವಕ್ಕೂ ಅಹಿಂಸಾದಿ ಪಂಚವ್ರತಗಳಿಗೂ ದೂಷಣೆ ಬರುವುದಿಲ್ಲವೋ ಅವೆಲ್ಲವೂ ಜೈನರಿಗೆ ಮಾನ್ಯವಾದ ಆಚಾರಗಳು. ಸರ್ವಜೀವಮೈತ್ರಿ. ಗುಣಜನಾದರಣೆ, ದೀನದುಃಖಿಗಳ ಮೇಲೆ ಕಾರುಣ್ಯ, ವಿಪರೀತವರ್ತನೆಗಾರರಲ್ಲಿ ಮಾಧ್ಯಸ್ಥವೃತ್ತಿ-ಈ ನಾಲ್ಕು ಭಾವನೆಗಳು ಜ್ಯನಾಚಾರಗಳ ಮೂಲಾಧಾರಗಳು. ಜೈನಾಚಾರ ಎರಡು ವಿಧ-ಒಂದು ಯತ್ಯಾಚಾರ, ಮತ್ತೊಂದು ಶ್ರಾವಕಾಚಾರ. ಮಹಾವ್ರತರೂಪ ಸಕಲ ಚಾರಿತ್ರ್ಯವನ್ನೂ ಪಾಲಿಸುವುದು ಯತ್ಯಾಚಾರ. ಪಂಚಾಣುವ್ರತ, ಪವಿಕಲಚಾರಿತ್ರಗಳನ್ನು ಪಾಲಿಸುವುದು ಶ್ರಾವಕಾಚಾರ. ಯತಿ, ಮುನಿ, ಭಿಕ್ಷು, ತಪಸ್ವೀ, ಸಂಯಮೀ, ಯೋಗಿ, ಶ್ರಮಣ, ತಾಪಸೀ ಇವೆಲ್ಲ ಯತಿಗಳ ನಾಮಾಂತರಗಳು. ಗೃಹೀ, ಗೃಹಮೇಧೀ, ಸಾಗಾರ, ಶ್ರಾವಕ ಇವೆಲ್ಲ ಶ್ರಾವಕರ ನಾಮಾಂತರಗಳು.

	ಯತ್ಯಾಚಾರ : ಯಾವ ಪ್ರಾಣಿಗೂ ಬಾಧೆಯಾಗದಂತೆ ಯತ್ಯಾಚಾರ ಪೂರ್ವಕ ಪ್ರತಿ ಒಂದು ಕ್ರಿಯೆಯನ್ನೂ ಮಾಡುವುದು, ಸಮಸ್ತ ಜೀವಿಗಳ ಹಿಂಸೆಯನ್ನು ಮಾಡದಿರುವುದೂ ಯತ್ಯಾಚಾರವೇ. ತ್ರಸಜೀವಗಳ ಹಿಂಸೆಯನ್ನು ಬಿಡುವವನೂ ಏಕೇಂದ್ರಿಯ ಜೀವಗಳ ಹಿಂಸಾನಿವೃತ್ತಿಯಿಲ್ಲದವನೂ ಶ್ರಾವಕ-ಅಣುವ್ರತಿ. ತ್ರಸ, ಸ್ಥಾವರ ಜೀವಗಳ ಹಿಂಸಾವರತನೇ ಯತಿ. ಕೇವಲ ತ್ರಸಹಿಂಸಾ ವಿರತ ಶ್ರಾವಕ.

	ಜೈನಯತಿಗಳು: ಇಪ್ಪತ್ತೆಂಟು ಮೂಲಗುಣಗಳನ್ನು ಮೂವತ್ತನಾಲ್ಕು ಉತ್ತರಗುಣಗಳನ್ನು ದಶಧರ್ಮಗಳನ್ನು ಪಂಚಾಚಾರಗಳನ್ನು ಎಂಟು ಶುದ್ಧಿಗಳನ್ನು ಪಂಚ ಚಾರಿತ್ರವನ್ನು ಧರ್ಮ ಮತ್ತು ಶುಕ್ಲಧ್ಯಾನಗಳನ್ನು ಆಚರಿಸುವವರು ಯತಿಗಳು.

	ಐದು ಮಹಾವ್ರತಗಳು, ಪಂಚಸಮಿತಿಗಳು, ಪಂಚೇಂದ್ರಿಯ ನಿರೋಧ, ಕೇಶಲೋಚ, ಆರು ಅವಶ್ಯಕ್ರಿಯೆಗಳು, ಅಚೇಲತ್ವ, ದಿಗಂಬರತ್ವ, ಅಸ್ನಾನ, ಭೂಶಯನ, ಅದಂತಧಾವನ, ಸ್ಥತಿಭೋಜನ ಮತ್ತು ಏಕಭುಕ್ತತ್ವ-ಇವು ಇಪ್ಪತ್ತೆಂಟು ಮೂಲಗುಣಗಳು. ಇಪ್ಪತ್ತೆರಡು ಪರೀಹಪಹಜಯಗಳೂ ಹನ್ನೆರಡು ತಪಸ್ಸುಗಳೂ ಸೇರಿ ಮೂವತ್ತನಾಲ್ಕು ಉತ್ತರಗುಣಗಳೂ ಏರ್ಪಡುತ್ತವೆ.

	ಹಿಂಸೆಯನ್ನು ಸರ್ವಥಾ ಬಿಡುವುದು ಅಹಿಂಸಾಮಹಾವ್ರತ, ಪ್ರಶಸ್ತವಚನವನ್ನೇ ಆಡುವುದು ಸತ್ಯಮಹಾವ್ರತ, ಪರಸ್ವತ್ತನ್ನು ಸರ್ವಥಾ ಸ್ವೀಕರಿಸದಿರುವುದು ಅಚೌರ್ಯಮಹಾವ್ರತ, ಸ್ತ್ರೀವ್ಯಾಮೋಹವನ್ನು ಸರ್ವಥಾ ತ್ಯಾಗಮಾಡುವುದೂ ಆತ್ಮನಲ್ಲಿ ಲೀನವಾಗುವುದೂ ಬ್ರಹ್ಮಚರ್ಯಾಮಹಾವ್ರತ. ಪರವಸ್ತುಗಳ ವ್ಯಾಮೋಹ ಬಿಟ್ಟು ಜಾತರೂಪಧರನಾಗುವುದು ಅಪರಿಗ್ರಹವ್ರತ. ಇದು ವ್ರತಗಳ ಧಾರಣೆ. ಇವೇ ವಿಶ್ವಶಾಂತಿಗೆ ಮೂಲಪಂಚಪಾತಕಗಳ ಪರಿತ್ಯಾಗರೂಪವಾದ ಪಂಚಶೀಲಗಳು.

	ಪ್ರಾಣಿಭಾದೆಯಾಗದಂತೆ ನೋಡಿ ನಡೆಯುವುದು ಈರ್ಯಾಸಮಿತಿ, ಹಿತ, ಮಿತ, ಮಧುರ, ನಿಶ್ಚಿತ ಮಾತುಗಳನ್ನಾಡುವುದು, ಭಾಷಾಸಮಿತಿ, ಉದ್ಗಮಾದಿ ಅಂತರಾಯಗಳಿಲ್ಲದೆ, ಗೋಚರಾದಿ ವೃತ್ತಿಯಿಂದ ಪ್ರಾಸುಕವಾದ ಶುದ್ಧಾಹಾರವನ್ನು ಪಾಣಿಪಾತ್ರಪುಟದಿಂದಂಗೀಕರಿಸುವುದು ಏಷಣಾಸಮಿತಿ, ಧರ್ಮಸಾಧನೆ ಪುಸ್ತಕ, ಪಿಂಛ, ಕಮಂಡಲಾಧಿಗಳನ್ನು ಪ್ರಾಣಪೀಡೆಯಾಗದಂತೆ ತೆಗೆದುಕೊಳ್ಳುವುದೂ ಇಡುವುದೂ ಆದಾನ ನಿಕ್ಷೇಪಣಸಮಿತಿ, ನಿರ್ಜಂತುಕಪ್ರದೇಶದಲ್ಲಿ ಮಲಮೂತ್ರಾದಿವಿಸರ್ಜನೆ ಉತ್ಸರ್ಗಸಮಿತಿ. ಇವೇ ಐದು ಸಮಿತಿಗಳು.

	ಸ್ವರ್ಶನಾದಿ ಪಂಚೇಂದ್ರಿಯಗಳನ್ನು ವಶದಲ್ಲಿಡುವುದು ಇಂದ್ರಿಯ ನಿರೋಧ.

	ಕೇಶಲೋಚವೆಂದರೆ ಕೈಯಿಂದಲೇ ತಲೆಯ ಕೂದಲುಗಳನ್ನು ಕೀಳುವುದು. ಸಾಮಾಜಿಕ (ಸಮತಾಭಾವದಿಂದ ಏಕಾಗ್ರಚಿತ್ತದಿಂದ ತತ್ತ್ವ ಚಿಂತನೆ, ಶುದ್ಧಾತ್ಮ ಚಿಂತನೆಗಳನ್ನು ತ್ರಿಸಂಧ್ಯೆಯಲ್ಲಿಯೂ ಇಷ್ಟೇ ಸಮಯವೆಂದು ಕಾಲನಿಯಮದಿಂದ ಮಾಡುವುದು), ಚತುರ್ವಿಂಶತಿ ಸ್ತವನ (ಇಪ್ಪತ್ತುನಾಲ್ಕು ಋಷಭಾದಿ ತೀರ್ಥಂಕರರ ವಸ್ತುಸ್ತವ, ರೂಪಸ್ತವ ಮತ್ತು ಗುಣಸ್ತವರೂಪಸ್ತುತಿ ಮಾಡುವುದು), ವಂದನೆ (ತ್ರಿಕರಣಶುದ್ಧಿಯಿಂದ 108 ಸಾರಿ ಪಂಚಪರಮೇಷ್ಠಿಗಳ ನಾಮಮಂತ್ರವನ್ನು ಜಪಿಸುತ್ತ ನಾಲ್ಕು ದಿಕ್ಕುಗಳಲ್ಲಿ ಒಂದೊಂದು ನಮಸ್ಕಾರಕ್ಕೆ ಮೂರು ಮೂರು ಆವರ್ತಗಳಂತೆ ನಾಲ್ಕು ನಮಸ್ಕಾರಗಳನ್ನು ಹನ್ನೆರಡು ಆವರ್ತಗಳೊಡನೆ ಮಾಡುವುದು). ಪ್ರತಿಕ್ರಮಣ (ಹಿಂದೆ ಮಾಡಿದ ದೋಷಪರಿತ್ಯಾಗ), ಪ್ರತ್ಯಾಖ್ಯಾನ (ಮುಂದಿನ ದೋಷನಿವೃತ್ತಿ), ಕಾಯೋತ್ಸರ್ಗ (ಶರೀರಮೋಹನಿವೃತ್ತಿ)-ಇವು ಆರು ಅವಶ್ಯ ಕ್ರಿಯೆಗಳು.

	ಅಚೇಲತ್ವವೆಂದರೆ ದಿಗಂಬರನಾಗಿ ಜಾತರೂಪಧರನಾಗಿ ನಿರಾವರಣನಾಗಿರುವುದು.

	ಅಸ್ನಾನವೆಂದರೆ ಆತಪಸ್ನಾನವಲ್ಲದೆ ಜಲಸ್ನಾನವನ್ನು ತ್ಯಾಗಮಾಡುವುದು.

	ಭೂಶಯನವೆಂದರೆ ಏನನ್ನೂ ಹಾಸದೆ ಹಲಗೆಯ ಮೇಲೆ ಕಲ್ಲಿನ ಮೇಲೆ ಮಲಗುವುದು.

	ಅದಂತಧಾವನವೆಂದರೆ ಉಪವಾಸ, ರಸತ್ಯಾಗಗಳಿಂದಲೇ ಮುಖಶುದ್ಧಿ ಮಾಡಿಕೊಳ್ಳುವುದು, ಹಲ್ಲನ್ನುಜ್ಜದಿರುವುದು.

	ಸ್ಥಿತಿಭೋಜನವೆಂದರೆ-ನಿಂತೇ ಊಟಮಾಡುವುದು.

	ಏಕ್ತಭುಕ್ತತ್ವವೆಂದರೆ ದಿನಕ್ಕೊಂದೂಟಮಾಡುವುದು. ಇಪ್ಪತ್ತ್ತೆರಡು ಷರೀಷಹಗಳೂ ಹನ್ನೆರಡು ತಪಸುಗಳೂ ಮುನಿಗಳ ಮೂವತ್ತನಾಲ್ಕು ಉತ್ತರಗುಣಗಳು. 

	ರಾಗದ್ವೇಷಗಳಿಲ್ಲದವರೂ ಮನೋದಂಡ ವಚನದಂಡ ಕಾಯದಂಡಗಳಿಲ್ಲದವರೂ ಮಾಯಾ, ಮಿಥ್ಯಾ, ನಿದಾನಗಳೆಂಬ ಮೂರು ಶಲ್ಯರಹಿತರೂ ಶಬ್ದ ಗೌರವ, ಋದ್ಧಿಗೌರವ, ರಸಗೌರವ ವಿರಹಿತರೂ ತ್ರಿಕರಣಶುದ್ಧರೂ ಆದವರು ಯತಿಗಳಾಗುವರು. ದರ್ಶನ, ಜ್ಞಾನ, ಚಾರಿತ್ರ್ಯಾದಿ ಆರು ಆಚಾರಗಳನ್ನಿವರು ಪಾಲಿಸಬೇಕು.

	ಮುನಿಗಳಿಗಾಗಿ ವಿಧಿಸಿರುವ ದಶಧರ್ಮಗಳು ಇವು : 1 ಉತ್ತಮ ಕ್ಷಮಾಧರ್ಮ-ಕ್ರೋಧಪರಿತ್ಯಾಗ, 2 ಉತ್ತಮಮಾರ್ದವ-ಮಾನಕಷಾಯ ತ್ಯಾಗ, 3 ಉತ್ತಮಾರ್ಜವ-ವಂಚನೆಯನ್ನು ಬಿಡುವುದು. 4 ಉತ್ತಮ ಶೌಚ-ಲೋಭಕಷಾಯತ್ಯಾಗ, 5 ಉತ್ತಮ ಸತ್ಯ-ಪ್ರಶಸ್ತ ವಚನ, 6 ಉತ್ತಮ ಸಂಯಮ-ಪಂಚೇಂದ್ರಯ ಜಯ, 7 ಉತ್ತಮ ತಪೀಧರ್ಮ-ಕರ್ಮ ಕ್ಷಯಮಾಡಲು ತಪಸ್ಸನ್ನಾಚರಿಸುವುದು. 8 ಉತ್ತಮತ್ಯಾಗ-e್ಞÁನಾದಿ ದಾನಮಾಡುವುದು, 9 ಉತ್ತಮ ಆಂಕಿಚಿನ್ಯ-ಧನಧಾನ್ಯಾದಿ ಮದಮತ್ಸರಾದಿ ಪರಿಗ್ರಹತ್ಯಾಗ, 10 ಉತ್ತಮ ಬ್ರಹ್ಮಚರ್ಯ-ಸರ್ವಥಾ ಸ್ತ್ರೀವ್ಯಾಮೋಹ ತ್ಯಜಿಸಿ ಶುದ್ಧಾತ್ಮಚಿಂತನೆ ಮಾಡುವುದು.

	ಮುನಿಗಳು ಬಾರಿಬಾರಿಗೂ ಭಾವಿಸುವ ಹನ್ನೆರಡು ಅನುಪೇಕ್ಷೆಗಳು ಇವು : ಅನಿತ್ಯ, ಆಸರಣ, ಸಂಸಾರ, ಏಕತ್ವ, ಅನ್ಯತ್ವ, ಅಶುಚಿತ್ವ, ಆಸ್ರವ, ಸಂವರ, ನಿರ್ಜರಾ, ಲೋಕ, ಬೋಧಿದುರ್ಲಭ, ಧರ್ಮಚಿಂತಾನುಪ್ರೇಕ್ಷೆ.

	ಮುನಿಗಳು ಜಪಿಸುವ ಮಂತ್ರವಿದು : ಓಂ ಣಮೋ ಅರಿಹಂತಾಣಂ, ಣಮೋ ಸಿದ್ದಾಣಂ, ಣಮೋ ಆಇರಿಯಾಣಂ. ಣಮೋ ಉವಜ್ಝಾಯಾಣಂ, ಣಮೋ ಲೋ ಏಸವ್ವಸಾಹೂಣಂ.

	ಮುನಿಗಳಲ್ಲಿರುವ ಎಂಟು ಶುದ್ದಿಗಳು ಇವು : 1 ಭಾವಶುದ್ಧಿ-ಗೋಡೆಯ ಮೇಲೆ ಬಿಡಿಸಿದ ಚಿತ್ರದಂತೆ ಕರ್ಮಗಳ ಕ್ಷಯೋಪಶಮದಿಂದ ಮೋಕ್ಷಮಾರ್ಗದಲ್ಲಿ ಪರಿಶುದ್ಧವಾದ ಅಭಿರುಚಿ, 2 ಕಾಯಶುದ್ಧಿ-ದಿಗಂಬರನಾಗಿ ಪರಮಹಂಸನಾಗಿರುವುದು. 3 ವಿನಯ ಶುದ್ಧಿ-ದೇವಶಾಸ್ತ್ರ ಮತ್ತು ಗುರುಗಳ ಮೇಲೆ ಭಕ್ತಿ ಇಡುವುದು. 4 ಈರ್ಯಾಪಥಶುದ್ಧಿ-ಹೆಜ್ಜೆಹೆಜ್ಜೆಗೇ ಪ್ರಾಣಿ ಪೀಡೆಯಾಗದಂತೆ ನಡೆಯುವುದು. 5 ಭಿಕ್ಷಾಶುದ್ಧಿ-ಯತ್ಯಾಚಾರ ಸೂತ್ರದಲ್ಲಿ ಹೇಳಿದಂತೆ ಆಹಾರವನ್ನು ಗೋಚಾರ, ಅಕ್ಷಮ್ರಕ್ಷಣ, ಭ್ರಾಮರೀ, ಉದರಾಗ್ನಿ ಶಮನ ಮತ್ತು ಶ್ವಭ್ರಪೂರಣ ವೃತ್ತಿಗಳಿಂದ ಪ್ರಾಸುಕಾಹಾರವನ್ನು ಪಾಣಿಪಾತ್ರದಿಂದ ತೆಗೆದುಕೊಳ್ಳುವುದು. 6 ಪ್ರತಿಷ್ಠಾಪನಶುದ್ಧಿ-ಉಗುರು, ಕೂದಲು, ಸಿಂಬಳ, ಉಗುಳು, ಮಲ ಮತ್ತು ಮೂತ್ರಾದಿ ವಿಸರ್ಜನೆಯನ್ನು ಶರೀರಸ್ಥಾಪನೆಯನ್ನು ಯೋಗ್ಯ ದೇಶಕಾಲಗಳನ್ನರಿತು ಪ್ರಾಣಿಗಳಿಗೆ ಬಾಧೆಯಾಗದಂತೆ ಮಾಡುವುದು. 7 ಶಯನಾಸನ ಶುದ್ಧಿ-ಪ್ರಾಣಿಬಾಧೆಯಾಗದಂತೆ ಯೋಗ್ಯ ಪ್ರದೇಶದಲ್ಲಿ ಮನಸ್ಸಿಗೆ ವಿಕಾರವಾಗದಿರುವ ಸ್ಥಾನದಲ್ಲಿ ಮಲಗುವುದು. ಕುಳಿತುಕೊಳ್ಳುವುದು. 8 ವಾಕ್ಯಶುದ್ಧಿ-ಯತಿಗಳು ವಿಕಥೆಗಳನ್ನಾಡದೆ ಧರ್ಮವೃದ್ಧಿಯ ಮಾತನ್ನು; ಹಿತ. ಮಿತ, ಮಧುರವಾಣಿಯಿಂದ ಆಡುವುದು. ಏಳನೆಯ ಉಪಾಸಕಾಧ್ಯಯನಾಂಗದಲ್ಲಿ ಜೈನಾಶ್ರಮಗಳಾದ ಬ್ರಹ್ಮಚಾರೀ, ಗೃಹಸ್ಥ, ವಾನಪ್ರಸ್ಥ ಮತ್ತು ಭಿಕ್ಷುಕ ಎಂಬ ನಾಲ್ವರ ವಿವರಗಳಿವೆ.

	ಬ್ರಹ್ಮಚಾರೀ ಹಂತದಲ್ಲಿ ಉಪನಯನ, ಅವಲಂಬ, ಅದೀಕ್ಷಿತ, ಗೂಢ, ಮತ್ತು ನೈಷ್ಠಿಕ ಎಂದು ಐದು ವಿಧ. 1 ಶಿಖಾ ಎಂಬ ಶಿರೋಲಿಂಗ, ಗಣಧರಸೂತ್ರವೆಂಬ ಉರೋಲಿಂಗಗಳನ್ನೂ ಉಳ್ಳವನೂ ಕಟಿಸೂತ್ರವುಳ್ಳಳವನೂ ಆಗಮವನ್ನು ಅಭ್ಯಾಸಮಾಡುತ್ತಿರುವವನೂ ಗೃಹಸ್ಥಧರ್ಮವನ್ನು ಆಚರಿಸುವವನೂ ಉಪನಯನ ಬ್ರಹ್ಮಚಾರಿ. 2 ಕ್ಷುಲ್ಲಕನಾಗಿ ಮನೆಯಲ್ಲಿದ್ದುಕೊಂಡು ಆಗಮಾಭ್ಯಾಸ ಮಾಡುವವನು ಅವಲಂಬ ಬ್ರಹ್ಮಚಾರಿ. 3 ಬ್ರಹ್ಮಚಾರಿಯ ವೇಷವಿಲ್ಲದೆ ಆಗಮಾಭ್ಯಾಸನಿರತನೂ ಗೃಹಿಯೂ ಆದವನು ಅದೀಕ್ಷಿತ ಬ್ರಹ್ಮಚಾರಿ. 4 ಕುಮಾರಶ್ರಮಣನಾಗಿದ್ದುಕೊಂಡು ಆಗಮಾಭ್ಯಾಸವನ್ನು ಸ್ವೀಕರಿಸಿ ದುಃಸಹ ಷರೀಷಹಗಳನ್ನು ಸಹಿಸುತ್ತ ಮನೆಯಲ್ಲಿರುವವನು ಗೂಢ ಬ್ರಹ್ಮಚಾರಿ. 5 ತಲೆಯ ಮೇಲೆ, ಶಿಖಾರೂಪ ಶಿರೋಲಿಂಗ ಉಳ್ಳವನೂ ಎದೆಯ ಮೇಲೆ ಗಣಧರ ಸೂತ್ರ, ಯಜ್ಞೋವೀತರೂಪ ಉರೋಲಿಂಗವುಳ್ಳವನೂ ಕೌಪೀನ ಧರಿಸಲು ಕಟಲಿಂಗವುಳ್ಳವನೂ ಬಿಳಿ ಅಥವಾ ಕಾವಿ ಬಟ್ಟೆಯ ಕೌಪೀನವನ್ನು ಧರಿಸುವವನೂ ಭಿಕ್ಷಾಹಾರಿಯೂ ದೇವತಾರ್ಚನಪರನೂ ಆದವ ನೈಷ್ಠಿಕ ಬ್ರಹ್ಮಚಾರಿ.

	ಗೃಹಸ್ಥನೆಂದರೆ ಅಸಿ, ಮಷಿ, ಕೃಷಿ, ವಾಣಿಜ್ಯ, ವಿದ್ಯಾ, ಶಿಲ್ಪಾದಿ ವೃತ್ತಿವುಳ್ಳವ, ದೇವಪೂಜೆ ಗುರೂಪಾಸ್ತಿ, ಸ್ವಾಧ್ಯಾಯ, ಸಂಯಮ ಮತ್ತು ದಾನ ಈ ಆರು ನಿತ್ಯಕರ್ಮವನ್ನು ಮಾಡುವವ, ಅಹಿಂಸಾದಿ ಹನ್ನೆರಡು ವ್ರತಗಳನ್ನು ಧರಿಸುವವ. ಗೃಹದಲ್ಲಿ ವಾಸಿಸುವವ.

	ವಾನಪ್ರಸ್ಥನೆಂದರೆ ಖಂಡವಸ್ತ್ರವನ್ನು ಧರಿಸುವ ನಿರತಿಶಯತಪಸ್ವಿ.

	ಭಿಕ್ಷುಗಳೆಂದರೆ ಜೈನರೂಪಧಾರಿಗಳೂ ಮಹಾವ್ರತಿಕರೂ ಆದ ಮಹಾಮುನಿಗಳು. ಅನಾಗಾರರು, ಯತಿಗಳು, ಮುನಿಗಳು, ಋಷಿಗಳು ಎಂದು ಭಿಕ್ಷುಗಳಲ್ಲಿ ನಾಲ್ಕು ಬಗೆ. ಇಪ್ಪತ್ತೆಂಟು ಮೂಲಗುಣಗಳನ್ನು ಧಾರಣೆ ಮಾಡುವ ಸಾಮಾನ್ಯ ಸಂಯಮಿಯೇ ಅನಾಗಾರ. ಚತುರ್ದಶಪೂರ್ವಧರರಾದ ಉಪಶಮ, ಕ್ಷಪಕ, ಶ್ರೇಣಿಯವರು ಯತಿಗಳು. ಅವಧಿe್ಞÁನಿಗಳೂ ಮನಃಪರ್ಯಯ e್ಞÁನಿಗಳೂ ಕೇವಲe್ಞÁನಿಗಳೂ ಮುನಿಗಳೆನ್ನಿಸಿಕೊಳ್ಳುತ್ತಾರೆ.

	ತಪೋನಿರತರೇ ಋಷಿಗಳು. ಋಷಿಗಳಲ್ಲಿ ನಾಲ್ಕು ಬಗೆ-ರಾಜರ್ಷಿ, ಬ್ರಹ್ಮರ್ಷಿ, ದೇವರ್ಷಿ, ಪರಮರ್ಷಿ ಎಂದು. ತಪಸ್ಸಿನಲ್ಲಿ ಅಂತರಂಗ ಬಹಿರಂಗ ಎಂದು ಎರಡು ಬಗೆಗಳಿದ್ದು ಒಂದೊಂದರಲ್ಲೂ ಆರು ವಿಭಾಗಗಳುಂಟು.

	ಶ್ರಾವಕಾಚಾರ : ಸದ್ಧರ್ಮ ಕೇಳುವವನೇ ಶ್ರಾವಕ. ಸದ್ರ್ಧವೆಂದರೆ, ಸಮ್ಯಕ್ದರ್ಶನ, ಸಮ್ಯಕ್e್ಞÁನ ಮತ್ತು ಸಮ್ಯಕ್‍ಚಾರಿತ್ರ. ಆಚಾರವೆಂದರೆ ದಯೆ, ಪಂಚೇಂದ್ರಿಯ ನಿಗ್ರಹ. ತತ್ತ್ವಾರ್ಥಶ್ರದ್ಧೆಯೇ ಸಮ್ಯಕ್ ದರ್ಶನ. ಯಥವತ್ತಾದ ವಸ್ತುಗಳ ನಿರ್ಣಯವೇ ಸಮ್ಯಕ್ ಜ್ಞಾನ. ರಾಗದ್ವೇಷ ನಿವೃತ್ತಿಯೇ ಸಮ್ಯಕ್‍ಚಾರಿತ್ರ. ಆತ್ಮನ ಮೋಹದಿಂದುಂಟಾಗುವ ಕ್ಷೋಭೆಯಿಲ್ಲದಿರುವ ಸಮತಾಭಾವವೇ ಸದಾಚಾರ. ಅಗಾರಿ, ದೇಶವ್ರತಿ, ಗೃಹಮೇಧೀ, ಗೃಹಸ್ಥ, ಅಣುವ್ರತೀ, ಸಂಯಮಾsಸಂಯಮೀ ಇವೆಲ್ಲ ಶ್ರಾವಕನ ನಾಮಾಂತರಗಳು.

ಐದು ಅಣುವ್ರತಗಳನ್ನು ಮೂರು ಗುಣವ್ರತಗಳನ್ನು ನಾಲ್ಕು ಶಿಕ್ಷಾವ್ರತಗಳನ್ನು ಹೀಗೆ ಹನ್ನೆರಡು ವ್ರತಗಳನ್ನು ಪಾಲಿಸುತ್ತ ಬಾಳಿ ಮರಣಸಮಯದಲ್ಲಿ ಸಲ್ಲೇಖನವ್ರತವನ್ನು ಕೈಗೊಂಡು ಸಮಾಧಿಯೋಗದಿಂದ ಶರೀರವನ್ನು ತ್ಯಾಗಮಾಡುವ ಶ್ರಾವಕ. ಪಾಪಗಳನ್ನು ಸರ್ವಥಾ ಮಾಡದಿರುವುದೇ ಮಹಾವ್ರತ. ಮಹಾವ್ರತವನ್ನು ಪಾಲಿಸಲು ಕೈಲಾಗದವನಿಗೆ ಏಕದೇಶವಾಗಿ ವ್ರತಗಳನ್ನು ಪಾಲಿಸಲು ಶ್ರಾವಕಾಚಾರ ಹೇಳಲ್ಪಟ್ಟಿದೆ.

	ಶ್ರಾವಕರ ಮೂಲಗುಣಗಳು ಎಂಟು. ಶ್ರಾವಕ ಧರ್ಮ ಮುಖ್ಯವಾಗಿ ದಾರ್ಶನಿಕ, ವ್ರತಿಕೆ, ಬ್ರಹ್ಮಚಾರಿ ಮೊದಲಾದ ಹನ್ನೊಂದು ನೆಲೆಗಳಾಗಿ ವಿಭಾಗಿತವಾಗಿದೆ.

	ಯಾವುದು ಪ್ರಾಣಿಗಳನ್ನು ಸಂಸಾರದ ದುಃಖದಿಂದ ಉದ್ಧರಿಸಿ ಉತ್ತಮ ಸುಖದಲ್ಲಿಡುತ್ತದೋ ಅದು ಧರ್ಮ. ಅಂಥ ಸದ್ಧರ್ಮವನ್ನು ನಂಬುವವನೂ ತತ್ತ್ವರುಚಿರೂಪ ಸಮ್ಯಗ್ದರ್ಶನವನ್ನು ವಸ್ತುಸುನಿರ್ಣಯರೂಪ ಸಮ್ಯಕ್ e್ಞÁನವನ್ನು ರಾಗದ್ವೇಷನಿವೃತ್ತಿರೂಪ ಸಮ್ಯಕ್‍ಚಾರಿತ್ರವನ್ನು ಪಾಲಿಸುತ್ತಾ ಸಂಸಾರ, ಶರೀರ ಮತ್ತು ಭೋಗಗಳಿಂದ ವಿರಕ್ತಚಿತ್ತನೂ ಆರ್ಹಂತಾದಿ ಪಂಚ ಪರಮೇಷ್ಠಿಭಕ್ತನೂ ಅಹಿಂಸಾದಿ ವ್ರತಗಳನ್ನಾಚರಿಸಲು ಲವಲವಿಕೆಯುಳ್ಳವನೂ ಪಂಚಪರಮೇಷ್ಠಿ ಗುರುಚರಣಶರಣನೂ ಆದವನೇ ದಾರ್ಶನಿಕ ಶ್ರಾವಕ.

	ಅಹಿಂಸಾದಿ ಹನ್ನೆರಡು ವ್ರತಗಳನ್ನೂ ನಿರತಿಚಾರವಾಗಿ ಪಾಲಿಸುವವನು ವ್ರತಿಕ. ಶ್ರಾವಕನ ನಿತ್ಯಜೀವನಕ್ಕೆ ಧರ್ಮದ ಕಟ್ಟುಗಳನ್ನು ಹಾಕುವುದೇ ವ್ರತಗಳ ಉದ್ದೇಶ. ಆಹಾರ, ವಿಹಾರ, ದುಡಿಮೆ, ವ್ಯಯ, ನಿದ್ರೆ, ಇತರ ವ್ಯವಹಾರ-ಈ ಎಲ್ಲದರಲ್ಲೂ ಒಂದು ರೀತಿಯ ಸಂಯಮವನ್ನು ತರುವುದೇ ವ್ರತನಿಯಮಗಳ ಕೆಲಸ. ಐದು ಅಣುವ್ರತಗಳು, ಮೂರು ಗುಣವ್ರತಗಳು, ನಾಲ್ಕು ಶಿಕ್ಷಾವ್ರತಗಳು ಸೇರಿ ಹನ್ನೆರಡಾಗುತ್ತವೆ.

	ಹನ್ನೊಂದು ನೆಲೆಯ ಶ್ರಾವಕದಲ್ಲಿ ಮೊದಲನೆಯ ಆರು ನಲೆಯವರು ಜಘನ್ಯರು. ಆಮೇಲಿನ ಮೂರು ನೆಲೆಯವರು ಮಧ್ಯಮರು. ಇನ್ನುಳಿದ ಎರಡು ನೆಲೆಯವರು ಉತ್ಕøಷ್ಟರು. 

	ಶ್ರಾವಕರಲ್ಲಿರಬೇಕಾದ ಹದಿನಾಲ್ಕು ಗುಣಗಳು ಇವು : 1 ನ್ಯಾದಿಂದ ಧನಾರ್ಜನೆ, 2 ದೇವ, ಶಾಸ್ತ್ರ, ಗುರುಗಳ ಪೂಜೆ, 3 ಒಳ್ಳೆಯ ಮಾತು (ಸದ್ವಚನ), 4 ಧರ್ಮ, ಅರ್ಥ, ಕಾಮ ಈ ಮೂರು ಪುರುಷಾರ್ಥಗಳನ್ನು ವಿರೋಧವಿಲ್ಲದೆ ಸೇವಿಸುವುದು. 5 ಯೋಗ್ಯಪತ್ನೀಗ್ರಹಣ, 6 ಯೋಗ್ಯಸ್ಥಾನನಿವಾಸ, 7 ವಿನಯ ಶೀಲತೆ, 8 ಯೋಗ್ಯ ಆಹಾರ, ವಿಹಾರ, 9 ಸಾಧುಸಂತಸಹವಾಸ, 10 ಪ್ರಜ್ಞನಾಗಿರುವುದು, 11 ಕೃತಜ್ಞನಾಗಿರುವುದು, 12 ಇಂದ್ರಿಯಸಂಯಮ, 13 ಶಾಸ್ತ್ರ ಪಠನ, ಪಾಠನ, ಶ್ರವಣಮಾಡುವುದು. 14 ಪಾಪಭೀರುತೆ.

	ಶ್ರಾವಕರ ದೈನಿಕ ಷಟ್ಕವ್ರ್ಮಗಳು ಇವು : ದೇವಪೂಜೆ, ಗುರೂಪಾಸನೆ, ಶಾಸ್ತ್ರಸ್ವಾಧ್ಯಾಯ, ಸಂಯಮ, ತಪಸ್ಸು ಮತ್ತು ದಾನಮಾಡುವುದು.

	ಶ್ರಾವಕರ ಆರು ಜೀವನವೃತ್ತಿಗಳು ಇವು : ಕೃಷಿ, ಅಸಿ, ಮಷಿ, ವಾಣಿಜ್ಯ, ವಿದ್ಯಾ ಮತ್ತು ಶಿಲ್ಪಕಲೆ. ಶ್ರಾವಕರ ಮುಖ್ಯಧರ್ಮ ದಾನ ಮತ್ತು ಪೂಜೆ, ಪೂಜ್ಯರಲ್ಲಿ ತೋರಿಸುವ ಭಕ್ತಿಯೇ ಪೂಜೆ. ಸ್ತೋತ್ರಾದಿಗಳಿಂದ ಮಾಡುವ ಭಕ್ತಿ ಭಾವಪೂಜೆ. ಜಲ, ಗಂಧ, ಅಕ್ಷತೆ, ಪುಷ್ಪ, ನೈವೇದ್ಯ, ಚರು, ದೀಪ, ಧೂಪ, ಫಲ ಮತ್ತು ಅಘ್ರ್ಯ, ಶಾಂತಿಧಾರೆ, ಪುಷ್ಪಾಂಜಲಿ, ಮಂಗಳಾರತಿ, ಪಂಚಾಮೃತ ಅಭಿಷೇಕ ಇವೆಲ್ಲ ದ್ರವ್ಯಪೂಜೆಗಳು.

	ಗೃಹಸ್ಥ ತನ್ನ ಆರಂಭ ಉದ್ಯೋಗಗಳಲ್ಲಾಗುವ ದೋಷನಿವಾರಣೆ ಬಗ್ಗೆ ದೇವಪೂಜಾರಿ ಆರು ಸತ್ಕ್ರಿಯೆಗಳನ್ನು ದಿನವೂ ಮಾಡುತ್ತಾನೆ. ಪೂಜೆ ಐದು ಪ್ರಕಾರ : ನಿತ್ಯಪೂಜೆ, ಅಷ್ಟಾಹ್ನಿಕ ಪೂಜೆ, ಚರ್ತುಮುಖಪೂಜೆ, ಕಲ್ಪದ್ರುಮ ಪೂಜೆ ಮತ್ತು ಐಂದ್ರಧ್ವಜ ಪೂಜೆ, ಪೂಜೆಯಿಂದ ಪುಣ್ಯಪ್ರಾಪ್ತಿಯೂ ಪಾಪಪರಿಹಾರವೂ ಆಗುತ್ತದೆ.

ಪಾಪಪರಿಹಾರಕ್ಕೋಸ್ಕರ ಶ್ರಾವಕ ದಾನ ಮತ್ತು ಪೂಜೆಗಳನ್ನು ಸ್ವಹಸ್ತದಿಂದ ಮಾಡಬೇಕು. ದಾನ ನಾಲ್ಕು ಬಗೆ ದಯಾದತ್ತಿ, ಪಾತ್ರದತ್ತಿ, ಸಮದತ್ತಿ, ಸಕಲದತ್ತಿ ಎಂದು.
1 ದಯೆಯಿರುವ ಪ್ರಾಣಿಗಳಿಗೆ ಅಭಯದಾನವನ್ನು ನೀಡುವುದು, ದಯಾದತ್ತಿ, 2 ಮಹಾತಪಸ್ವಿಗಳಿಗೆ, ಪ್ರತಿಗ್ರಹ ಅರ್ಚನಪೂರ್ವಕ ನವಧಾಭಕ್ತಿಯಿಂದ ಆಹಾರ ಔಷಧಾದಿ ದಾನವನ್ನು ಕೊಡುವುದು ಪಾತ್ರ್ರದತ್ತಿ. 3 ಸಮದತ್ತಿ-ತನ್ನ ಸಮಾನವಾಗಿ ಮಿತ್ರರಿಗೆ ಕನ್ಯಾ, ಭೂಮಿ, ಬಂಗಾರ ಇತ್ಯಾದಿ ವಸ್ತುವಾಹನಾದಿ ಕೊಡುವುದು ಸಮದತ್ತಿ. 4 ಸಕಲದತ್ತಿ-ತನ್ನ ಸಂತತಿಯನ್ನು ಕಾಪಾಡಲು ಮಗನಿಗಾಗಲಿ ತನ್ನ ಗೋತ್ರದಲ್ಲಿ ಹುಟ್ಟಿದ ಬಂಧುಬಳಗದವರಿಗಾಗಲಿ ಧರ್ಮವನ್ನು ಧನವನ್ನು ಕೊಡುವುದು.

ಜೈನವ್ರತಗಳು : ಯಾವುದು ಪ್ರಾಣಿಗಳಿಗೆ ಇಹಪರ ಜನ್ಮಗಳಲ್ಲಿ ದುಃಖದಾಯಕವಾಗಿದೆಯೋ ಅಂಥ ಅನಿಷ್ಟ ವಸ್ತುಗಳನ್ನಾಗಲಿ ಸೇವಿಸಲು ಅಯೋಗ್ಯ ವಸ್ತುಗಳನ್ನಾಗಲಿ ದೇವತಾಗುರುಸಾನಿಧ್ಯದಲ್ಲಿ ಪ್ರತಿಜ್ಞೆಮಾಡಿ ಬಿಡುವುದಕ್ಕೆ ವ್ರತವೆಂದು ಹೇಳುತ್ತಾರೆ. ವ್ರತದಲ್ಲಿ ಎರಡು ವಿಧ. ಕಾಲನಿಯಮದಿಂದ ಇಂದ್ರಿಯಗಳ ಭೋಗೋಪಭೋಗ ವಿಷಯಗಳನ್ನು ಬಿಡುವುದು ನಿಯಮವ್ರತ. ಇಲ್ಲಿ ಕಾಲನಿಯಮವೆಂದರೆ ಒಂದು ದಿನ ಒಂದು ವಾರ ಒಂದು ಪಕ್ಷ ಒಂದು ತಿಂಗಳು ಒಂದು ಋತು ಒಂದು ಅಯನ ಒಂದು ವರ್ಷ ಇತ್ಯಾದಿ. ಜನ್ಮಾವಧಿ ವಿಷಯಗಳನ್ನು ಪರಿತ್ಯಾಗಮಾಡುವುದು ಜನ್ಮವ್ರತ ಅಥವಾ ಯಮವ್ರತ, ವ್ರತಗಳು ಒಂಬತ್ತು ಬಗೆಯಾಗಿ ವಿಂಗಡಿಸಿರುವುದೂ ಉಂಟು. 1 ಸಾವಧಿ, 2 ನಿರವಧಿ, 3 ದೈವನಿಕ, 4 ನೈಶಿಕ, 5 ಮಾಸಾವಧಿಕ, 6 ಸಾಂವತ್ಸರಿಕ, 7 ಕಾಮ್ಯ, 8 ಅಕಾಮ್ಯ, 9 ಉತ್ತಮಾರ್ಥ.
ಜೈನಪ್ರಯೋಗಗಳು : ಗರ್ಬಾಧಾನಾದಿ ವಿವಾಹಾಂತವರೆಗಿನ ಶುಭ ಸಮಯಗಳಲ್ಲಿ ಆಚರಿಸುತ್ತ ಬರುತ್ತಿರುವ ಹದಿನಾರು ಸಂಸ್ಕಾರಗಳು ಜೈನ ಪ್ರಯೋಗಗಳಲ್ಲಿ ಸೇರುತ್ತವೆ. ಗ್ರಹಗಳಿಂದಾಗುವ ಅರಿಷ್ಟನಿವಾರಣೆಯ ಬಗ್ಗೆ ಮಾಡುವ ಆರಾಧನೆಗಳೂ ಜೈನಪ್ರಯೋಗಾಂತರ್ಗತವಾಗುತ್ತವೆ. ಸಿದ್ಧಚಕ್ರ, ಕಲಿಕುಂಡ, ನವಗ್ರಹಶಾಂತಿ, ವಜ್ರಪಂಜರಾಧನೆ, ಚತುರ್ವಿಂಶತಿ ತೀರ್ಥಂಕರರ ಆರಾಧನೆ ಇತ್ಯಾದಿ. ಈ ಗರ್ಭಾದಾನಾದಿ ಹದಿನಾರು ಸಂಸ್ಕಾರಗಳು ಬೆಳ್ಳಿ ಅಥವಾ ಚಿನ್ನದ ಪಾತ್ರೆಗೆ ಮೆರಗುಕೊಟ್ಟಂತೆ ಮಾನವನ ಜೀವನವನ್ನು ಉಜ್ವಲಗೊಳಿಸುತ್ತದೆ. ಈ ಷೋಡಶ ಸಂಸ್ಕಾರವಿಲ್ಲದವ ಪಶುವಿನಂತೆ ಬಾಳುತ್ತಾನೆ.

ಹದಿನಾರು ಸಂಸ್ಕಾರಗಳು ಹೀಗಿವೆ : 1 ಗರ್ಭಾಧಾನ ಸಂಸ್ಕಾರ, 2 ಪ್ರಮೋದ, 3 ಪುಂಸವನ, 4 ಸೀಮಂತ, 5 ಜಾತಕರ್ಮ, 6 ನಾಮಕರಣ, 7 ಬಹಿರ್ಯಾನ, 8 ಉಪದೇಶ, 9 ಅನ್ನಪ್ರಾಶನ, 10 ಗಮನ, 11 ಚೌಲ 12 ಅಕ್ಷರಾಭ್ಯಾಸ, 13 ಪುಸ್ತಕಗ್ರಹಣ, 14 ಉಪನಯನ, 15 ಸಮಾವರ್ತನ, 16 ವಿವಾಹ.

ಈ ಷೋಡಶ ಸಂಸ್ಕಾರಗಳು, ಶುಭಸಂದರ್ಭಗಳಲ್ಲಾಚರಿಸುವ ಸಂಸ್ಕಾರಗಳು. ಜೈನಪ್ರಯೋಗದಲ್ಲಿ ಇಷ್ಟು ವಿಷಯಗಳು ಅಡಕವಾಗುತ್ತವೆ-1 ಹೋಮವಿಧಿ, 2. ಗ್ರಹಯಜ್ಞವಿಧಿ, 3 ಗರ್ಭಾಧಾನವಿಧಿ, 4 ಪ್ರಮೋದವಿಧಿ, 5 ಪುಂಸವನವಿಧಿ, 6 ಸೀಮಂತವಿಧಿ, 7 ಜಾತಕರ್ಮವಿಧಿ, 8 ನಾಮಕರಣವಿಧಿ, 9 ಬಹಿರ್ಯಾನವಿಧಿ, 10. ಅನ್ನಪ್ರಾಶನವಿಧಿ, 11 ಉಪವೇಶನವಿಧಿ, 12 ಮನವಿಧಿ, 13 ಚೌಲಕರ್ಮವಿಧಿ, 14 ಅಕ್ಷರಾಭ್ಯಾಸವಿಧಿ, 15 ಪುಸ್ತಕ ಗ್ರಹಣವಿಧಿ, 16 ಉಪನಯನವಿಧಿ, 17 ಸಮಾವರ್ತನವಿಧಿ, 18 ವಿವಾಹವಿಧಿ, 19 ಮಂತ್ರಸ್ಥಾನಪ್ರಕರಣ. 20 ಗರ್ಭಾದಾನಸಂಕಲ್ಪವಿಧಿ, 21 ಪ್ರಮೋದಮಂತ್ರವಿಧಿ, 22 ಪುಂಸವನಮಂತ್ರವಿಧಿ, 23 ಸೀಮಂತಮಂತ್ರವಿಧಿ.

ಜೈನಸಂಸ್ಕಾರ, ಆರಾಧನಾವಿಧಿವಿಧಾನಗಳಲ್ಲಿ ಮಾಡುವ ಕೆಲವು ಕ್ರಮಗಳು ಇವು : ಸಕಲೀಕರಣವಿಧಿ, ಯe್ಞÁದೀಕ್ಷಾವಿಧಿ, ಭೂಮಿಶುದ್ಧಿ. ಮಹಾಪುಣ್ಯಾಹವಾಚನ, ನವದೇವತಾಪೂಜೆಗಳು, ಆರಾಧ್ಯದೇವರ ಪೂಜೆ, ಪಂಚಕುಮಾರಪೂಜೆ, ಜಯಾದ್ಯಷ್ಟದೇವಾತಪೂಜೆ, ರೋಹಿಣ್ಯಾದಿಷೋಡಶವಿದ್ಯಾಪೂಜೆ ಮರುದೇವ್ಯಾದಿಚತುರ್ವಿಂಶತಿಜಿನಮಾತೃಪೂಜೆ, ಭವನೇಂದ್ರಪೂಜೆ, ವ್ಯಂತರೇಂದ್ರಪೂಜೆ, ಜ್ಯೋತಿಷ್ಯೇಂದ್ರಪೂಜೆ, ಕಲ್ಪೇಂದ್ರಪೂಜೆ, ತಿಥಿದೇವತಾಪೂಜೆ, ನವಗ್ರಹಪೂಜೆ, ಚತುರ್ವಿಂಶತಿಯಕ್ಷಪೂಜೆ, ಅಷ್ಟದಿಕ್ಕನ್ಯುಕಾಪೂಜೆ, ದಿಕ್ಪಾಲಕಪೂಜೆ, ದ್ವಾರಪಾಲಕರ ಪೂಜೆ, ವಿಜಯಾದಿ ದಿಗ್ವಾಸಿಯಕ್ಷ ಪೂಜೆ, ಅನಾವೃತಯಕ್ಷಪೂಜೆ, ಅಷ್ಟಾಶೀತಿಪರಿವಾರದೇವತೆಗಳ ಪೂಜೆ.

ನವದೇವತೆಗಳ ಮತ್ತು ತೀರ್ಥಂಕರರ ಪೂಜೆಗಳನ್ನು ಆಹ್ವಾನ, ಸ್ಥಾಪನಾ, ಸನ್ನಧೀಕರಣ, ಪೂಜೆ ಮತ್ತು ವಿಸರ್ಜನಗೆಳೆಂಬ ಪಂಚೋಪಚಾರಗಳಿಂದ ಇಲ್ಲವೇ ಏಕಾದಶಿ ವಿಧಿಯಿಂದ ಮಾಡಬೇಕು. ಏಕಾದಶವಿಧಪೂಜೆಗಳು ಹೀಗಿವೆ : 1 ಆಹ್ವಾನ, 2 ಸ್ಥಾಪನ, 3 ಸನ್ನಿಧೀಕರಣ, 4 ಜನ, 5 ಗಂಧ, 6 ಅಕ್ಷತೆ, 7 ಪುಷ್ಪ, 8 ಚರು (ನ್ಯವೇದ್ಯ), 9 ದೀಪ, 10 ಧೂಪ, 11 ಫಲ ಅಥವಾ ಜಲಗಂಧಾದಿ ಅಷ್ಟವಿಧಾರ್ಚನೆ, ಅಘ್ರ್ಯ, ಶಾಂತಿಧಾರೆ ಮತ್ತು ಪುಷ್ಪಾಂಜಲಿ. ಯಕ್ಷಯಕ್ಷಿಯರ ಪೂಜೆ ಷೋಡಶೋಪಚಾರಗಳಿಂದ ಮಾಡಲ್ಪಡುವುದು. ಷೋಡಶೋಪಚಾರಗಳು ಇವು : 1 ಆಹ್ವಾನ, 2 ಸ್ಥಾಪನ, 3 ಸನ್ನಿಧೀಕರಣ, 4 ಹವಿರ್ದಾನ, 5 ಅಘ್ರ್ಯ, 6 ಪಾದ್ಯ, 7 ಗಂಧ, 8 ಅಕ್ಷತೆ, 9 ಪುಷ್ಪ, 10 ದೀಪ, 11 ಧೂಪ, 12 ಚರು, 13 ಬಲೆ, 14 ಫಲ, 15 ಸ್ವಸ್ತಿಕ, 16 ಯಜ್ಞಭಾಗ.
ಹೀಗೆ ಜೈನಾಚಾರಗಳು ಒಂದು ಕಡೆ ಯತಿಗಳಿಗೂ ಮತ್ತೊಂದು ಕಡೆ ಗೃಹಸ್ಥರಿಗೂ ಉಚಿತವಾದ ಆಚಾರ ವಿಚಾರಗಳನ್ನು ಸಕ್ರಮವಾಗಿ ವಿಧಿಸಿವೆ.								(ಎ.ಎಸ್.ಎಸ್.ಎಚ್.)

V ಜೈನಪುರಾಣಗಳು

	ಜೈನಪುರಾಣಗಳು ವೈದಿಕ ಪುರಾಣಗಳನ್ನೂ ಸ್ಥೂಲವಾಗಿ ಹೋಲಿದರೂ ಸೂಕ್ಷ್ಮದಲ್ಲಿ ಅವುಗಳ ನಡುವೆ ಹಲವು ವ್ಯತ್ಯಾಸಗಳಿವೆ. ಜೈನಪುರಾಣಗಳಿಗೇ ವಿಶಿಷ್ಟವಾದ ಒಂದು ಹಿನ್ನೆಲೆ ಹಾಗೂ ಪರಂಪರೆ ಇದೆ. ಅವು ಬಹುಮಟ್ಟಿಗೆ ಎಲ್ಲ ಸಾಹಿತ್ಯಿಕ ಭಾರತೀಯ ಭಾಷೆಗಳಲ್ಲೂ ಕಂಡುಬರುತ್ತವೆ. ಜೈನಪುರಾಣ ಸಾಹಿತ್ಯದ ಮೂಲ ಜೈನಾಗಮಗಳಲ್ಲಿದೆ. ಅದರಿಂದ ಜೈನಪುರಾಣಗಳನ್ನು ಜಿನಾಗಮಗಳೆಂದೂ ಕರೆಯುತ್ತಾರೆ. ಜೈನಾಪುರಾಣಗಳಲ್ಲಿ ಇತಿಹಾಸ ಹಾಗೂ ಕಲ್ಪನೆ ಜೊತೆಯಾಗಿ ಬೆರೆತಿವೆ. ರಾಮಾಯಣ ಮಹಾಭಾರತಗಳ ಕಥೆಗಳೂ ಅಲ್ಲಿ ತೆಕ್ಕೆ ಹಾಕಿಕೊಂಡಿವೆ. ಮುನಿಸುವವ್ರತ ತೀರ್ಥಂಕರನ ಪುರಾಣದಲ್ಲಿ ರಾಮಾಯಣದ ಕಥೆಯೂ ನೇಮಿನಾಥ ತೀರ್ಥಂಕರನ ಪುರಾಣದಲ್ಲಿ ಮಹಾಭಾರತದ ಕಥೆಯೂ ಬೆರೆತುಕೊಂಡಿವೆ. ಜೈನಪುರಾಣಗಳ ಹೇಳಿಕೆಯಂತೆ ರಾವಣ ಮತ್ತು ಕೃಷ್ಣ ಭವಿಷ್ಯತ್ ಕಾಲದ ತೀರ್ಥಂಕರರಾಗುತ್ತಾರೆ.

	ಇಪ್ಪತ್ತುನಾಲ್ಕನೆಯ ತೀರ್ಥಂಕರನಾದ ಮಹಾವೀರ ಕ್ರಿ. ಪೂ. 527ರಲ್ಲಿ ನಿರ್ವಾಣಹೊಂದಿದ. ಧವಳಾಗ್ರಂಥದ ಕರ್ತೃ ವೀರಸೇನ ಹೇಳಿರುವಂತೆ, ಮಹಾವೀರನ ಪ್ರಧಾನ ಶಿಷ್ಯ ಗಣಧರ ಇಂದ್ರಭೂತಿಗೌತಮ. ಆತ ತನ್ನ ಆಚಾರ್ಯನ ಜೀವನ ಬೋಧನ ದರ್ಶನ ಕುರಿತು ವ್ಯವಸ್ಥಿತ ಸಂಕಲನಕ್ಕಾಗಿ ಪ್ರಯತ್ನಿಸಿದ. ತೀರ್ಥಂಕರ ಬೋಧಿಸಿದ ಎಲ್ಲ ವಿಷಯವನ್ನೂ 12 ಅಂಗಗಳಲ್ಲಿ ಸಂಗ್ರಹಿಸಲಾಗಿದೆ. ಅವನ್ನು ದ್ವಾದಶಾಂಗ ಅಥವಾ ದ್ವಾದಶ ಗಣಿಪಿಟಕ ಎಂದು ಕರೆಯುವರು. ಅವುಗಳಲ್ಲಿ 12ನೆಯ ಅಂಗ ದೃಷ್ಟಿವಾದ. ಈ ದೃಷ್ಟಿವಾದದಲ್ಲಿನ ಒಂದು ಭಾಗ ಪ್ರಥಮಾನುಯೋಗ. ಎಲ್ಲ ತೀರ್ಥಂಕರರ ಚಕ್ರವರ್ತಿಗಳ ಮತ್ತು ಇತರ ಶಲಾಕಾಪುರುಷರ ವಂಶಾವಳಿಯ ವಿವರವೂ ಪ್ರಥಮಾನುಯೋಗದಲ್ಲಿದೆ. ಈ ಅನುಯೋಗಗಳಿಗೆ ಹೆಚ್ಚಿನ ಮಹತ್ತ್ವವಿದೆ. ಏಕೆಂದರೆ ಜೈನಪುರಾಣ, ಧರ್ಮ, ಶಾಸ್ತ್ರ, ಸಾಹಿತ್ಯಗಳಿಗೆ ಮೂಲಸೆಲೆ ಅನುಯೋಗಗಳು. ಇವು ಜೈನಾಗಮದ ಭಾಗಗಳು. ಇವು. ಸಂಖ್ಯೆಯಲ್ಲಿ ನಾಲ್ಕು: ಪ್ರಥಮಾನುಯೋಗ ಕರಣನುಯೋಗ ಚರಣಾನುಯೋಗ ಮತ್ತು ದ್ರವ್ಯಾನುಯೋಗ. ಅದರಿಂದ ಇವನ್ನು ಅನುಯೋಗಚತುಷ್ಟಯವೆಂದು ಕರೆಯುತ್ತಾರೆ. ಅನುಯೋಗಚತುಷ್ಟಯಕ್ಕೆ ಜನಪ್ರಿಯವಾದ ಆ ಹೆಸರು ಶ್ರುತಸ್ಕಂದ ಎಂಬುದು. ಮುಖ್ಯವಾಗಿ ಜೈನಪುರಾಣಗಳಿಗೆ ನೇರವಾದ ಮೂಲ ಪ್ರಥಮಾನುಯೋಗವಾದರೂ ಶ್ರತಸ್ಕಂದದ ಬಹುಮಟ್ಟಿನ ಸಾರಾಂಶ ಸಂಗ್ರಹರೂಪದಲ್ಲಿ ಪ್ರತಿಯೊಂದು ಜೈನಪುರಾಣದಲ್ಲೂ ಕಂಡು ಬರುತ್ತದೆ. ಏಕೆಂದರೆ ಜೈನಪುರಾಣಗಳ ಪ್ರಾರಂಭದಲ್ಲಿ ಜೈನಧರ್ಮದ ಕಲ್ಪನೆಗೆ ಅನುಸಾರವಾಗಿ ಲೋಕಕಾರಕಥನವಿರುತ್ತದೆ. ಇದರ ಮೂಲವನ್ನು ಕರಣಾನುಯೋಗದಲ್ಲಿ ಕಾಣಬಹುದು; ಜೈನಮುನಿಗಳ ಹಾಗೂ ಗೃಹಸ್ಥರ ಆಚಾರಾದಿಗಳ ವರ್ಣನೆ ಬರುತ್ತದೆ. ಇದನ್ನು ಚರಣಾನುಯೋಗದಲ್ಲಿ ಕಾಣಬಹುದು; ಜೀವ ಅಜೀವಾದಿ ತತ್ತ್ವದ ವರ್ಣನೆ ಬರುತ್ತದೆ. ಇದನ್ನು ದ್ರವ್ಯಾನುಯೋಗದಲ್ಲಿ ಕಾಣಬಹುದು.

	ಜೈನಪುರಾಣಗಳು ಒಂದು ಪರಂಪರೆಯನ್ನು ಅನುಸರಿಸಿ ಬೆಳೆದು ಬಂದಿವೆ. ಈ ಪುರಾಣಗಳಿಗೆ ಮಾದರಿ ಮಹಾಪುರಾಣ. ಬಹುಹಿಂದಿನಿಂದಲೂ ಜೈನಕವಿಗಳು ಮಹಾಪುರಾಣವನ್ನು ರಚಿಸುತ್ತ ಬಂದಿದ್ದಾರೆ. ಮೊದಲು ಮಹಾಪುರಾಣವನ್ನು ಯಾರು ಯಾವ ಭಾಷೆಯಲ್ಲಿ ಬರೆದರೋ ಖಚಿತವಾಗಿ ತಿಳಿಯದು. ಈಗ ಗೊತ್ತಾಗಿರುವಂತೆ ಕೂಚಿಭಟ್ಟಾರಕ ಮತ್ತು ನಂದಿಮುನೀಶ್ವರ ವಿರಚಿತ ಮಹಾಪುರಾಣ ಪ್ರಾಚೀನವಾದುದು; ಆಮೇಲೆ ಸುಮಾರು ಆರನೆಯ ಶತಮಾನದ ಆರಂಭದಲ್ಲಿದ್ದ ಕವಿಪರಮೇಶ್ವರನ ತ್ರಿಷಷ್ಟಿಶಲಾಕಪುರುಷಪುರಾಣ ರಚಿತವಾಯಿತು-ಇವು ಯಾವುವೂ ದೊರೆತಿಲ್ಲ. ಉಪಲಬ್ದ ಪ್ರಾಚೀನ ಜೈನಪುರಾಣವೆಂದರೆ, ಕವಿಪರಮೇಶ್ವರನ ಪುgಣಾಧಾರದಿಂದ ಜಿನಸೇನಮುನಿ ಬರೆದ ಮಹಾಪುರಾಣ.

	ಜಿನಸೇನ 814ರಿಂದ 877ರವರೆಗೆ ಕನ್ನಡವನ್ನು ಆಳಿದ ರಾಷ್ಟಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನ ರಾಜಗುರು. ಜಿನಸೇನ ಮುನೀಶ್ವರನ ಮಹಾಪುರಾಣರಚನೆ ಪೂರ್ವಭಾಗಕ್ಕೆ 47 ಪರ್ವಗಳಿಗೆ, ಅಂದರೆ ಆದಿಪುರಾಣಕ್ಕೇ ನಿಂತುಹೋಯಿತು. ಅದರಿಂದ ಅದನ್ನು ಪೂರ್ವಪುರಾಣವೆನ್ನುತ್ತಾರೆ. ಕನ್ನಡದ ಆದಿಕವಿ ಪಂಪನ ಆದಿಪುರಾಣಕ್ಕೆ ಇದೇ ಆಧಾರ. ಪೂರ್ವಪುರಾಣದ ಉಳಿದರ್ಧವನ್ನು, 47 ರಿಂದ 76ನೆಯ ಪರ್ವದವರೆಗೆ, ಅಂದರೆ ಅದರ ಉತ್ತರಭಾಗವನ್ನು ಜಿನಸೇನನ ಶಿಷ್ಯನಾದ ಗುಣಭದ್ರಾಚಾರ್ಯ 899ರಲ್ಲಿ (ಈಗಿನ) ಬಂಕಾಪುರದಲ್ಲಿ ಬರೆದು ಮುಗಿಸಿದ. ಇದರಲ್ಲಿ ಉಳಿದ 23 ಜನ ತೀರ್ಥಂಕರರ ಮತ್ತು ಇತರ ಶಲಾಕಾಪುರುಷರ ಪುರಾಣ ಬರುತ್ತದೆ. ಆದಿಪುರಾಣವನ್ನು ಬಿಟ್ಟರೆ ಉಳಿದೆಲ್ಲ ಕನ್ನಡ ಜೈನಪುರಾಣಗಳಿಗೂ ಇದೇ ಆಕರ.

	ರಾಷ್ಟ್ರಕೂಟ ಚಕ್ರವರ್ತಿಗಳಲ್ಲೊಬ್ಬನಾದ ಮುಮ್ಮಡಿ ಕೃಷ್ಣನ ಆಳ್ವಿಕೆಯ ಕಾಲದಲ್ಲಿ ಪುಷ್ಪದಂತ ಮಹಾಕವಿ ಅಪಭ್ರಂಶ ಭಾಷೆಯಲ್ಲಿ ತ್ರಿಸಟ್ಠಿಮಹಾಪುರಿಸ ಗುಣಾಲಂಕಾರು ಅಥವಾ ಮಹಾಪುರಾಣ ಎಂಬ ಮಹಾಕಾವ್ಯವನ್ನು 975ರಲ್ಲಿ ರಚಿಸಿದ. ಇದು 102 ಸಂಧಿಗಳ ಬೃಹತ್ ಕಾವ್ಯ. 12ನೆಯ ಶತಮಾನದಲ್ಲಿ ಹೇಮಚಂದ್ರ ಹತ್ತು ಪರ್ವಗಳ ತ್ರಿಷಷ್ಟಿಶಲಾಕಾಪುರುಷಚರಿತವನ್ನು ರಚಿಸಿದ. ಜಿನಸೇನ ಗುಣಭದ್ರ ಪಂಪ ಪುಷ್ಪದಂತ ಹೇಮಚಂದ್ರ-ಇವರ ಕೃತಿಗಳು ಆದರ್ಶ ಜೈನ ಪುರಾಣಗಳೆಂದು ಖ್ಯಾತಿಪಡೆದಿವೆ. ಪೂರ್ವಪುರಾಣ ಉತ್ತರಪುರಾಣಗಳೆರಡೂ ಸೇರಿ ಆದ ಸಂಸ್ಕøತ ಮಹಾಪುರಾಣದ ಸಾರವನ್ನು ಕನ್ನಡ ಗದ್ಯದಲ್ಲಿ ಚಾವುಂಡರಾಯ ಹತ್ತನೆಯ ಶತಮಾನದಲ್ಲಿ ರಚಿಸಿಕೊಟ್ಟಿದ್ದಾನೆ. ತ್ರಿಷಷ್ಟಿಲಕ್ಷಣಮಹಾಪುರಾಣವೆಂದು ಅದರ ಹೆಸರು. ಚಾವುಂಡರಾಯಪುರಾಣವೆಂಬುದು ರೂಢಿಯ ಹೆಸರು.

	ಜೈನಪುರಾಣಗಳಿಗೆ ತ್ರಿಷಷ್ಟಿಶಿಲಾಕಾಪುರುಷಚರಿತೆಯೆಂದು ಕರೆಯುವುದರಲ್ಲಿ ಔಚಿತ್ಯವಿದೆ. ಜೈನಧರ್ಮದಲ್ಲಿ 63 ಜನ ಮಹಾತ್ಮರು ಆಗಿಹೋಗಿದ್ದಾರೆ. ಆ ಮಹಾಪುರುಷರನ್ನು ಶಲಾಕಾಪುರುಷರೆಂದು ಕರೆಯುತ್ತಾರೆ. ಅವರಲ್ಲಿ 24 ಜನ ತೀರ್ಥಂಕರರು, 12 ಜನ ಚಕ್ರವರ್ತಿಗಳು, ಒಂಬತ್ತು ಬಲ(ಭದ್ರ)ದೇವರು ಒಂಬತ್ತು ಜನ ವಾಸುದೇವರು (ನಾರಾಯಣರು) ಮತ್ತು ಒಂಬತ್ತು ಜನ ಪ್ರತಿ ವಾಸುದೇವರು (ಪ್ರತಿನಾರಾಯಣರು) ಬರುತ್ತಾರೆ. ಅವರುಗಳ ಹೆಸರುಗಳು ಇವು. ಋಷಭ ಅಜಿತ ಸಂಭವ ಅಭಿನಂದನ ಸುಮತಿ ಪದ್ಮಪ್ರಭ ಸುಪಾಶ್ರ್ವ ಚಂದ್ರಪ್ರಭ ಪುಷ್ಪದಂತ ಶೀತಲ ಶ್ರೇಯಾಂಸ ವಾಸುಪೂಜ್ಯ ವಿಮಲನಾಥ ಅನಂತನಾಥ ಧರ್ಮನಾಥ ಶಾಂತಿನಾಥ ಕುಂಥುನಾಥ ಅರ(ಹ)ನಾಥ ಮಲ್ಲಿನಾಥ ಮುನಿಸುವ್ರತ ನಮಿನಾಥ ಪಾಶ್ರ್ವನಾಥ ಮಹಾವೀರ-ಇವರು ತೀರ್ಥಂಕರರು. ಭರತ ಸಗರ ಮಘವಾ ಸನತ್ಕುಮಾರ ಶಾಂತಿನಾಥ ಕುಂಥುನಾಥ ಅರನಾಥ ಸುಭೌಮ ಪದ್ಮನಾಭ ಹರಿಷೇಣ ಜಯಸೇನ ಬ್ರಹ್ಮದತ್ತ-ಇವರು ಚಕ್ರವರ್ತಿಗಳು. ತ್ರಿಪಿಷ್ಟ ದ್ವಿಪಿಷ್ಟ ಸ್ವಯಂಭೂ ಪುರುಷೋತ್ತಮ ನರಸಿಂಹ ಪುಂಡರೀಕ ದತ್ತದೇವ ಲಕ್ಷ್ಮಣ ಕೃಷ್ಣ-ಇವರು ವಾಸುದೇವರು. ಅಶ್ವಗ್ರೀವ ತಾರಕ ಮೇರಕ ನಿಷುಂಭ ಮಧುಕೈಟಭ ಪ್ರಹ್ಲಾದ ಬಲೀ ರಾವಣ ಜರಾಸಂಧ ಇವರು ಪ್ರತಿವಾಸುದೇವರು. 

	ಇವರಲ್ಲದೆ ಭೂತಕಾಲದ ತೀರ್ಥಂಕರರೂ ಭವಿಷ್ಯತ್‍ಕಾಲದ ತೀರ್ಥಂಕರರೂ ಉಂಟು. ಆದರೆ ಅವರನ್ನು ಕುರಿತು ಬರೆದ ಜೈನಪುರಾಣಗಳು ದೊರೆತಿಲ್ಲ. ಜೈನಪುರಾಣಗಳಲ್ಲಿ 24 ಜನ ಕಾಮದೇವರು ಬೇರೆ ಬರುತ್ತಾರೆ. ಬಾಹುಬಲಿ ಹನುಮಂತ ನಾಗಕುಮಾರ ಜೀವಂಧರ ಮೊದಲಾದವರು ಕಾಮದೇವರು. ಶಾಂತಿನಾಥ ಕುಂಥುನಾಥ ಮತ್ತು ಅರನಾಥ ಎಂಬ ಮೂವರು ಮಾತ್ರ ತೀರ್ಥಂಕರರೂ ಚಕ್ರವರ್ತಿಗಳೂ ಕಾಮದೇವರೂ ಆಗಿದ್ದಾರೆ. ಇವರು ತೀರ್ಥಂಕರರೂ ಚಕ್ರವರ್ತಿಗಳೂ ಆಗಿರುವುದರಿಂದ ಶಲಾಕಾಪುರಷರ ಸಂಖ್ಯೆ ವಾಸ್ತವವಾಗಿ 60 ಆಗುತ್ತದೆ. ಈ ಶಲಾಕಾಪುರಷರಲ್ಲಿ ಒಬ್ಬೊಬ್ಬರನ್ನೊ ಕೆಲವರನ್ನೊ ಆರಿಸಿಕೊಂಡು ಬರೆದ ಜೈನಪುರಾಣಗಳೇ ಕನ್ನಡದಲ್ಲಿ ಹೆಚ್ಚು. ಸಾಮಾನ್ಯವಾಗಿ ಒಂದು ಪುರಾಣದಲ್ಲಿ ಒಬ್ಬ ತೀರ್ಥಂಕರ, ಒಬ್ಬ ಚಕ್ರವರ್ತಿ, ಆ ಕಾಲದಲ್ಲಿದ್ದ ಒಬ್ಬ ವಾಸುದೇವ, ಪ್ರತಿವಾಸುದೇವ ಮತ್ತು ಬಲದೇವ, ಕಾಮದೇವ-ಇಷ್ಟು ವ್ಯಕ್ತಿಗಳ ಸಂಗತಿಗಳು ಪ್ರಮುಖವಾಗಿ ಕಂಡುಬರುತ್ತವೆ.

	ಕನ್ನಡದಲ್ಲಿ ವಿವಿಧ ಛಂದಸ್ಸಿನಲ್ಲಿ, ರಚಿತವಾಗಿರುವ ಕೆಲವು ಜೈನಪುರಾಣಗಳು ಇವು : ಪಂಪನ ಆದಿಪುರಾಣ, ಪೊನ್ನನ ಶಾಂತಿಪುರಾಣ, ರನ್ನನ ಅಜಿತಪುರಾಣ, ಚಾವುಂಡರಾಯನ ಚಾವುಂಡರಾಯಪುರಾಣ, ನಾಗವರ್ಮನ ವರ್ಧಮಾನಪುರಾಣ, ನಾಗಚಂದ್ರನ ಮಲ್ಲಿನಾಥಪುರಾಣ, ಕರ್ಣಪಾರ್ಯನ ನೇಮಿನಾಥಪುರಾಣ, ನೇಮಿಚಂದ್ರನ ಅರ್ಧನೇಮಿಪುರಾಣ, ಅಗ್ಗಳನ ಪಹರಿವಂಶಭ್ಯುಪುರಾಣ, ಆಚಣ್ಣನ ವರ್ಧಮಾನಪುರಾಣ, ಬಂಧುವರ್ಮನ ಹರಿವಂಶಾಭ್ಯುದಯ, ಪಾಶ್ರ್ವಪಂಡಿತನ ಪಾಶ್ರ್ವನಾಥಪುರಾಣ ಜನ್ನನ ಅನಂತನಾಥಪುರಾಣ, ಇಮ್ಮಡಿ ಗುಣವರ್ಮನ ಪುಷ್ಪದಂತಪುರಾಣ, ಕಮಲಭವನ ಶಾಂತೀಶ್ವರಪುರಾಣ, ಮಹಾಬಲನ ನೇಮಿನಾಥಪುರಾಣ, ಹಸ್ತಿಮಲ್ಲನ ಆದಿಪುರಾಣ, ಬಾಹುಬಲಿ ಪಂಡಿತನ ಧರ್ಮನಾಥಪುರಾಣ, ಮಧುರಕವಿಯ ಧರ್ಮನಾಥಪುರಾಣ, ಮೂರನೆಯ ಮಂಗರಸನ ನೇಮಿಜಿನೇಶಸಂಗತಿ, ಶಾಂತಿಕೀರ್ತಿಮುನಿಯ ಶಾಂತಿ ನಾಥಚರಿತೆ, ಪದ್ಮಕವಿಯ ವರ್ಧಮಾನಚರಿತೆ, ದೊಡ್ಡಯ್ಯನ ಚಂದ್ರಪ್ರಭಚರಿತೆ, ದೊಡ್ಡಣಾಂಕನ ಚಂದ್ರಪ್ರಭಷಟ್ಟದಿ. ಈ ಎಲ್ಲ ಕನ್ನಡ ಜೈನಪುರಾಣಗಳಿಗೂ ಸಂಸ್ಕøತ ಪ್ರಾಕೃತ (ಮತ್ತು ಕನ್ನಡ) ತೀರ್ಥಂಕರಪುರಾಣಗಳೇ ಆಕರಗಳು. ಇವು ನೇರವಾಗಿ ತೀರ್ಥಂಕರಪುರಾಣಗಳು. ಇವಲ್ಲದೆ ಭರತೇಶವೈಭವದಂಥ ಇತರ ಶಲಾಕಾಪುರಷರನ್ನು ಕುರಿತ ಹಾಗೂ ನಾಗಕುಮಾರಚರಿತೆ ಜೀವಂಧರ ಚರಿತೆಯಂಥ ಇತರ ಕಾಮದೇವರನ್ನು ಕುರಿತ ಜೈನಪುರಾಣಗಳೂ ಕನ್ನಡದಲ್ಲಿ ರಚಿತವಾಗಿವೆ.

	ಪೂರ್ವಪುರಾಣದಲ್ಲಿ ಜಿಸೇನಾಚಾರ್ಯನೂ ಆದಿಪುರಾಣದಲ್ಲಿ ಪಂಪನೂ ಜೈನಪುರಾಣಗಳಿಗೆ ಎಂಟು ಅಂಗಗಳನ್ನು ಹೇಳಿದ್ದಾರೆ: ಲೋಕಾಕಾರಕಥನ, ದೇಶನಿವೇಶೋಪದೇಶ, ನಗರಸಂಪತ್ಪರಿವರ್ಣನೆ, ರಾಜ್ಯರಾಮಣೀಯಕಾಖ್ಯಾನ, ತೀರ್ಥ ಮಹಿಮಾಸಮರ್ಥನ, ಚತುರ್ಗತಿಸ್ವರೂಪನಿರೂಪಣ, ತಪೋದಾನವರ್ಣನ, ತತ್ಪಲಪ್ರಾಪ್ತಿಪ್ರಕಟನ. ಇವು ಜೈನಪುರಾಣದ ಬಾಹ್ಯ ಅವಯವಗಳು. ಈ ಅಷ್ಟಾಂಗಗಳು ಕ್ರಮವಾಗಿ ಜೈನಲೋಕಗಳ ಉದ್ದಳತೆಗಳನ್ನೂ ಆಕಾರಗಳನ್ನೂ ಜಂಬೂದ್ವೀಪ ಮೇರುಪರ್ವತ ವಿದೇಹಕ್ಷೇತ್ರ ಅಲ್ಲಿನ ನದಿಗಳನ್ನೂ ಅಲಕಾಪುರ ಅಯೋಧ್ಯಾಪುರ ಮೊದಲಾದ ನಗರಗಳನ್ನೂ ರಾಜರಾಣಿ ರಾಜ್ಯದ ವರ್ಣನೆಯನ್ನೂ ಮೇರುಪರ್ವತದಲ್ಲಿನ ಭದ್ರಕಾಲವನದಿಂದ ಪಾಂಡುಕವನದಲ್ಲಿರುವ ಜೈನಚೈತ್ಯಾಲಯಗಳ ದರ್ಶನ ಜಿನಪೂಜೆ ವರ್ಣನೆಯನ್ನೂ ದೇವನಾರಕ ಮನುಷ್ಯ ತಿರ್ಯಕ್ ಗತಿಗಳ ವರ್ಣನೆಯನ್ನೂ ತಪೋದಾನಗಳ ವರ್ಣನೆಯನ್ನೂ ಅವುಗಳ ಫಲವೇನಾಯಿತೆಂಬುದರ ವರ್ಣನೆಯನ್ನೂ ಮಾಡುತ್ತವೆ.

	ಜೈನಪುರಾಣದ ನಿರೂಪಣೆಯಲ್ಲೂ ಒಂದು ಪರಂಪರಾಗತ ಕ್ರಮವಿದೆ. ಪುರಾಣ ಮೊದಲ ಐದು ಪದ್ಯಗಳಲ್ಲಿ ಕ್ರಮಾವಾಗಿ ತೀರ್ಥಂಕರರು ಸಿದ್ಧರು ಆಚಾರ್ಯರು ಉಪಾಧ್ಯಾಯರು ಸರ್ವಸಾಧುಗಳು-ಇವರ ಪ್ರಾರ್ಥನೆಯಿರುತ್ತದೆ. ಆಮೇಲೆ ಪ್ರತಿಯೊಬ್ಬ ತೀರ್ಥಂಕರನಿಗೂ ಇರುವ ಯಕ್ಷಯಕ್ಷಿಯರ ಸ್ತೋತ್ರವಿರುತ್ತದೆ. ಅನಂತರ ಲೋಕಾಕಾರಕಥನ, ಕಥಾನಾಯಕನ ತಂದೆತಾಯಿಗಳ ವರ್ಣನೆ-ಹೀಗೆ ಮುಂದುವರಿಯುತ್ತದೆ. ತೀರ್ಥಂಕರನ ಜನನದ ಮೊದಲು ಆತನ ತಾಯಿಗೆ ಹದಿನಾರು ಶುಭಸ್ವಪ್ನಗಳು ಬೀಳುತ್ತವೆ. ಉದಾಹರಣೆಗೆ ಆದಿತೀರ್ಥಂಕರನಾದ ಋಷಭದೇವನ ತಾಯಿ ಮರುದೇವಿ ಕಂಡ 16 ಸ್ವಪ್ನಗಳು; ಆನೆ ಎತ್ತು ಸಿಂಹ ಲಕ್ಷ್ಮಿ ರತ್ನಮಾಲ ಚಂದ್ರ ಸೂರ್ಯ ಮೀನು ಕುಂಭದ್ವಯ ಕೆರೆ ಸಮುದ್ರ ವಿಮಾನ ನಾಗೇಂದ್ರಗೃಹ ರತ್ನದ ರಾಶಿ ಮಸ್ತು ಅಗ್ನಿ ಜ್ವಾಲೆ.

	ಜೈನಪುರಾಣಗಳಲ್ಲಿ ತಪ್ಪದೆ ಬರುವ ಅಂಶಗಳಲ್ಲಿ ಗಮನಾರ್ಹವಾದುದು ತೀರ್ಥಂಕರನ ಪಂಚಕಲ್ಯಾಣಗಳು: ಗರ್ಭಾವತರಣಕಲ್ಯಾಣ (ಗರ್ಭಾವತರೋತ್ಸವ), ಜನ್ಮಾಭಿಷೇಕಕಲ್ಯಾಣ (ಜನ್ಮಾಭಿಷೇಕೋತ್ಸವ), ಪರಿನಿಷ್ಕ್ರಮಣ ಕಲ್ಯಾಣ (ಪರಿಷ್ಕ್ರಮಣೋತ್ಸವ), ಕೇವಲe್ಞÁನೋತ್ಪತ್ತಿಕಲ್ಯಾಣ (ಕೈವಲ್ಯ ಬೋಧೋತ್ಸವ), ಪರಿನಿರ್ವಾಣಕಲ್ಯಾಣ (ನಿರ್ವಾಣೋತ್ಸವ). ಈ ಶಬ್ದಗಳು ಅನ್ವರ್ಥಕಗಳೂ ಆಗಿರುವುದರಿಂದ ಹೆಚ್ಚಿನ ವಿವರಣೆ ಅನಗತ್ಯ. ತಾಯಿಯ ಗರ್ಭಕ್ಕೆ ತೀರ್ಥಂಕರ ಜೀವ ಬರುವ ಮೊದಲು ಸಮ್ಯಕ್ತ್ವಾದಿ ಷೋಡಶ ಭಾವನೆಗಳನ್ನು ಭಾವಿಸಿ ತೀರ್ಥಂಕರ ಪುಣ್ಯ ಕಟ್ಟಿಕೊಂಡು ಬರುತ್ತದೆ. ಗರ್ಭಾವತರಣದ ವೇಳೆಗೆ ಆ ಜೀವನ ಬೀಳೇಳುಗಳೆಲ್ಲ ಮುಗಿದು ಭವಾವಳಿಗೆ ಒಂದು ನಿಲುಗಡೆ ಬಂದಿರುತ್ತದೆ. ಈ ಗರ್ಭಾವತರಣಕ್ರಿಯೆಯ ಪೂರ್ವದ ಭವ ಅಹಮಿಂದ್ರತ್ವ. ತಾಯಿಯ ಗರ್ಭ ಶುದ್ಧಿಯಾದ ಮೇಲೆ ತೀರ್ಥಂಕರ ಜೀವ ಸೇರುತ್ತದೆ.

	ಜನ್ಮಾಭಿಷೇಕದಲ್ಲಿ ದೇವೇಂದ್ರ ಸಪರಿವಾರನಾಗಿ ಬಂದು ಸಡಗರಿಸುತ್ತಾನೆ. ಜೈನಪುರಾಣಗಳಲ್ಲಿ ದೇವೇಂದ್ರಾದಿ ದೇವತೆಗಳು ತೀರ್ಥಂಕರನ ಅಭ್ಯುದಯದಲ್ಲಿ ಆನಂದಿಸುತ್ತಾರೆ. ಜೈನೇತರ ಪುರಾಣಗಳಲ್ಲಿ ಬರುವಂತೆ ಇವರು ಜೀವದ ತಪಾದಿ ಶುಭಚಿಂತನೆಗೂ ಊಧ್ರ್ವಗಮನಕ್ಕೂ ಅಡ್ಡಿ ಒಡ್ಡುವುದಿಲ್ಲ. ಪರಿನಿಷ್ಕ್ರಮಣ ಒಂದು ಸ್ವಾರಸ್ಯವಾದ ಭಾಗ. ಭೋಗದಲ್ಲಿ ಮೈ ಮುಳುಗಿದ ಜೀವಕ್ಕೆ ಈ ಹಂತದಲ್ಲಿ ಎಚ್ಚರಿಸುವ ಕಾರ್ಯ ನಡೆಯುತ್ತದೆ. ಆದಿದೇವನಲ್ಲಿ ಈ ರೀತಿ ವೈರಾಗ್ಯ ಭಾವ ಉದ್ದೀಪಿಸಲು ದೇವೇಂದ್ರ ನೀಲಾಂಜನೆಯ ನರ್ತನ ಏರ್ಪಡಿಸಿದ. ಉಳಿದ ತೀರ್ಥಂಕರರೂ ಉಲ್ಕಾಪಾತ, ನರೆಗೂದಲು, ಕರಗುವ ಮೋಡ ಮೊದಲಾದ ಕ್ಷಣಭಂಗುರ ಪ್ರಸಂಗ ನೋಡಿ ವಿರಾಗಿಗಳಾಗಿ ರಾಜ್ಯ ತೊರೆದು ತಪಸ್ಸಿಗೆ ತೆರಳುತ್ತಾರೆ.

	ಕೇವಲe್ಞÁನಪ್ರಾಪ್ತಿಗಾಗಿ ಸರ್ವಜ್ಞತ್ವ ಪಡೆದ ತೀರ್ಥಂಕರನ ಧರ್ಮಬೋಧೆಗೆ ಸಮವಸರಣ ನಿರ್ಮಾಣವಾಗುತ್ತದೆ. ಸಮವಸರಣವನ್ನು ಇಂದ್ರನ ಅಪ್ಪಣೆ ಮೇರೆಗೆ ಕುಬೇರ ನಿರ್ಮಿಸುತ್ತಾನೆ. ಅಲ್ಲಿ ಧರ್ಮೋಪದೇಶ ಕೇಳಲು ದೇವಮಾನವ ತೀರ್ಯಕ್ ನಾರಕಿ-ಹೀಗೆ ಸಕಲ ಭವ್ಯಜೀವಿಗಳಿಗೆ ಅವಕಾಶವಿರುತ್ತದೆ. ಇದರ ಮೇಲ್ಗಡೆ ಗಂಧಕುಟಿಯಿರುತ್ತದೆ. ಅಲ್ಲಿ ಸಿಂಹಾಸನವೂ ಅದರ ಮೇಲೊಂದು ಕಮಲವೂ ಇರುತ್ತದೆ. ಕಮಲದ ಮೇಲೆ ನಾಲ್ಕು ಬೆರಳು ಅಂತರದಲ್ಲಿ ವಿರಾಜಮಾನನಾದ ತೀರ್ಥಂಕರ ಧರ್ಮೋಪದೇಶ ಮಾಡುತ್ತಾನೆ. ಅದು ದಿವ್ಯಧ್ವನಿರೂಪದಲ್ಲಿರುತ್ತದೆ. ದಿವ್ಯಧ್ವನಿ ಸರ್ವಭಾಷಾಮಯಿ. ಪ್ರತಿಯೊಂದು ಜ್ಯನಪುರಾಣದಲ್ಲಿ ಸಮವಸರಣ ದಿವ್ಯಧ್ಯನಿಯ ಪ್ರಸ್ತಾಪವಿರುತ್ತದೆ.

	ತೀರ್ಥಂಕರನ ದಿವ್ಯಧ್ವನಿಯನ್ನು ಭವ್ಯಜನರಿಗೆ ತೀರ್ಥಂಕರನ ಪ್ರಧಾನ ಶಿಷ್ಯರು ವಿವರಿಸುತ್ತಾರೆ. ಅಂತಿಮ ತೀರ್ಥಂಕರ ಮಹಾವೀರನ ಪ್ರಧಾನ ಗಣಧರ ಇಂದ್ರಭೂತಿಗೌತಮ. ಮಹಾವೀರನ ಪ್ರಥಮ ಧರ್ಮೋಪದೇಶ ಆದದ್ದು ವಿಪುಲಾಚಲದ ಮೇಲೆ. ಅಲ್ಲಿಗೆ ಮಗಧದ ದೊರೆ ಶ್ರೇಣಿಕ ಮಹಾರಾಜನೂ ಶ್ರೋತೃವಾಗಿ ಬಂದಿದ್ದ. ಶ್ರೇಣಿಕ ದೊರೆ ಭಾರತೀಯ ಇತಿಹಾಸದಲ್ಲಿ ಬಿಂಬಸಾರನೆಂಬ ಹೆಸರಿನಿಂದ ಪ್ರಸಿದ್ಧಿಪಡೆದಿದ್ದಾನೆ. ಈ ಶ್ರೇಣಿಕ ಹಾಕಿದ ಅನೇಕ ಪ್ರಶ್ನೆಗಳಿಗೆ ಇಂದ್ರಭೂತಿಗೌತಮಗಣಧರ ಉತ್ತರಗಳನ್ನಿತ್ತ. ಸಮಸ್ತ ಜೈನಪುರಾಣವಾಙ್ಮಯಮೂಲ ಈ ಪ್ರಶ್ನೋತ್ತರಗಳು. ಅದರಿಂದಲೇ ಪ್ರತಿಯೊಂದು ಕನ್ನಡ ಜೈನಪುರಾಣವೂ ಅದು ಯಾವುದೇ ತೀರ್ಥಂಕರನನ್ನು ಕುರಿತು ರಚಿತವಾಗಿರಲಿ, ಮೊದಲು ಶ್ರೇಣಿಕ ರಾಜ ಕೇಳಿದ ಪ್ರಶ್ನೆಗೆ ಇಂದ್ರಭೂತಿಗೌತಮ ಹೀಗೆ ಉತ್ತರಿಸಿದ ಎಂದು ಪ್ರಾರಂಭವಾಗುತ್ತದೆ.

	ಜೈನಪುರಾಣಗಳನ್ನು ಕಾವ್ಯದ ಹಂತಕ್ಕೆ ಏರಿಸಿದ ಭಾಗಗಳೆಂದರೆ ಭವಾವಳಿಗಳು. ಪ್ರತಿಯೊಂದು ಪುರಾಣದಲ್ಲೂ ಇದು ಅನಿವಾರ್ಯವಾಗಿ ಬರುತ್ತದೆ. ಪುರಾಣದ ಪ್ರಮುಖಪಾತ್ರಗಳ ಭವಾವಳಿಯನ್ನು ಕವಿಯೇ ನೇರವಾಗಿ ಹೇಳುವುದು ಒಂದು ವಿಧ. ಆದರೆ ಅನೇಕ ಸಲ ಚಾರಣರೊ ಭಟ್ಟಾರಕರೋ ಜಿನ ಮುನಿಯೊ ರಾಜಕಾರಣಿಯರ ಮಂತ್ರಿ ಸೇನಾಪತಿಗಳ ಭವಾವಳಿಗಳನ್ನು ಹೇಳುತ್ತಾರೆ. ಭವಾವಳಿ ಆತ್ಮವಿಕಾಸಕಥನ.

	ಬಿಡುಗಡೆಯೇ ಇಲ್ಲದೆ ಹುಟ್ಟುಸಾವು ಮರುಹುಟ್ಟು ಮರುಸಾವುಗಳೆಂಬ ಸುಳಿಯಲ್ಲಿ ಸದಾ ಸುತ್ತುವ ಜೀವ ಅಭವ್ಯಜೀವ. ಇಂದಲ್ಲ ನಾಳೆ, ಈ ಭವದಲ್ಲಿ ಅಲ್ಲ ಮುಂದಿನ ಅಥವಾ ಮತ್ತೂ ಮುಂದಿನ ಭವದಲ್ಲಾದರೂ ಸಿದ್ಧಿಪಡೆಯುವ ಸಾಮಥ್ರ್ಯವಿರುವ ಜೀವ ಭವ್ಯಜೀವ. ಎರಡು ಮೂರು ಭವಗಳಲ್ಲೇ ಬೇಗ ಮುಕ್ತಿಗೆ ಅವಕಾಶವಾಗುವ ಜೀವ ಆಸನ್ನಭವ್ಯಜೀವ. ಹತ್ತುಹದಿನ್ಯೆದು ಭವಗಳಲ್ಲಿ ಮುಕ್ತಿಗೆ ಪಾತ್ರವಾಗುವ ಜೀವ ದೂರಭವ್ಯಜೀವ. ಸಂಸಾರದಿಂದ ಸದ್ಗತಿಯ ಕಡೆಗೆ ಜೀವ ಅಭಿಮುಖವಾಗಲು ಕಾಲ ಕೂಡಿಬರಬೇಕು. ಇದಕ್ಕೆ ಜೈನಪುರಾಣಗಳಲ್ಲಿ ಕಾಲಲಬ್ದಿ ಎಂದಿದೆ. ಜೀವಕ್ಕೆ ಈ ಕಾಲಲಬ್ದಿ ಕೂಡಿಬರುವವರೆಗೆ ಜನನಮರಣವೀಚಿಗಳಲ್ಲಿ ತೇಲಿಬರುವ ಜೀವಯಾತ್ರೆಯ ಕಥಾನಕ ಭವಾವಳಿ. ಜೈನಪುರಾಣಗಳು ಈ ಭಾಗದಲ್ಲಿ ಕಲ್ಪನೆಯನ್ನು ಕೂಡಿಸಿಕೊಂಡು ಪುರಾಣಗಳೂ ಕಾವ್ಯಗಳಂತೆ ಹೃದ್ಯವಾಗುವಂತೆ ಮಾಡಿವೆ. ಹಳಗನ್ನಡಸಾಹಿತ್ಯದಲ್ಲಿ ಜೈನಪುರಾಣಗಳು ಪ್ರಮುಖಸ್ಥಾನ ಪಡೆದಿದೆ.
(ಎಚ್.ಪಿ.ಎನ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ